ಎಪಿಎಫ್ ಸಂಸ್ಥೆಯಲ್ಲಿ ಎಐ ಅತಿಥಿ ಶಿಕ್ಷಕರಿಗೆ 3  ದಿನಗಳ ಕಾರ್ಯಾಗಾರ | ಡಯಟ್ ಪ್ರಾಂಶುಪಾಲ ನಿಂಗಣ್ಣ ಸಿಂಪಿ ಅಭಿಮತ

ಯಾದಗಿರಿ: ಹಿಂದೆ ಶಾಲೆಗೆ ಬಂದ ಮೇಲೆ ಮಕ್ಕಳ ಕಲಿಕೆ ಆಗುತ್ತಿತ್ತು, ಆಧುನಿಕ ಯುಗದಲ್ಲಿ ಹಲವು ವಿಷಯಗಳು ಶಾಲೆಗೆ ದಾಖಲಾಗುವ ಮೊದಲೇ ತಿಳಿದಿರುತ್ತಾರೆ. ಪ್ರಸ್ತುತ ಎಐ ಯುಗ ನಡೆಯುತ್ತಿದೆ. ಮಕ್ಕಳಿಗೆ ತಂತ್ರಜ್ಞಾನ ಬಳಸಿ ಪಾಠ ಮಾಡುವುದು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಸಹಾಯವಾಗಲಿದೆ ಎಂದು ಡಯಟ್ ಪ್ರಾಂಶುಪಾಲ ನಿಂಗಣ್ಣ ಸಿಂಪಿ ಅಭಿಪ್ರಾಯಪಟ್ಟರು.

ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಭೇತಿ ಸಂಸ್ಥೆಯಿಂದ ಎಪಿಎಫ್ ಸಂಸ್ಥೆಯಲ್ಲಿ ಆಯೋಜಿಸಿದ ಆಯ್ದ ಪ್ರೌಢ ಶಾಲೆ ಎಐ ಶಿಕ್ಷಕರ 3 ದಿನಗಳ ತರಬೇತಿ ಕಾರ್ಯಾಗಾರವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಪಾಲಕರಿಂದ ಗುಣಮಟ್ಟದ ಶಿಕ್ಷಣ ಬೇಡಿಕೆಯಿದೆ. ಖಾಸಗಿ ಸಂಸ್ಥೆಗಳನ್ನು ಮೀರಿಸುವಷ್ಟು ಸರ್ಕಾರ ಪೂರ್ವ ಪ್ರಾಥಮಿಕ, ಇಂಗ್ಲೀಷ್ ಕಲಿಕೆ, ಅಲ್ಲದೇ ಎಐ ಕೂಡ ಸೇರಿಸಿ ಮಕ್ಕಳ ಕೌಶಲ್ಯ ಬೆಳೆಸಲು ಯೋಜನೆ ರೂಪಿಸಿದೆ. ಪಠ್ಯ ವಿಷಯವನ್ನು ಎಐ ಬಳಸಿಕೊಂಡು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಬೇಕು ಎಂದು ಹೇಳಿದರು. ನಾವು ಅತಿಥಿ ಶಿಕ್ಷಕರು ಎನ್ನುವ ಭಾವನೆ ಬಿಟ್ಟು, ನಿಷ್ಠೆಯಿಂದ ಪಾಠ ಮಾಡಿ ಮಕ್ಕಳಿಗೆ ಜ್ಞಾನ ನೀಡಲು ತಿಳಿಸಿದರು.ಎಪಿಎಫ್ ಸಂಯೋಜಕ ಸಚಿನ್ ಮಾತನಾಡಿ, ಸರ್ಕಾರ ಎಐ ಕೌಶಲ್ಯ ಆಧಾರಿತ ಶಿಕ್ಷಣ ನೀಡುವ ಯೋಜನೆ ತಂದಿದ್ದು, ಸಾಕಷ್ಟು ಕಲಿಕೆಗೆ ಸಹಕಾರಿಯಾಗಲಿದೆ ಎಂದರು.

ಸಾಕ್ಷರತೆ ಜೊತೆಗೆ ಆಧುನಿಕ ತಂತ್ರಜ್ಞಾನ ಬಳಸಿ ಮಕ್ಕಳಲ್ಲಿ ಕೌಶಲ್ಯ ಬೆಳೆಸಲು ಹೆಜ್ಜೆ ಇಟ್ಟಿರುವುದು, ಶಿಕ್ಷಕರು ದೂರದೃಷ್ಟಿ ಯಿಂದ ಮುಂದಿನ ಪೀಳಿಗೆಗೆ ತಂತ್ರಜ್ಞಾನ ಸಾಧಕ ಬಾಧಕಗಳ ಬಗ್ಗೆಯೂ ಹೇಳಬೇಕಿದೆ. ಕಲಿಕೆಗೆ ಪೂರಕವಾಗಿ ಹೇಗೆ ಬಳಸಿಕೊಳ್ಳಬೇಕು ಎನ್ನುವ ಅರಿವು ಮುಖ್ಯ ಎಂದರು.

ಪ್ರಾಸ್ತಾವಿಕ ಡಯಟ್ ಉಪನ್ಯಾಸಕ ಅಂಬ್ರಣ್ಣ ಮಾತನಾಡಿ, ಆಧುನಿಕ ತಂತ್ರಜ್ಞಾನ ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಿ ಕೌಶಲ್ಯ ಬೆಳೆಸಲು ಯಾದಗಿರಿ ಜಿಲ್ಲೆಯ 79 ಶಾಲೆಗಳಲ್ಲಿ ತಾಂತ್ರಿಕ ಕೌಶಲ್ಯ, ಕೃತಕ ಬುದ್ಧಿಮತ್ತೆ ಮಾಹಿತಿ ನೀಡಲು ಎಐ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ವಿವರಿಸಿದರು.

ಡಯಟ್ ಉಪನ್ಯಾಸಕರಾದ ವಿದ್ಯಾ ಸಜ್ಜನ್, ನೋಡಲ್ ಅಧಿಕಾರಿ ಅಂಬ್ರಣ್ಣ, ಉಪನ್ಯಾಸಕ ಶೇಖರಪ್ಪ, ಇಂದಿರಾ ಇದ್ದರು. ಡಯಟ್ ಉಪನ್ಯಾಸಕ ಮಲ್ಲಪ್ಪ ತಳವಾರ ಸ್ವಾಗತಿಸಿದರು. ಶರಣಗೌಡ ಪಾಟೀಲ್ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!