ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಿದ ಮಕ್ಕಳು |ಪ್ರಥಮ, ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡು ಸಂತಸ
ಗುರುಮಠಕಲ್ : ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜು ಪ್ರೌಡಶಾಲಾ ವಿಭಾಗ ಆಯೋಜಿಸಿದ್ದ ಪ್ರಸಕ್ತ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಪಟ್ಟಣದ ಶ್ರೀ ಲಕ್ಷ್ಮೀ ತಿಮ್ಮಪ್ಪ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪ್ರಮುಖ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ರಿದಾ ತಬಸ್ಸುಮ್ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ, ಕವನ ವಾಚನದಲ್ಲಿ ಮನೋಜ್, ಮಿಮಿಕ್ರಿಯಲ್ಲಿ ಸೃಜನ್ ಜೆ, ಕ್ಲೇ ಮಾಡೆಲಿಂಗ್ ಸರ್ವೇಶ್, ಧಾರ್ಮಿಕ ಪಠಣ ಮತ್ತು ಆಶುಭಾಷಣದಲ್ಲಿ ಆರಾಧ್ಯ ಯಾದವ ಪ್ರಥಮ ಸ್ಥಾನ ಪಡೆದಿದ್ದಾರೆ.
ಚಿತ್ರಕಲೆಯಲ್ಲಿ ಸಾನ್ವಿಕಾ ದ್ವಿತೀಯ, ಛದ್ಮವೇಷದಲ್ಲಿ ರಿತ್ವಿಕಾರೆಡ್ಡಿ ಪ್ರಥಮ, ಅಭಿನಯ ಗೀತೆ ಖುಷಿ ರೆಡ್ಡಿ ತೃತೀಯ, ವಂಶಿಕಾ ದ್ವಿತೀಯ, ಇಂಗ್ಲಿಷ್ ಕಂಠಪಾಠದಲ್ಲಿ ಹೃತ್ವಿಕ್ ದ್ವಿತೀಯ, ಕ್ಲೇ ಮಾಡೆಲಿಂಗ್ ರೋಹಿತ್, ಪ್ರಬಂಧ ಸ್ಪರ್ಧೆ ಸ್ರಾವ್ಯಶ್ರೀ ತೃತೀಯ ಸ್ಥಾನ ಪಡೆದಿದ್ದಾರೆ.
ಮಕ್ಕಳ ಸಾಧನೆಗೆ ಶಾಲೆಯ ಪ್ರಚಾರ್ಯ ಲೀನಾಜೋಸಿ, ಅಯ್ಯಪ್ಪದಾಸ ರಾಠೋಡ ಸೇರಿದಂತೆ ಸಿಬ್ಬಂದಿ ಹೊಲಿಕಾ, ಸುವರ್ಣ, ಲಕ್ಷ್ಮೀ, ಯಲ್ಲಪ್ಪ, ನರೇಂದ್ರ ಸಾಕಾ, ಮಹಮ್ಮದ ಹಫೀಸ್, ಶರಣಪ್ಪ, ಅರ್ಚನಾ, ಸತೀಶರೆಡ್ಡಿ ಅಭಿನಂದಿಸಿದ್ದಾರೆ.
