ಜಿಲ್ಲಾದ್ಯಂತ ವಿಜೃಂಭಣೆಯ ಶ್ರೀ ರಾಮ ನವಮಿ ಆಚರಣೆ | ಅನ್ನದಾನ ಆಯೋಜನೆ | ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದ ಯುವ ಸಮೂಹ
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ । ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ॥
ಗುರುಮಠಕಲ್: ಸನ್ನಡತೆ ಮೂಲಕ ಶ್ರೀ ರಾಮಚಂದ್ರರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿತೀನ್ ತಿವಾರಿ ಹೇಳಿದರು.
ಇಲ್ಲಿನ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಆಯೋಜಿಸಿದ್ದ ಶ್ರೀ ರಾಮ ನವಮಿ ಹಿನ್ನೆಲೆ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಇಂದು ಶ್ರೀ ರಾಮ ನವಮಿ ಇಂಡೋನೇಷ್ಯಾ ದಲ್ಲಿ ಆಚರಣೆ ಹೆಚ್ಚಾಗಿ ಕಾಣುತ್ತೇವೆ. 9 ದಿನ ರಾಮಚರಿತ ಮಾನಸ ಪಾರಾಯಣವೂ ನಡೆಯುತ್ತಿದೆ ಎಂದರು.
ಶ್ರೇಷ್ಠ ಆದರ್ಶಗಳ ಸ್ಥಾಪನೆ, ತಪ್ಪನ್ನು ತಿದ್ದಿಕೊಳ್ಳಲು ಪ್ರಭು ಶ್ರೀ ರಾಮ ಅವಕಾಶ ನೀಡಿದ್ದಾರೆ. ದುರಾಹಂಕಾರ ಸರ್ವ ನಾಶಕ್ಕೆ ಕಾರಣ ಎಂದು ಜೀವನದುದ್ದಕ್ಕೂ ಎಳೆ ಎಳೆಯಾಗಿ ಹೇಳಿದ್ದಾರೆ ಎಂದರು.
ಅಸುರ ಶಕ್ತಿಗಳು ದೇಶ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. 450 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಸಂಯಮ ದಿಂದ ಶ್ರೀ ರಾಮ ಪ್ರಭುಗಳ ಭವ್ಯ ಮಂದಿರ ನಿರ್ಮಾಣವಾಗಿದೆ. ಇದು ಭವ್ಯ ಸನಾತನದ ಪ್ರತೀಕವಾಗಿದೆ ಎಂದರು.
ಎಲ್ಲಿಯೂ ಹಿಂದೂಗಳು ಅನ್ಯ ಧರ್ಮೀಯರಿಗೆ ಅಸಹ್ಯ ಆಗುವ ಕೆಲಸ ಮಾಡಿಲ್ಲ. ಆದರೇ ಹಿಂದುಗಳ ತಾಳ್ಮೆ ಪರೀಕ್ಷೆ ಮಾಡುವ ಕುತಂತ್ರಗಳು ದೇಶದೆಲ್ಲೆಡೆ ನಡೆಯುತ್ತಿದ್ದು ಹಿಂದುಗಳು ಸಂಘಟಿ ತರಾಗಿ ಜಾಗೃತವಾಗಬೇಕು ಎಂದು ಅಭಿಪ್ರಾಯಪಟ್ಟರು.
ಸತ್ಯವೇ ಶ್ವಾಸ, ಧರ್ಮವೇ ಜೀವನ ಎಂಬ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಗುಣಗಳು ಎಂದೆಂದಿಗೂ ವಿಶ್ವಕ್ಕೆ ಪ್ರೇರಣೆಯಾಗಿವೆ ಎನ್ನುವುದು ಸತ್ಯ.
ಸಹನಶೀಲ, ಕರುಣೆಯ ಸಾಗರನಾದ ರಾಮನು ಪರಿಪೂರ್ಣ ಮಗನೂ, ಪತಿಯೂ, ರಾಜನೂ ಆಗಿದ್ದ ಪ್ರಭು ಶ್ರೀರಾಮ.
ಶ್ರೀ ರಾಮ ನವಮಿ ಹಿನ್ನೆಲೆ ಎಸ್ ಎಸ್ ಕೆ ವೃತ್ತದಲ್ಲಿ ಅನ್ನದಾನ ನೆರವೇರಿತು. ಈ ವೇಳೆ ಬಿಜೆಪಿ ಅಧ್ಯಕ್ಷ ನರಸಿಂಹಲು ನೀರೆಟಿ, ಮುಖಂಡ ಚಂದುಲಾಲ ಚೌದರಿ, ಯಶವಂತರಾವ ಚೌದರಿ, ರಾಮಚಂದ್ರರಾವ್ ಧಡಂಗೆ, ಅಂಬಾದಾಸ ಜೀತ್ರಿ, ಮೋಹನ್ ಬುರಬುರೆ, ಹೀರಾಲಾಲ ಬಸೂದೆ, ಬಾಲಾಜಿ ತಗಡಘರ, ಸುರೇಶ ಗೋಂಗಲೆ, ಮಾರುತಿರಾವ್ ಮಿಸ್ಕಿನ್, ನರೇಶ ಗೋಂಗಲೆ, ವಿಠ್ಠಲರಾವ ಪೂಜಾರಿ, ಹಣಮಂತರಾವ ರಂಗಾಪೂರ, ನಂದಕಿಶೋರ್, ತುಕಾರಾಮ, ರುಪೇಶ ಬಸೂದೆ, ರಾಮು, ವೆಂಕಟಪ್ಪ ಅವಂಗಾಪುರ, ರಾಮುಲು, ಕಾಶಪ್ಪ, ನರಸಿಂಹಲು ಗಂಗನೋಳ್, ರಮೇಶ ಹೂಗಾರ್, ವೆಂಕಟೇಶ, ಕಿಟ್ಟಪ್ಪ ಬೈಂಡ್ಲ, ನರೇಶ ಬೈಂಡ್ಲ, ನರಸಪ್ಪ ಇತರರು ಇದ್ದರು.
