ಶಿವಾಜಿ ಮಹಾರಾಜರ ಜಯಂತಿ | ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಸ್ವಾಮಿಜಿ ಆಶೀರ್ವಚನ | ಹಿಂದುಗಳನ್ನು ಕೆಣಕಿದರೆ ಮತ್ತೊಬ್ಬ ಶಿವಾಜಿ ಹುಟ್ಟುವನು

ಗುರುಮಠಕಲ್(ಯಾದಗಿರಿ): ನಾವೆಲ್ಲಾ ಸನಾತನಿಗಳು, ಜಾತಿಗಳೆಲ್ಲ ಪಕ್ಕಕ್ಕಿಟ್ಟು ಹೊಸ್ತಿಲು ದಾಟಿ ಹೊರ ಬಂದರೇ ನಾವೆಲ್ಲಾ ಹಿಂದುಗಳು ಎನ್ನುವದು ಯಾರೂ ಮರೆಯಬಾರದು ಎಂದು ಪೂಜ್ಯ ಆದಿತ್ಯಪರಾಶ್ರೀ ಬಿಜ್ಜಾರಂ ಜಾಗೃತಿ ಮೂಡಿಸಿದರು.

ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸಮಾಜದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಶಿವಾ, ರಾಮಾನುಜಾಚಾರ್ಯ, ಬಸವೇಶ್ವರರು ನಮಗೆ ಆದರ್ಶ. ಪ್ರಪಂಚದ ಮೂಲ ಧಾರ್ಮಿಕ ಮುಕುಟಗಳನ್ನು ಬಿಟ್ಟು ಸಂಬಂಧವಿಲ್ಲದವರನ್ನು ಪೂಜಿಸುವುದು ಎಷ್ಟು ಸರಿ ಎನ್ನುವುದು ಅರಿಯಬೇಕು ಎಂದರು.

ಭವ್ಯ ಸನಾತನ ಸಂಸ್ಕೃತಿಯೇ ಜಗತ್ತಿಗೆ ಜೀವಾಳವಾಗಿದೆ. ನಮ್ಮ ದೇವರು, ಸಂತರನ್ನು ಪೂಜಿಸು ವುದು ನಮ್ಮ ಹಕ್ಕು ಮತ್ತು ಕರ್ತವ್ಯ. ಸಹೋದರತ್ವ ದಿಂದ ಜೀವಿಸಿ, ನಮ್ಮ ಸಂಸ್ಕಾರ, ಸಂಸ್ಕೃತಿ ಮರೆಯಬಾರದು. ಹಿಂದೆ ಕೆಲವರು ಭಯದಿಂದ ಇತರರನ್ನು ನಂಬಿದ್ದಾರೆ, ಕೆಲವು ಆಮಿಷಗಳಿಗೆ ತುತ್ತಾಗಿದ್ದಾರೆ. ನಮ್ಮ ಭವ್ಯ ಸನಾತನ ಸಂಸ್ಕೃತಿ ಅರಿತುಕೊಳ್ಳಲು ಕರೆ ನೀಡಿದರು.

ನಮ್ಮನ್ನು ಗೌರವಿಸುವವರನ್ನು ಗೌರವಿಸಬೇಕು, ನಮ್ಮ ಅಕ್ಕ ತಂಗಿಯರನ್ನು ಅಗೌರವದಿಂದ ಕಾಣುವವರನ್ನು ನಾವು ಗೌರವಿಸಬೇಕಾ ಎಂದು ಪ್ರಶ್ನಿಸಿದರು.

ನಮ್ಮ ಧರ್ಮ ಸನ್ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ನೀಡುತ್ತದೆ. ಪಂಚ ಭೂತಗಳ ಪೂಜೆ ನಮ್ಮ ಧರ್ಮದ ಶ್ರೇಷ್ಠತೆ.  ನಮ್ಮ ಧರ್ಮ ಜಾಗೃತಗೊಳಿಸುವುದು ನಮ್ಮ ಹಕ್ಕು ನಾವು ಯಾರನ್ನೂ ನಿಂದಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಶ್ರೀರಾಮ ಜನ್ಮಭೂಮಿ ವಿಷಯ, ಮಾತಾ ಮಾಣಿಕೇಶ್ವರಿ ಅಮ್ಮನವರ ಅಹಿಂಸಾ ಧರ್ಮದ ಕುರಿತು ಪ್ರಸ್ತಾಪ ಮಾಡಿದರು.

ಜಾತಿ ರಾಜಕೀಯದಿಂದ ಧರ್ಮಕ್ಕೆ ಕುತ್ತು. ಸಂವಿಧಾನ ಪಾಲಿಸೋಣ. ದೇಶದ ಕಾನೂನು ಗೌರವಿಸಬೇಕು. ಹಿಂದುಗಳ ಕೆಣಕಿದರೆ ಮತ್ತೆ ಶಿವಾಜಿ ಹುಟ್ಟುವನು ಎಂದು ಎಚ್ಚರಿಸಿದರು.

ಛತ್ರಪತಿ ಶಿವಾಜಿ ಮಹಾರಾಜರ ವಂಶದ ಬಗ್ಗೆ ಚೆನ್ನಾಗಿ ತಿಳಿದಿದ್ದೇನೆ. ಛಾವಾ ಸಿನಿಮಾ ವೀಕ್ಷಣೆ ಮಾಡಿ, ಇನ್ನೂ ಹೆಚ್ಚಿನ ಕಥೆ ತೋರಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಹಿಂದೂಪರ ಸಂಘಟನೆ, ವಿವಿಧ ಸಮಾಜಗಳ ಮುಖಂಡರು ಹಾಗೂ ಯುವಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!