ದಸರಾ ಪ್ರಯುಕ್ತ ಜೈ ಭವಾನಿ ಹಿಂದೂ ಸೇವಾ ಸಮಿತಿ ಆಯೋಜನೆ | ಐದು ದಿನ ಅನ್ನ-ಉಪಹಾರ ವ್ಯವಸ್ಥೆ

ಯಾದಗಿರಿ: ದಸರಾ ಹಬ್ಬದ ಅಂಗವಾಗಿ ಜೈ ಭವಾನಿ ಹಿಂದೂ ಸೇವಾ ಸಮಿತಿ, ಚಕ್ಕರಕಟ್ಟಾ ಬಡಾವಣೆ ವತಿಯಿಂದ ಯಾದಗಿರಿ ಜಿಲ್ಲೆಯಿಂದ ಶ್ರೀ ಕ್ಷೇತ್ರ ತುಳಜಾಪುರಕ್ಕೆ ಮಹಾ ಪಾದಯಾತ್ರೆ ಶುಕ್ರವಾರ ಆರಂಭಗೊಂಡಿತು. 500ಕ್ಕೂ ಹೆಚ್ಚು ಭವಾನಿ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಹರಕೆ ಸಲ್ಲಿಸುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಯಾದಗಿರಿಯ ಯುವ ಭಕ್ತರು ಭಕ್ತಿಭಾವದಿಂದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು, ಪ್ರತಿದಿನ ಸುಮಾರು 40 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಲಿದ್ದಾರೆ ಎನ್ನಲಾಗಿದೆ.

ಪಾದಯಾತ್ರಿಗಳ ಅನುಕೂಲಕ್ಕಾಗಿ ಸಮಿತಿಯಿಂದ 20ಕ್ಕೂ ಹೆಚ್ಚು ಸೇವಾ ತಂಡಗಳನ್ನು ನಿಯೋಜಿಸಲಾಗಿದೆ. ಭಕ್ತರಿಗೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ಸಾಗಿಸಲು ಎರಡು ಲಾರಿಗಳು ಹಾಗೂ ಎರಡು ಟಾಟಾ ಪಿಕಪ್ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಐದು ದಿನಗಳ ಕಾಲ ಪಾದಯಾತ್ರಿಗಳಿಗೆ ಊಟ, ಉಪಹಾರ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸಲಾಗುವುದು ಎಂದು ಸಮಿತಿ ತಿಳಿಸಿದೆ.

ಪಾದಯಾತ್ರೆಯ ಮಾರ್ಗದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೇವಾ ತಂಡಗಳು ಕಾರ್ಯನಿರ್ವಹಿಸಲಿದ್ದು, ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಮಿತಿಯ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಶ್ರಮಿಸುತ್ತಿದ್ದಾರೆ.

ಪಾದಯಾತ್ರೆಯ ನೇತೃತ್ವದಲ್ಲಿ ಸಮಿತಿ ಸದಸ್ಯರಾದ ಸಾಯಿಬಣ್ಣ ಚಂಡ್ರಿಕಿ, ಅಮರನಾಥ್ ತಾಂಡೂರಕರ್, ದೇವು ಸೆಂಡಿಗಿ, ಆಂಜನೇಯ ಭಂಗಿ, ಶಿವಾನಂದ ವಾಲಿ, ಮೌಲಾಲಿ ಭಂಗಿ ಪ್ರಕಾಶ್, ಮೋಹನ್ ರಾಠೋಡ್, ಸಿದ್ದು ನಾಯಕ್, ಯಮನಪ್ಪ, ಸುಭಾಷ್, ಮಲ್ಲು ತೆಲುಗೂರು, ಸೈದಪ್ಪ ಅಂಬಿಗೇರ, ವಿಶ್ವನಾಥ ಜಾಕನಳ್ಳಿ , ಆಕಾಶ ನಿಂಬರ್ಗಾ, ಮಲ್ಲು ತಳವಾರ, ಸಾಬು ಮುಂಡರಗಿ, ಬಸ್ಸು ಬಳಿಚಕ್ರ, ಹಣಮಂತ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.

ದಸರಾ ಹಬ್ಬದ ಹಿನ್ನೆಲೆಯಲ್ಲಿ ಭಕ್ತರು ಶ್ರದ್ಧಾ-ಭಕ್ತಿಯಿಂದ ಪಾದಯಾತ್ರೆ ಕೈಗೊಂಡಿದ್ದು, ಯಾದಗಿರಿಯಿಂದ ತುಳಜಾಪುರದವರೆಗೆ ನಡೆಯುತ್ತಿರುವ ಈ ಮಹಾ ಪಾದಯಾತ್ರೆ ಭಕ್ತರ ಗಮನ ಸೆಳೆಯುತ್ತಿದೆ.

Spread the love

Leave a Reply

Your email address will not be published. Required fields are marked *

error: Content is protected !!