ತೆಲಂಗಾಣ ರಾಜ್ಯ ಬಿಜೆಪಿ ಓಬಿಸಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸತ್ಯನಾರಾಯಣ ಅವರಿಗೆ ಸನ್ಮಾನ
ಗುರುಮಠಕಲ್ : ತೆಲಂಗಾಣದ ನಾರಾಯಣಪೇಟ ಬಿಜಿಪಿ ಮುಖಂಡ ಸತ್ಯನಾರಾಯಣ ಅವರ ಸೇವೆಯನ್ನು ಪರಿಗಣಿಸಿ ತೆಲಂಗಾಣ ಓಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ನೇಮಿಸಿದ್ದು, ಸಂತಸದ ವಿಷಯ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ.ದೇವದಾಸ ಹೇಳಿದರು.
ಗುರುಮಠಕಲ್ ನಲ್ಲಿ ತೆಲಂಗಾಣ ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಸತ್ಯನಾರಾಯಣ ಮುದಿರಾಜ ನೇಮಕ ಹಿನ್ನೆಲೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ತೆಲಂಗಾಣದಲ್ಲಿ ಪಕ್ಷ ಸಂಘಟನೆಗೆ ತಳಮಟ್ಟದಿಂದ ಕಾರ್ಯ ಮಾಡಿದ್ದಾರೆ. ಕೆಲಸ ಮಾಡುವವರನ್ನು ಪಕ್ಷ ಗುರುತಿಸಿ, ಸ್ಥಾನ ಮಾನ ನೀಡುವುದು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಅವರಿಗೆ ಶುಭ ಹಾರೈಸಿದರು.
ತೆಲಂಗಾಣ ನಾಯಕ ಸತ್ಯನಾರಾಯಣ ಮುದಿರಾಜ ಮಾತನಾಡಿ, ಅನಿರೀಕ್ಷಿತವಾಗಿ ಭೇಟಿ ನೀಡಿದ ವೇಳೆ ಅಂತರ್ ರಾಜ್ಯವಾದರೂ ಗುರುಮಠಕಲ್ ಬಿಜೆಪಿ ಪಕ್ಷದ ಪ್ರಮುಖರು ಹಾಗೂ ಅಭಿಮಾನಿಗಳು ಅತ್ಯಂತ ಪ್ರೀತಿ, ಗೌರವದಿಂದ ಸನ್ಮಾನಿಸಿದ್ದಾರೆ. ಪಕ್ಷಕ್ಕಾಗಿ ನಾವು ದುಡಿಯಬೇಕು, ಖಂಡಿತ ಶ್ರಮಕ್ಕೆ ಫಲ ಸಿಗುತ್ತದೆ ಎಂದರು. ದೇಶದ ಏಕತೆಗಾಗಿ ಬಿಜೆಪಿ ಸಾಕಷ್ಟು ಕೊಡುಗೆ ನೀಡುತ್ತಿದೆ. ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಹೆಮ್ಮೆ ಎಂದರು.
ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ವೆಂಕಟಪ್ಪ ಅವಂಗಾಪೂರ, ಜಗದೀಶ ಮೇಂಗಜಿ ಮಾತನಾಡಿದರು. ಈ ವೇಳೆ ಅಶೋಕ್ ಸಂಜನೋಳ, ರವೀಂದ್ರ ರೆಡ್ಡಿ, ಸಂಜು ಅಳೆಗಾರ, ಮಾಜಿ ಗ್ರಾ.ಪಂ.ಸದಸ್ಯ ಭೀಮರಾಯ, ಮಹೇಶ, ಭೀಮು, ಇತರರು ಇದ್ದರು.
