ಶೀತ ಗಾಳಿಯಿಂದ 2 ದಿನದಿಂದ ತತ್ತರಿಸಿದ ಗಡಿ ಜನ | ಜಿಲ್ಲೆಯಲ್ಲಿ ಶೀತ ಗಾಳಿ ಬೀಸುವ ಕುರಿತು ಎಚ್ಚರಿಕೆ

ಯಾದಗಿರಿ: ಭಾರತೀಯ ಹವಾಮಾನ ಇಲಾಖೆಯಿಂದ ಡಿಸೆಂಬರ್ 18 ರಂದು ಯಾದಗಿರಿ ಜಿಲ್ಲೆಗೆ Yellow Alert ಘೋಷಿಸಿದ್ದು, ಯಾದಗಿರಿ ಜಿಲ್ಲೆಯಾದ್ಯಂತ ಬೆಳಗಿನ ಜಾವ ತೀವ್ರವಾದ ಶೀತ ಗಾಳಿ ಬೀಸುವ ಸಾಧ್ಯತೆಯಿರುತ್ತದೆ ಹಾಗೂ ಸಾಮಾನ್ಯ ತಾಪಮಾನಕ್ಕಿಂತ 5-6 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ಆಗುವ ಸಾಧ್ಯತೆ ಇದೆ.

ಸಾರ್ವಜನಿಕರು ಬೆಳಗ್ಗೆಸೂರ್ಯೋದಯಕ್ಕಿಂತ ಮುಂಚೆ ಹಾಗೂ ಸೂರ್ಯಾಸ್ತದ ನಂತರ ವಾಕಿಂಗ್ ಬರುವವರು ಮುನ್ನಚ್ಚರಿಕೆ ವಹಿಸಿಬೇಕೆಂದು ಹಾಗೂ ಗ್ರಾಮಗಳಲ್ಲಿ ಸಾರ್ವಜನಿಕರು ಮತ್ತು ರೈತರು ಅನಾವಶ್ಯಕವಾಗಿ ದ್ವಿ ಚಕ್ರ ವಾಹನಗಳಲ್ಲಿ ಹೊರಗಡೆ ಬರದಿರಲು ಜಿಲ್ಲಾಡಳಿತದಿಂದ ವಿನಂತಿಸಿದ್ದು, ಅವಶ್ಯಕ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ ಅವರು ಸಾರ್ವಜನಿಕರನ್ನು ಕೋರಿದ್ದಾರೆ.

ಮುನ್ನಚ್ಚರಿಕೆ ಕ್ರಮಗಳು:

  • ಸಾರ್ವಜನಿಕರು ಸಾಧ್ಯವಾದಷ್ಟು ಮನೆ ಬಿಟ್ಟು ಹೊರಗಡೆ ಬರದಿರಲು ತಿಳಿಸಿದೆ. ಒಂದು ವೇಳೆ ಅವಶ್ಯ ವಿದ್ದಲ್ಲಿ ಬೆಚ್ಚನೆಯ ಉಡುಪುಗಳಾದ ಸ್ವೇಟರ್, ಜಾಕೇಟ್, ಉಲನ್ ಟೋಪಿ ಕಾಲು ಗ್ಲೌಸ್, ಕೈ ಗೌಸ್ ಗಳನ್ನು ಧರಿಸಲು ಸೂಚಿಸಿದೆ.  ಮಕ್ಕಳನ್ನು ಸಹ ಮನೆಯಿಂದ ಹೊರಗಡೆ ಬಿಡದಿರಲು ತಿಳಿಸಲಾಗಿದೆ.
  •  ರೈತ ಬಾಂಧವರು ಈ ದಿವಸಗಳಲ್ಲಿ ವಿಶೇಷವಾಗಿ ರಾತ್ರಿ ಸಮಯದಲ್ಲಿ ಹೊಲಗಳಲ್ಲಿ ತಂಗುವುದು ಮತ್ತು ಹಗಲಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳದಿರಲು ತಿಳಿಸಿದೆ.
  •    ಅವಶ್ಯವಿದ್ದಲ್ಲಿ ಮಾತ್ರ ಬೆಚ್ಚನೆಯಉಡುಪುಗಳಾದ ಸ್ಟೇಟರ್, ಜಾಕೇಟ್, ಉಲನ್ ಟೋಪಿಗಳನ್ನು ಧರಿಸಲು ತಿಳಿಸಿದೆ.
  • ಮುಂದುವರೆದು ಕೃಷಿ ಇಲಾಖೆಯಿಂದ ಮುನ್ನಚ್ಚರಿಕೆ ಕ್ರಮವಾಗಿ ರೈತರು ಹಿಂಗಾರು ಬೆಳೆಗಳಿಗೆ ಶೀತ ಗಾಳಿಯ ಪ್ರಭಾವವನ್ನುಪ್ರತಿರೋಧಿಸಲು Planofix 0.5 ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Spread the love

Leave a Reply

Your email address will not be published. Required fields are marked *

error: Content is protected !!