ಯಾದಗಿರಿ : ಯಾದಗಿರಿ ಜಿಲ್ಲೆಯ ಗೃಹರಕ್ಷಕ ಘಟಕಗಳಲ್ಲಿ ಖಾಲಿ ಇರುವ ಗೃಹರಕ್ಷಕ ಸ್ವಯಂ ಸೇವಕ (Voluntery) ಸ್ಥಾನಗಳಿಗೆ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಗೃಹರಕ್ಷಕದಳದ ಆಯ್ಕೆ ಸಮಿತಿ ಸಮಾದೇಷ್ಟರು ಹಾಗೂ ಸದಸ್ಯ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್ ಎಸ್.ಪಿ ಅವರು ತಿಳಿಸಿದ್ದಾರೆ.

ಜಿಲ್ಲೆಯ ಗೃಹರಕ್ಷಕದಳದ ಘಟಕಗಳಾದ ಯಾದಗಿರಿ, ಶಹಾಪುರ, ಸುರಪುರ, ಕೆಂಭಾವಿ, ಹುಣಸಗಿ, ಗುರುಮಠಕಲ್, ಸೈದಾಪುರ ಘಟಕಗಳಲ್ಲಿ ಖಾಲಿ ಇರುವ 158 ಸ್ವಯಂ ಸೇವಕ ಗೃಹರಕ್ಷಕ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುವ ಸಂಬಂಧ 3 ವರ್ಷಗಳ ಅವಧಿಗೆ ಅರ್ಹ ಅಭ್ಯರ್ಥಿ ಮತ್ತು ಸೇವೆ ಸಲ್ಲಿಸಲು ಇಚ್ಛೆ ಉಳ್ಳವರಿಂದ ಅರ್ಜಿ ಆಹ್ವಾನಿಸಿದೆ.

ಸ್ವಯಂ ಸೇವಕ ಗೃಹರಕ್ಷಕ ಸ್ಥಾನಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಾಮಾನ್ಯ ಷರತ್ತುಗಳು. ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಉತ್ತೀರ್ಣ ನಾಗಿರಬೇಕು, ಅಭ್ಯರ್ಥಿ 19 ವರ್ಷ ತುಂಬಿರಬೇಕು, 40 ವರ್ಷ ಒಳಗಿರಬೇಕು, ಯಾದಗಿರಿ, ಶಹಾಪುರ, ಸುರಪುರ, ಕೆಂಭಾವಿ, ಹುಣಸಗಿ, ಗುರುಮಠಕಲ್, ಸೈದಾಪುರ ಘಟಕಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾದಗಿರಿ ಜಿಲ್ಲೆಯ ವ್ಯಾಪ್ತಿಯೊಳಗೆ ವಾಸವಾಗಿರಬೇಕು. ಈ ಬಗ್ಗೆ ಆಧಾರ್ ಕಾರ್ಡ, ಚುನಾವಣೆ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯಲ್ಲಿ ಸ್ಥಳೀಯ ವಿಳಾಸದ ಮಾಹಿತಿ ಹೊಂದಿರಬೇಕು.

ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಮತ್ತು ವರ್ಗಾವಣೆ ಪ್ರಮಾಣ ಪತ್ರ ಜೆರಾಕ್ಸ್ ಪ್ರತಿಯನ್ನು ಲಗತ್ತಿಸುವುದು. ಆಯ್ಕೆ ವಿಧಾನ ದೈಹಿಕ ಸಾಮರ್ಥ್ಯ, ಮೌಖಿಕ ಸಂದರ್ಶನ ಮುಖಾಂತರ. ಕಡ್ಡಾಯವಾಗಿ ಸರಕಾರಿ ಆಸ್ಪತ್ರೆಯಲ್ಲಿ ಪಡೆದ ದೈಹಿಕ ಸಾಮರ್ಥ್ಯ ಪ್ರಮಾಣ ಪತ್ರ ಲಗತ್ತಿಸುವುದು. ಪುರುಷ ಅಭ್ಯರ್ಥಿಯ ಎತ್ತರ 168 ಸೆ.ಮೀ ಮತ್ತು ತೂಕ ಕನಿಷ್ಠ 50 ಕೆ.ಜಿ ಹೊಂದಿರಬೇಕು.

ಅಭ್ಯರ್ಥಿಯು ಯಾವುದೇ ರಾಜಕೀಯ ಪಕ್ಷಗಳಲ್ಲಿ ತೊಡಗಿರಬಾರದು, ಅಪರಾಧ ಪ್ರಕರಣಗಳಲ್ಲಿ ಬಾಗಿಯಾಗಿರಬಾರದು. ವಿಶೇಷ ಕೌಶಲ್ಯತೆ ಹೊಂದಿರುವವರಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು. (ಕಂಪ್ಯೂಟರ, ಟೈಪಿಂಗ್, ಕನ್ನಡ ಮತ್ತು ಇಂಗ್ಲೀಷ) ಈಜುಗಾರರು, ಕ್ರೀಡೆಗಳು, ಡ್ರೆöÊವಿಂಗ್ (ಲಘು ಮೋಟಾರ ವಾಹನ ಲೈಸೆನ್ಸ್ ಹೊಂದಿರುವವರು), ಅಡಿಗೆ ಭಟ್ಟರು, ಕಾರ್ಪೆಂಟರ್, ಎಲೆಕ್ಟಿçÃಷಿಯನ್, ಪ್ಲಂಬರ್, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟç ಮಟ್ಟದ ಕ್ರೀಡಾಪಟುಗಳಿಗೆ ಪ್ರಾಥಮಿಕ ಆಧ್ಯತೆ ನೀಡಲಾಗುವುದು), ಭರ್ತಿಯಾದ ಗೃಹರಕ್ಷಕರು ಸ್ವಯಂ ಸೇವಕ ಗೃಹರಕ್ಷಕನಾಗಿರುತ್ತಾನೆಯೇ ಹೊರತು ಸರ್ಕಾರಿ ನೌಕರ ಅಥವಾ ಸಿಬ್ಬಂದಿಯಾಗಿರುವುದಿಲ್ಲಾ. ಗೃಹರಕ್ಷಕ ದಳ ಸಂಸ್ಥೆಯು ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಈ ಸಂಸ್ಥೆಯಲ್ಲಿ 3 ವರ್ಷದ ಅವಧಿಗೆ ಮಾತ್ರ ಸೇವೆ ಸಲ್ಲಿಸಬಹುದಾಗಿರುತ್ತದೆ. ಇದು ಖಾಯಂ ನೌಕರಿ ಇರುವುದಿಲ್ಲಾ. ಯಾವುದೇ ಮಾಸಿಕ ಸಂಬಳ ಅಥವಾ ವಿಶೇಷ ಭತ್ಯೆಗಳನ್ನು ನೀಡುವುದಿಲ್ಲಾ. ಸರ್ಕಾರ ನಿಗದಿಪಡಿಸಿರುವ ಗೌರವ ಧನವನ್ನು ಕರ್ತವ್ಯ ನಿರ್ವಹಿಸುವ ಅವಧಿಗೆ ಮಾತ್ರ ಪಾವತಿಸಲಾಗುವುದು.

ಎಚ್ಚರ : ಯಾವುದೇ ಅಭ್ಯರ್ಥಿಯು ಇಲಾಖೆಯ ಹೊರಗಾಗಲಿ ಅಥವಾ ಒಳಗಾಗಲಿ ಉದ್ಯೋಗ ಪಡೆಯುವ ಸಲುವಾಗಿ ಯಾವುದೇ ವ್ಯಕ್ತಿಗೆ ಹಣ ನೀಡುವುದು ಅಥವಾ ಯಾವುದೇ ವಿಧವಾದ ಪಾರತೋಷಕ ನೀಡುವುದು ಮಾಡಬಾರದು ಯಾವುದೇ ವಿಧವಾದ ಹಣ ವಸೂಲಾತಿಗೆ ಯಾರಿಗೂ ಅಧಿಕಾರ ನೀಡಿರುವುದಿಲ್ಲ, ಈ ದಿಶೆಯಲ್ಲಿ ಮಧ್ಯವರ್ತಿಗಳ ಭರವಸೆಗಳಿಗೆ ಮಾರು ಹೋಗಬಾರದೆಂದು ಈ ಮೂಲಕ ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಅರ್ಜಿಗಳನ್ನು ವಿತರಿಸುವ ಸ್ಥಳ : ಸಮಾದೇಷ್ಟರು, ಜಿಲ್ಲಾ ಗೃಹರಕ್ಷಕದಳ ಕಚೇರಿ ಯಾದಗಿರಿ (ಉಚಿತವಾಗಿ ವಿತರಿಸಲಾಗುವುದು). 2025ರ ಏಪ್ರಿಲ್ 29 ರಿಂದ 2025ರ ಮೇ 13ರ ವರೆಗೆ ಅರ್ಜಿ ವಿತರಣೆ ನಡೆಯಲಿದೆ. 2025ರ ಮೇ 19ರ ಒಳಗೆ ಅರ್ಜಿಸಲ್ಲಿಸಬೇಕು, ಹೆಚ್ಚಿನ ಮಾಹಿತಿ ದೂ.ಸಂ.08473200526, ಮೊ.ನಂ.8970428778, 9900700017 (ಕಛೇರಿ ವೇಳೆಯಲ್ಲಿ ಮಾತ್ರ) ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!