ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ | ಚುನಾವಣೆ ಆಯೋಗ, ಬಿಜೆಪಿ ವಿರುದ್ಧ ಆಕ್ರೋಶ
ಗುರುಮಠಕಲ್: ಎಸ್ ಐ ಆರ್ ನಿಂದ ದೇಶದಲ್ಲಿ ದೊಡ್ಡ ಅನಾಹುತ ಆಗಿದೆ. ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ಕೊಡಬೇಕು ಎಂದು ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಒತ್ತಾಯಿಸಿದ್ದಾರೆ.
ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರಜಾಪ್ರಭುತ್ವ ಉಳಿಸಿ, ಮತ ಬಚಾವೊ ಮತ್ತು ದೇಶ್ ಬಚಾವೋ ಬೃಹತ್ ಪ್ರತಿಭಟನೆ ಉದ್ದೇಶಿಸಿ ಬಸವೇಶ್ವರ ವೃತ್ತದಲ್ಲಿ ಮಾತನಾಡಿದರು.
ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ ಮಾತನಾಡಿ, ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಓಟ್ ಹಾಕುವ ಹಕ್ಕು ಸಂವಿಧಾನ ನೀಡಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಡವರು, ಶ್ರೀಮಂತರಿಗೆ ಒಂದೇ ಓಟಿನ ಹಕ್ಕನ್ನು ನೀಡಿದ್ದಾರೆ. ಹಕ್ಕು ಕಸಿಯಲು ಬಿಜೆಪಿ ಕುತಂತ್ರ ದಿಂದ ಬಿಜೆಪಿ ಕೈಗೊಂಬೆಯಾಗಿ ಚುನಾವಣೆ ಅಧಿಕಾರಿಗಳು ಎಸ್ ಐ ಆರ್ ಮೂಲಕ 13 ಕೋಟಿ ಮತದಾರರ ಹೆಸರು ಡಿಲೀಟ್ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಮುಖಂಡ ಸಾಯಬಣ್ಣ ಬೋರಬಂಡ ಮಾತನಾಡಿ, ದೀನದಲಿತರ, ಅಲ್ಪಸಂಖ್ಯಾತರ ಮತ ಹಕ್ಕು ಕಸಿಯಬೇಕು. ಕಾಂಗ್ರೆಸ್ ಬೆಂಬಲ ಇರುವ ಜನರ ಮತ ಕಡಿತ ಮಾಡುವ ಹುನ್ನಾರ ಎಂದು ಆರೋಪಿಸಿದರು. 1952ರಲ್ಲಿ ಜವಹಾರ್ ಲಾಲ್ ನೆಹರು ಚುನಾವಣೆ ಆಯೋಗ ರಚಿಸಿ, ಎಸ್ ಐ ಆರ್ ಆಗಲು ಆಗಿದೆ. 20 ವರ್ಷದ ಬಳಿಕ ನಡೆಯುತ್ತಿದೆ. ಇದರ ಮೂಲಕ ಮತದಾರರ ಹೆಸರು ಡಿಲೀಟ್ ಮಾಡುವುದು ಸರಿಯಲ್ಲ. ದೇಶಕ್ಕೆ ನ್ಯಾಯಕೊಡುವ ಕೆಲಸ ಕೇಂದ್ರ ಚುನಾವಣೆ ಆಯೋಗ ಮಾಡಬೇಕಿತ್ತು. ಆದರೇ ಅನ್ಯಾಯ ಮಾಡುತ್ತಿದೆ ಎಂದರು.
ವೀರಭದ್ರಪ್ಪ, ಸೈಯದ್ ಅಕ್ಬರ್, ನರಸಿಂಹ ರೆಡ್ಡಿ ಚಂಡರಕಿ ಮಾತನಾಡಿದರು. ಬಸವರಾಜ ದಳಪತಿ, ಶಾಂತಮ್ಮ ಕೇಶ್ವಾರ್, ಬಾಲಪ್ಪ ನೀರೆಟಿ, ಬಾಬು ತಲಾರಿ, ಚಾಂದ ಪಾಶಾ, ಸೈಯದ್ ಬಾಬಾ, ಭೀಮಶಪ್ಪ ರಾಂಪೂರ, ಚನ್ನಬಸವ ಗಾಜರಕೋಟ, ಯಶವಂತರಾವ ಚೌಧರಿ, ಸಾಯಿಬಣ್ಣ ಯದ್ಲಾಪೂರ, ಬಸವಂತರಾಜ ನೀರಟಿ, ಫಯಾಜ್ ಅಹ್ಮದ್, ವಸಂತರಾವ್ ಹಬೀಬ್, ಶರಣು ಕಲಾಲ್, ಕಿಷ್ಟಪ್ಪ, ಭೀಮಶಪ್ಪ, ಹುಸೇನಪ್ಪ ನಜರಾಪೂರ ಇತರರು ಭಾಗವಹಿಸಿದ್ದರು.
