ಅಕ್ರಮ ತಡೆಗೆ ಪರೀಕ್ಷಾ ಕೇಂದ್ರಗಳಿಗೆ ವಿವಿಯಿಂದ ಕಟ್ಟುನಿಟ್ಟಿನ ಕಾರ್ಯಸೂಚಿ

ರಾಯಚೂರು: ರಾಯಚೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಪದವಿ ವಿದ್ಯಾರ್ಥಿಗಳಿಗೆ ಫೆ.03 ರಿಂದ (ಸೋಮವಾರ) ಫೆ. 21ರ ವರೆಗೆ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಒಟ್ಟೂ 82 ಕೇಂದ್ರಗಳಲ್ಲಿ ಸುಮಾರು 65 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ರಾಯಚೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಯರಿಸ್ವಾಮಿ.ಎಂ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಈ ಬಗ್ಗೆ ವಿಸ್ತೃತ ಮಾಹಿತಿ ನೀಡಿರುವ ಅವರು, ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಪ್ರತಿ ನಗರಗಳಿಗೆ ಒಂದರಂತೆ ಒಟ್ಟೂ 14 ನೋಡಲ್ ಕೇಂದ್ರಗಳನ್ನು ಸ್ಥಾಪಿಸಲಾ ಗಿದ್ದು, ಪರೀಕ್ಷಾ ಕೇಂದ್ರಗಳು ಪರೀಕ್ಷೆಗೂ 45 ನಿಮಿಷಗಳಿಗೆ ಮುಂಚೆ ಪ್ರಶ್ನೆಪತ್ರಿಕೆಗಳನ್ನು ಆಯಾ ನೋಡಲ್ ಕೇಂದ್ರದಿಂದ ಸಂಗ್ರಹಿಸಬೇಕಿದ್ದು, ಪರೀಕ್ಷೆ ಮುಗಿದ 45 ನಿಮಿಷಗಳ ಒಳಗಾಗಿ ವಿದ್ಯಾರ್ಥಿಗಳು ಬರೆದ ಉತ್ತರ ಪತ್ರಿಕೆಗಳ ಬಂಡಲನ್ನು ನೋಡಲ್ ಕೇಂದ್ರಕ್ಕೆ ತಲುಪಿಸಬೇಕು. ಹಾಗೆಯೇ ಯಾವುದೇ ಪರೀಕ್ಷಾ ಕೇಂದ್ರದಲ್ಲಿ 20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಎಂಪಿಸಿ ಆಗಿರುವು ದು ಕಂಡುಬಂದಲ್ಲಿ ಅಂತಹ ಪರೀಕ್ಷಾ ಕೇಂದ್ರವನ್ನು ರದ್ದುಗೊಳಿ ಸಲಾಗುವುದು ಎಂಬ ಕಟ್ಟುನಿಟ್ಟಿನ ಆದೇಶವನ್ನು ಆಯಾ ಕೇಂದ್ರಗಳ ಪ್ರಾಂಶುಪಾಲರಿಗೆ ನೀಡಲಾಗಿದೆ‌.

ಪರೀಕ್ಷಾ ಕೇಂದ್ರಗಳಿಗೆ ಭದ್ರತೆ ನೀಡುವ ಜೊತಗೆ ಅವುಗಳ ಸುತ್ತ 144 ಸೆಕ್ಷನ್ ಜಾರಿಗೊಳಿಸುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗಿದ್ದು, ಇದರ ಜೊತೆಗೆ ಕುಲಸಚಿವರು ಹಾಗೂ ಮೌಲ್ಯಮಾಪನ ಕುಲಸಚಿವರನ್ನು ಒಳಗೊಂಡ ಎರಡು ವಿಶೇಷ ತನಿಖಾ ತಂಡ ಎರಡೂ ಜಿಲ್ಲೆಗಳನ್ನು ಸಂಚಾರ ಮಾಡಿ ಪರಿಶೀಲನೆ ಮಾಡಲಿದೆ. ಹಾಗೆಯೆ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಪರೀಕ್ಷಾ ಪರಿವೀಕ್ಷಕರನ್ನು (ಸಿಟಿಂಗ್ ಸ್ಕ್ವಾಯರ್ಡ್) ನೇಮಿಸಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಇರಬೇಕು ಜೊತೆಗೆ ಇಂತಿಷ್ಟು ಕನಿಷ್ಟ ವ್ಯವಸ್ಥೆ-ಸೌಕರ್ಯ ಇರಬೇಕು ಎಂಬ ನಿಯಮಾವಳಿಗಳನ್ನು ವಿಶ್ವವಿದ್ಯಾಲಯ ಮಾಡಿತ್ತು. ಅದರಲ್ಲಿ ಕನಿಷ್ಟ ಅಂಶಗಳನ್ನು ದಾಟದ ಹಳೆಯ 16 ಪರೀಕ್ಷಾ ಕೇಂದ್ರಗಳ ನ್ನು ಈಗಾಲೇ ರದ್ದುಪಡಿಸಲಾಗಿದ್ದು, ಈ ಬಾರಿ 82 ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆಗಳು ಜರುಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!