ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕುರಿ ಸಂತೆ ಆರಂಭಿಸಿ | ಸಂತೆ ದಿನ  ಪಶುವೈದ್ಯರ ನಿಯೋಜಿಸಲು ಒತ್ತಾಯ

ಗುರುಮಠಕಲ್‌: ತಾಲೂಕು ಕೇಂದ್ರವಾದ ಗುರುಮಠಕಲ್ ನಲ್ಲಿ ಕುರಿ ಸಂತೆ ಆರಂಭಿಸಲು ಕೃಷಿ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ರಾಳ ಒತ್ತಾಯಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳಿಲ್ಲದ ಕುರಿತು ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಇದೀಗ ಸ್ವಚ್ಛತೆ ಕಾರ್ಯ ನಡೆದಿದೆ ಎಂದು ತಿಳಿಸಿದರು.

ಈ ಭಾಗದ ಬಡ ರೈತರಾಪಿ ವರ್ಗದವರ ಕುರಿ ಮಾರಾಟಕ್ಕೆ ದೂರದ ಯಾದಗಿರಿ, ಶಹಾಪೂರಕ್ಕೆ ತೆರಳುವ ಅನಿವಾರ್ಯತೆಯಿದೆ. ಹಾಗಾಗಿ ಸೋಮವಾರ ಎತ್ತಿನ ಸಂತೆ ಜೊತೆ ಕುರಿ ಸಂತೆಯೂ ನಡೆಸಲು ಕೃಷಿ ಅಧಿಕಾರಿಗಳು ಮುಂದಾಗಬೇಕು ಎಂದರು.

ಮಾರುಕಟ್ಟೆಯಲ್ಲಿ ಎತ್ತುಗಳಿಗೆ ರ್ಯಾಂಪ್ ವ್ಯವಸ್ಥೆ, ಸಂತೆಯ ದಿನ ಪಶು ವೈದ್ಯರ ನಿಯೋಜನೆ. ಮಾಡಬೇಕು. ಪೊಲೀಸರನ್ನು ಕರ್ತವ್ಯಕ್ಕೆ ನೇಮಿಸಬೇಕು. ದೇಶ ಕಾಯುವ ಸೈನಿಕರು. ಅನ್ನ ನೀಡುವ ರೈತರನ್ನು ಎಂದಿಗೂ ಅನಾನುಕೂಲವಾಗದಂತೆ ಕೃಷಿ ಮಾರುಕಟ್ಟೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಪ್ರಮುಖವಾಗಿ ಪಟ್ಟಣದಲ್ಲಿ ಬಸ್ ನಿಲ್ದಾಣ ಬಳಿ ತರಕಾರಿ ರಸ್ತೆ ಬದಿ ಮಾರಾಟ ಮಾಡುವುದು ಸಾಕಷ್ಟು ಅಪಾಯಕಾರಿಯಾಗಿದೆ. ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹಾಗಾಗಿ ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಪ್ರತ್ಯೇಕ ತರಕಾರಿ ಮಾರುಕಟ್ಟೆ, ಕೋಳಿ, ಕುರಿ ಮಾಂಸ ಮಾರಾಟಕ್ಕೆ ಸ್ಥಳ ಗುರುತಿಸಬೇಕು. ಅರಣ್ಯ ಇಲಾಖೆಯಿಂದ ಸಸಿ ನೆಡುವ ಕಾರ್ಯ ಮಾಡಿ, ನಿರ್ವಹಣೆ ಮಾಡಬೇಕು. ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಅಭಿವೃದ್ಧಿ ಇಲ್ಲ. ಜಿಲ್ಲೆ, ತಾಲೂಕು ಅಭಿವೃದಿ ಹೇಗಾಗಬೇಕು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ವಿನೋದ ಕಾಮಿನ್, ಮಲ್ಲೇಶ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!