ಯಾದಗಿರಿ: ಭರತ ಹುಣ್ಣಿಮೆ ದಿನ ಕನ್ನಡಿಗ ಯಾತ್ರಿಕರು ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನ ಮಾಡಿ ಖುಷಿಪಟ್ಟರು.ಅದರಲ್ಲಿಯು ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯ ಯಾತ್ರಿಕರು ಪವಿತ್ರ ಪುಣ್ಯಸ್ನಾನ ಮಾಡಿದರು.

ಯಾದಗಿರಿ ಜಿಲ್ಲೆಯ ಶಹಾಪುರನಿಂದ ಶ್ರೀ ಪತಂಜಲಿ ಯೋಗ ಕೇಂದ್ರದಿಂದ ಆಗಮಿಸಿದ ಯಾತ್ರಿಕರು ಇಂದು ಸಂಜೆ ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನ ಮಾಡಿ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದರು.

ಮಹಾಕುಂಭಮೇಳದಲ್ಲಿ ಕನ್ನಡಿಗರ ಭಜನೆ ಹಾಡು ಭಕ್ತಿಪರಕಾಷ್ಠೆ ಮೇಳೈಸಿತು. ಮಹಾಕುಂಭಮೇಳದಲ್ಲಿ ಭಾಗಿಯಾಗಿದಕ್ಕೆ ಯಾತ್ರಿಕರು ಜೀವನ ಸಾರ್ಥಕವಾಯಿತು ಎಂದರು.

ಯಾತ್ರಿಕರಾದ ಆರ್.ಎಂ.ಹೊನ್ನಾರೆಡ್ಡಿ, ನರಸಿಂಹ ವೈದ್ಯೆ, ಸಂಗನಗೌಡ ಪಾಟೀಲ ಅನವಾರ, ಹೊನ್ನಪ್ಪಗೌಡ ಹೊತ್ತಪೇಟ್, ಪ್ರೇಮನಾಥ ಶೆಟ್ಟಿ, ಬಸನಗೌಡ ಅಣಬಿ, ವಿರೇಶ ಉಳ್ಳಿ, ಅಂಬರೀಶ್ ದೇಸಾಯಿ, ಅಂಬರೀಶ್ ಚಿನಗುಡಿ, ಮಹೇಶ್ ಬಿದರಿ, ಗುರುಶೇಖರ ಸಜ್ಜನ್, ಸಿದ್ದು ಕಟ್ಟಿಮನಿ, ನಿಂಗಣ್ಣ ತನಕೆದಾರ, ಪ್ರಶಾಂತ ದೊರೆ, ಅಶೋಕ ಇಬ್ರಾಹಿಮಪುರ, ನಿಂಗಣ್ಣಗೌಡ ಅನವಾರ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!