ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದ ಸಭೆ | ನ.16 ರಂದು ಸಹಸ್ತ್ರಾರ್ಜುನ ಮಹಾರಾಜ ಜಯಂತಿ | ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ನಿರ್ಧಾರ
ಗುರುಮಠಕಲ್: ಇಲ್ಲಿನ ಅಂಕಮ್ಮ ದೇವಸ್ಥಾನದಲ್ಲಿ ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದ ಅಧ್ಯಕ್ಷ ಚಂದುಲಾಲ ಚೌಧರಿ ನೇತೃತ್ವದಲ್ಲಿ ಸಭೆ ನಡೆಯಿತು.
ಇದೇ ನವೆಂಬರ್ 16 ಕಾರ್ತಿಕ ಮಾಸದ ಸಪ್ತಮಿಯಂದು ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಆಚರಣೆ ಮಾಡುವುದು ನಿರ್ಧರಿಸಲಾಗಿದೆ ಎಂದರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯಲಿದೆ ಎಂದರು.
ಇದೇ ವೇಳೆ ನಾವು ಯುವಕ ಸಂಘದ ನೂತನ ಅಧ್ಯಕ್ಷ, ಉಪ ಕಾರ್ಯದರ್ಶಿ ಹಾಗೂ ಸಲಹೆಗಾರ ಹುದ್ದೆಗೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಹೀರಾಲಾಲ್ ಬಸೂದೆ ಹಾಗೂ ನಿತೀನ್ ತಗಡಘರ ಸ್ಪರ್ಧೆಯಲ್ಲಿದ್ದರು, ಚುನಾವಣೆ ನಡೆದು ಹೀರಾಲಾಲ್ 53 ಮತ ಪಡೆದರೆ, ನಿತೀನ್ 75 ಮತಗಳನ್ನು ಪಡೆದು ಬಹುಮತ ಪಡೆದಿದು ಯುವ ಅಧ್ಯಕ್ಷರಾಗಿ ಆಯ್ಕೆಯಾದರು.
ಇನ್ನು ನಿತಿನ್ ಆಯ್ಕೆಯಿಂದ ತೆರವಾದ ಉಪ ಕಾರ್ಯದರ್ಶಿ ಸ್ಥಾನಕ್ಕೆ ವಿಜಯ ಬಸೂದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ಸಲಹೆಗಾರಾಗಿ ಮೋಹನ್ ಬುರಬುರೆ ಆಯ್ಕೆಯಾದರು.
ಸಮಾಜದ ಗೌರವಾಧ್ಯಕ್ಷ ರಾಮಕಿಶನರಾವ ಗೊಂಗಲೆ, ಬುಡ್ಡಪ್ಪ ಜನಾರ್ಧನ, ಡಾ ನರಸಿಂಗರಾವ್ ಕಾಶಿಗಾವ್, ಹಣಮಂತರಾವ ಗೊಂಗಲೆ, ದಶರಥರಾವ ಧಡಂಗೆ, ಲಕ್ಷ್ಮಣರಾವ್ ಚೌಧರಿ, ಅಂಬಾದಾಸ ಜೀತ್ರಿ, ಯಶವಂತ ಚೌಧರಿ, ಅನೀಲ ಜೀತ್ರಿ, ಶೋಭಾ ಬಾಯಿ ರಂಗಾಪೂರ, ರೇಣುಕಾ ಗೊಂಗಲೆ, ಸುಷ್ಮಾ ಚೌಧರಿ, ಇಂದುಬಾಯಿ ಮೇಂಗಜಿ ಇತರರು ಇದ್ದರು.
