ಮಾರ್ಚ್ 13 ರಂದು ಪಾದಯಾತ್ರೆ : ವೀರಧರ್ಮಜ ಮಾತಾ ಮಾಣಿಕೇಶ್ವರಿ ಅಮ್ಮನವರ 5 ನೇ ಅದ್ಧೂರಿ ಅವತಾರೋತ್ಸವ

ಗುರುಮಠಕಲ್: ಇಲ್ಲಿನ ಖಾಸಾಮಠದಿಂದ ಸೂರ್ಯನಂದಿ ಬೆಟ್ಟ ಸುಕ್ಷೇತ್ರ ಯಾನಾಗುಂದಿ ವರೆಗೆ ಪಾದಯಾತ್ರೆಯನ್ನು ಮಾ.13 ರಂದು ಬೆಳಿಗ್ಗೆ 6 ಗಂಟೆಗೆ ಹೊರಡಲಿದೆ ಎಂದು ಭಕ್ತರು ತಿಳಿಸಿದ್ದಾರೆ.

ಪಟ್ಟಣದ ಕಾಕಲವಾರ ಬೇಸ್ ಆಂಜನೇಯ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿ, ಅಮ್ಮನವ ಭಾವಚಿತ್ರದ ಭವ್ಯ ಮೆರವಣಿಗೆ ಮೂಲಕ ಪಾದಯಾತ್ರೆ ಹೊರಡಲಿದ್ದು, ವೀರಧರ್ಮಜ ಮಾತಾ ಮಾಣಿಕೇಶ್ವರಿ ಅಮ್ಮನವರ 5 ನೇ ಅವತಾರ ಉತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಎಲ್ಲಾ ಭಕ್ತರು ಭಾಗವಹಿಸಬೇಕು ಎಂದು ತಿಳಿಸಿದರು.

ಈ ವೇಳೆ ನಿವೃತ್ತ ಪೊಲೀಸ ಅಧಿಕಾರಿ ತಿಮ್ಮಣ್ಣ ಎನ್, ವೀರಪ್ಪ ಕಿಲ್ಲನಕೇರಾ, ಹುಸೇನಪ್ಪ ಮಲ್ಕಾಪಲ್ಲಿ, ರಾಮುಲು ಮದ್ದೂರು, ವೆಂಕಟಪ್ಪ ಕೋರೆಬನ್, ಕಾಶಪ್ಪ ಮನ್ನೆ, ಅನೀಲ ಮೇಂಗಜಿ, ಹಣಮಂತು ಕಂದೂರ,ರಾಮುಲು, ನರಸಿಂಹಲು ಗಂಗನೋಳ್, ಶರಣಪ್ಪ, ಮಲ್ಲು ಕೇಶ್ವಾರ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!