ವಾರದಲ್ಲಿ ಸಮಸ್ಯೆ ಇತ್ಯರ್ಥ ಪಡಿಸಿ | ಇಲ್ಲದಿದ್ದರೆ ಹೋರಾಟ; ಭೀಮುನಾಯಕ ಎಚ್ಚರಿಕೆ

ಯಾದಗಿರಿ: ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆಗೆ ವಶಪಡಿಸಿಕೊಂಡ ಕೃಷಿ ಭೂಮಿಯನ್ನು ಅನ್ಯ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಒಂದು ವಾರದಲ್ಲಿಯೇ ರೈತರಿಗೆ ಕೃಷಿ ಭೂಮಿಯನ್ನು ವಾಪಸ್ ಕೊಡಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕರವೇ ಜಿಲ್ಲಾಧ್ಯಕ್ಷ ಟಿಎನ್ ಭೀಮುನಾಯಕ, ಕಳೆದ 2005-06ರಲ್ಲಿ ಹೈದ್ರಾಬಾದ್ ನ ಮೆ|| ಕೀರ್ತಿ ಇಂಡಸ್ಟಿçÃಸ್ ನವರಿಗೆ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ರೈತರಿಂದ ಜಮೀನು ಖರೀದಿ ಮಾಡಲಾಗಿತ್ತು. ಜೊತೆಗೆ ಕಾರ್ಖಾನೆಯಲ್ಲಿ ರೈತರ ಕುಟುಂಬದವರಿಗೆ ನೌಕರಿ ನೀಡುವ ಷರತ್ತಿನೊಂದಿಗೆ ಜಮೀನು ಖರೀದಿ ಮಾಡಲಾಗಿತ್ತು.

ತದನಂತರ ಸಕ್ಕರೆ ಕಾರ್ಖಾನೆ ಸ್ಥಾಪನೆ ವಿಳಂಬ ಮಾಡುತ್ತಾ ಕೊನೆಗೆ ಇಂದಿಗೂ ಮೂಲ ಉದ್ದೇಶಕ್ಕೆ ಜಮೀನು ಬಳಕೆ ಮಾಡದೇ ಕಂಪೆನಿಯವರು ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಅವರು ಆಪಾದಿಸಿದ್ದಾರೆ. ಅಲ್ಲದೇ ಒಂದು ವರ್ಷ ಕುಟುಂಬದ ಒಬ್ಬರಿಗೆ ನೌಕರಿಯನ್ನು ಕೊಟ್ಟು ಒಂದು ವರ್ಷ ವೇತನವನ್ನೂ ನೀಡಿದ್ದರು. ಆದರೆ ತದನಂತರ ನೌಕರಿಯೂ ಇಲ್ಲ ವೇತನವೂ ಇಲ್ಲ ಇತ್ತ ಭೂಮಿಯೂ ಇಲ್ಲದಂತೆ ರೈತರು ಅತಂತ್ರರಾಗಿದ್ದಾರೆ.

ಈ ಜಮೀನುಗಳ ಪೈಕಿ ಕೆಲವು ಜಮೀನುಗಳು ಇನಾಮು ಭೂಮಿಗಳಾಗಿದ್ದರೂ ಸಕ್ಕರೆ ಕಾರ್ಖಾನೆಯವರು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಪಹಾಣಿಯಲ್ಲಿ ಇನಾಮು ಬದಲಿಸಿ ಅವುಗಳನ್ನು ಪಟ್ಟಾ ಜಮೀನುಗಳನ್ನಾಗಿ ಮಾಡಿಕೊಂಡು ಜಮೀನು ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿ ರುತ್ತಾರೆ ಇದನ್ನು ಕರವೇ 2012 ರಲ್ಲಿಯೇ ಅಂದಿನ ಜಿಲ್ಲಾಧಿಕಾರಿ ಶ್ರೀಮತಿ ಗುರುನಿತ್ ತೇಜ್ ಮೆನನ್ ಅವರಿಗೆ ದೂರು ಸಲ್ಲಿಸಿತ್ತು ಎಂದು ಅವರು ನೆನಪಿಸಿಕೊಟ್ಟಿದ್ದಾರೆ.

ಆ ಸಂದರ್ಭದಲ್ಲಿಯೂ ಸಹ ಜಿಲ್ಲಾಡಳಿತ ಬಿಗುವಿನ ನಿಲುವು ತಳೆದಿದ್ದರೆ ಇವೊತ್ತಿಗಾಗಲೇ ಸಮಸ್ಯೆ ಇತ್ಯರ್ತವಾಗಿರುತ್ತಿತ್ತು. ಆದರೆ ತದನಂತರ ಈ ಸಮಸ್ಯೆ ನೆನೆಗುದಿಗೆ ಬಿತ್ತು ಎಂದು ಅವರು ತಿಳಿಸಿದ್ದಾರೆ.

ಇದಾದನಂತರ ಸುಮಾರು 10 ವರ್ಷಗಳ ಅವಧಿಯಲ್ಲಿ ಈ ಭೂಮಿಯನ್ನು ಸಹ ಅನ್ಯ ಉದ್ದೇಶಕ್ಕೆ ಬಳಕೆ ಮಾಡಲು ಮುಂದಾಗಿರುವ ಸಂಗತಿ ತಿಳಿದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕಂಪೆನಿಯವರು ಕೃಷಿ ಭೂಮಿಯನ್ನು ವಾಣಿಜ್ಯ ಬಳಕೆ ಇಲ್ಲವೇ ಅನ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಿಸಲು ಮುಂದಾಗಿದ್ದರಿAದ ಜಮೀನು ಕೊಟ್ಟ ರೈತರು ಕಂಗಾಲಾಗಿದ್ದಾರೆ.

ಆದ್ದರಿಂದ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯ ಪ್ರವೇಶ ಮಾಡಿ ಕನಿಷ್ಟ ರೈತರಿಗೆ ಕೃಷಿ ಮಾಡಲು ಅನುವು ಮಾಡಿಕೊಡಬೇಕು. ಇಲ್ಲವೇ ಇಲ್ಲಿಯವರೆಗೆ ರೈತ ಕುಟುಂಬದ ಸದಸ್ಯರಿಗೆ ನೀಡಲಾದ ಉದ್ಯೋಗಕ್ಕೆ ವೇತನವನ್ನಾದರೂ ನೀಡಬೇಕು.

ಇದಾವುದೂ ಮಾಡದ ಕಂಪೆನಿಯವರಿAದಾಗಿ ರೈತರು ಅತ್ತ ಜಮೀನು ಇಲ್ಲ, ಇತ್ತ ನೌಕರಿಯೂ ಇಲ್ಲ ಕೊನೆಗೆ ನೆಮ್ಮದಿಯೂ ಇಲ್ಲದಂತಾಗಿದೆ. ಜಿಲ್ಲಾಡಳಿತ ತಕ್ಷಣ ಕ್ರಮ ವಹಿಸಿ ಒಂದು ವಾರದಲ್ಲಿಯೇ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಇಲ್ಲವಾದಲ್ಲಿ ಕರವೇ ಉಗ್ರ ಹೋರಾಟ ರೂಪಿಸಲಿದೆ ಎಂದು ಅವರು ಎಚ್ಚರಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!