ಹಬ್ಬದ ತಯಾರಿ ಜೋರು | ಹಣ್ಣು ಹಂಪಲು, ಹೂ ಮಾರಾಟ | ಹಣತೆ ಖರೀದಿಸಲು ಮುಗಿಬಿದ್ದ ಜನ

ಸಿಹಿ ತಿಂಡಿಗಳ ಸವಿ, ದೀಪಗಳ ಹೊಳಪು, ಬಂಧುಗಳ ಒಲವು, ಈ ದೀಪಾವಳಿ ನಿಮ್ಮ ಬದುಕಿಗೆ ತರಲಿ ಹೊಸ ಸಂಭ್ರಮದ ಮೆರುಗು…!

ದೀಪಾವಳಿಯ ಶುಭ ಸಂದರ್ಭ ಯಾದಗಿರಿ ಧ್ವನಿ ಡಿಜಿಟಲ್ ಮಾಧ್ಯಮವು 3 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಜೊತೆ ದೀಪಾವಳಿ ಆಚರಣೆ ಮಾಡುತ್ತಿದೆ. ಕತ್ತಲೆ ಕರಗುವಂತೆ ಕಷ್ಟ ಕರಗಲಿ, ದೀಪದ ಬೆಳಕಿನಂತೆ ಸಂತೋಷ ಬರಲಿ ಜೀವನ ಆನಂದವಾಗಿರಲಿ ಎಂದು ಹಾರೈಸುತ್ತೇವೆ….. ಯಾದಗಿರಿ: ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಬೆಳಕಿನ ಹಬ್ಬವು ವಿಷ್ಣುವಿನ ದೈವಿಕ ಪತ್ನಿ ಮತ್ತು ಸಮೃದ್ಧಿ, ಅದೃಷ್ಟ ಮತ್ತು ಧನ, ಧಾನ್ಯದ ಸಾಕಾರಳಾದ ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ದೀಪಗಳನ್ನು ಬೆಳಗುವುದರಿಂದ ಲಕ್ಷ್ಮಿ ದೇವಿಯು ಮನೆಯನ್ನು ಪ್ರವೇಶಿಸುತ್ತಾಳೆ. ಧನಾತ್ಮಕತೆ ಮತ್ತು ಸಮೃದ್ಧಿಯು ಮನೆಯನ್ನು ಸೇರಿಕೊಳ್ಳುತ್ತದೆ ಎನ್ನುವ ನಂಬಿಕೆಯಿದೆ.

ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ದೀಪಾವಳಿ ಹಬ್ಬವು ನಮ್ಮ ಸಮಾಜದಲ್ಲಿ ಒಗ್ಗಟ್ಟು, ಬಾಂಧವ್ಯ ಮತ್ತು ಸೋದರತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲಿ. ಕ್ಷೇತ್ರದ ಪ್ರಗತಿ ನನ್ನ ಮೊದಲ ಆದ್ಯತೆಯಾಗಿದೆ. ಈ ಹಬ್ಬವು ನಿಮ್ಮ ಬಾಳಿನಲ್ಲಿ ಹೊಸ ಉಲ್ಲಾಸವನ್ನು ತರಲಿ, ಸುರಕ್ಷಿತ ಹಾಗೂ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಿ – ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್

ದೀಪಾವಳಿ ಎಂದರೆ, ಕೇವಲ ದೀಪ ಬೆಳಗಿ, ಪೂಜೆ ಮಾಡಿ, ಪಟಾಕಿ ಸಿಡಿಸುವುದು ಅಷ್ಟೇ ಅಲ್ಲ. ಇಂದಿನ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ದಿನಮಾನಗಳಲ್ಲಿ ಪ್ರತಿಯೊಬ್ಬರು ಹಿಂದು ಹಬ್ಬಗಳ ಆಚರಣೆ ಮತ್ತು ಮಹತ್ವ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ.ದೀಪಾವಳಿಯು ಪ್ರಾಚೀನ ಇತಿಹಾಸವನ್ನು ಹೊಂದಿರುವ ಹಬ್ಬಗಳಲ್ಲಿ ಪ್ರಮುಖವಾದುದ್ದಾಗಿದೆ. ರಾಮಾಯಣ ಕಾಲದಿಂದ ಆರಂಭವಾಯಿತೆಂದು ಹೇಳಲಾಗುತ್ತದೆ. ರಾಮ, ಲಕ್ಷ್ಮಣ ಮತ್ತು ಸೀತೆಯು 14 ವರ್ಷಗಳ ವನವಾಸವನ್ನು ಕಳೆದು ನಾಡಿಗೆ ಹಿಂದಿರುಗಿದಾಗ ಜನರು ಸಂತೋಷದಿಂದ ತಮ್ಮ ಮನೆಗಳಲ್ಲಿ ದೀಪವನ್ನು ಬೆಳಗುವ ಮೂಲಕ ಅವರನ್ನು ನಾಡಿಗೆ ಬರಮಾಡಿಕೊಂಡರು ಎಂದು ಹೇಳಲಾಗುತ್ತದೆ. ಅಂದಿನಿಂದ ದೀಪಾವಳಿಯನ್ನು ಆಚರಿಸಲಾಗುತ್ತಿದೆ.

ದಕ್ಷಿಣ ಭಾರತದಲ್ಲಿ ದೀಪಾವಳಿಯು ನರಕಾಸುರನ ಮೇಲೆ ಶ್ರೀಕೃಷ್ಣನ ವಿಜಯವನ್ನು ಸೂಚಿಸುತ್ತದೆ. ಅವನ ಸೋಲು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಪ್ರತಿನಿಧಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ಜಯಿಸಿದ ನಂತರ ಹೊಸ ಆರಂಭವನ್ನು ಸೂಚಿಸುತ್ತದೆ. ಈ ಕಾರಣಕ್ಕಾಗಿ ಈ ದಿನದಂದು ದೀಪವನ್ನು ಬೆಳಗುವ ಸಂಪ್ರದಾಯ ಆರಂಭವಾಯಿತು.ಪ್ರಪಂಚದಾದ್ಯಂತ ಜನರು ಬೆಳಕಿನ ಹಬ್ಬವಾದ ದೀಪಾವಳಿಯನ್ನು ಬಹಳ ಸಂಭ್ರಮ – ಸಡಗರದಿಂದ ಆಚರಿಸುತ್ತಾರೆ. ಪ್ರತಿ ಮನೆಯಲ್ಲೂ ಜನರು ಬೆಲೆಬಾಳುವ ವಸ್ತುಗಳ ಜೊತೆಗೆ ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಪೂಜೆ ಮುಗಿದ ನಂತರ, ಭಕ್ತರು ತಮ್ಮ ನೆರೆಹೊರೆಯವರು ಮತ್ತು ಸ್ನೇಹಿತರಿಗೆ ಸಿಹಿತಿಂಡಿ ಮತ್ತು ಉಡುಗೊರೆಗಳನ್ನು ವಿತರಿಸುತ್ತಾರೆ. ಮಕ್ಕಳು ಮತ್ತು ಹಿರಿಯರು ಪಟಾಕಿಗಳನ್ನು ಸಿಡಿಸುತ್ತಾರೆ, ದೀಪಗಳನ್ನು ಬೆಳಗಿಸುತ್ತಾರೆ.

ಹಬ್ಬದ ತಯಾರಿ ಜೋರು: ಬೆಳಕಿನ ಹಬ್ಬಕ್ಕೆ ಜನ ಜೋರು ತಯಾರಿಯಲ್ಲಿದ್ದಾರೆ. ಪೂಜೆಗೆ ಬೇಕಿರುವ ಹೂ, ಹಣತೆ, ಬಾಳೆ ಗಿಡ, ಕುಂಬಳಕಾಯಿ ಖರೀದಿ ಜೋರಾಗಿದೆ. ಮಳೆ ಕೈಕೊಟ್ಟಿದ್ದು, ಹಬ್ಬದ ಸಂಭ್ರಮ ಕೊಂಚ ಕಡಿಮೆ ಎನಿಸಿದೆ. ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಪೂಜೆ : ದೀಪಾವಳಿಯ ಪವಿತ್ರ ಹಬ್ಬದಂದು ಸುಕ್ಷೇತ್ರ ಬೋರಬಂಡ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಲಕ್ಷ್ಮೀ ದೇವಿಯ ಪೂಜೆ ನೆರವೇರಿತು. ನರೇಂದ್ರ ರಾಠೋಡ ದಂಪತಿಗಳು ಹಾಗೂ ಪ್ರಮುಖರು, ಸಾರ್ಪಾವಜನಿಕರು ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!