ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಕೋರಿಕೆ | ಹೊಸ ಉಡುಪು ಧರಿಸಿ ಸುರಕುಂಬಾ ಸಿಹಿ ಸವಿದು ಸಂಭ್ರಮ

ಯಾದಗಿರಿ: ಜಿಲ್ಲಾದ್ಯಂತ ಮುಸ್ಲಿಂ ಸಮುದಾಯದವರು ಶ್ರದ್ಧಾ, ಭಕ್ತಿಯಿಂದ ಸೋಮವಾರ ರಂಜಾನ್ ಹಬ್ಬವನ್ನು ಆಚರಿಸಿದ್ದು ಕಂಡು ಬಂತು.

ರಂಜಾನ್ ತಿಂಗಳು ಪೂರ್ತಿ ಉಪವಾಸ ಆಚರಿಸಿ, ಕೊನೆಯಲ್ಲಿ ಚಂದ್ರ ದರ್ಶನ ಆದ ಮರುದಿನ ಈ ಹಬ್ಬವನ್ನು  ಆಚರಿಸುವುದು ವಾಡಿಕೆ.

ಯಾದಗಿರಿ, ಗುರುಮಠಕಲ್, ಸುರಪುರ, ಶಹಾಪೂರ ದಲ್ಲಿ ಹಬ್ಬದ ಅಂಗವಾಗಿ ಬೆಳಿಗ್ಗೆ ಮುಸ್ಲಿಂ ಸಮುದಾಯದವರು ಹೊಸ ಉಡುಪು ಧರಿಸಿ, ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡು ಪ್ರಾರ್ಥನೆ ಬಳಿಕ, ಒಬ್ಬರೊಬ್ಬರು ಅಪ್ಪಿಕೊಂಡು ಶುಭಾಶಯ ಕೋರಿದರು.

ಗುರುಮಠಕಲ್ ನಲ್ಲಿ ಪ್ರಾರ್ಥನೆಯಲ್ಲಿ ಖತೀಬ್ ಮುಜಫರ್ ಅಲಿ, ಸದರ್ ಪಾಶಾ ಪ್ಯಾರೆ, ಸೈಯದ್ ಅಕ್ಬರ್, ಎಸ್ ಕೆ ಮೈನೋದ್ದಿನ್, ಫಯಾಜ್ ಅಹ್ಮದ್ , ಸೈಯದ್ ಬಾಬಾ, ಅನ್ವರ್ ಅಹ್ಮದ್, ಚಾಂದ ಪಾಷಾ, ಅಖ್ತರ್ ಪ್ಯಾರೆ, ವಹೀದುದ್ದೀನ್, ಆದಿಲ್ ಸಾಜಿದ್ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!