ಯಾದಗಿರಿ ತಾಲೂಕಿನ ಮೈಲಾಪೂರದಲ್ಲಿ ಘಟನೆ | 5 ಲಕ್ಷ ನಗದು, ಚಿನ್ನಾಭರಣ ಆಹುತಿ

ಯಾದಗಿರಿ : ತಾಲೂಕಿನ ಮೈಲಾಪೂರದಲ್ಲಿ ಆಕಸ್ಮಿಕವಾಗಿ ಮನೆಗೆ ತಗುಲಿದ ಬೆಂಕಿ ಅಪಾರ ಪ್ರಮಾಣದ ಹಾನಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಗ್ರಾಮದ ಬೂದೆಪ್ಪ ಅವರಿಗೆ ಸೇರಿದ ಮನೆ ಬೆಂಕಿ ಗಾಹುತಿ ಆಗಿದ್ದು, ಮನೆಯಲ್ಲಿಟ್ಟಿರುವ 5 ಲಕ್ಷ ರೂಪಾಯಿ ಹಣ, 40 ಗ್ರಾಂ. ಚಿನ್ನಾಭರಣ, ಆಹಾರ ಧಾನ್ಯ, ಕಿರಾಣಿ ಅಂಗಡಿಯ ವಸ್ತುಗಳು ಸುಟ್ಟು ಕರಕಲಾಗಿದೆ.

ಸ್ಥಳೀಯರಿಂದಲೇ ಬೆಂಕಿ ನಂದಿಸುವ ಕಾರ್ಯ ಆಗಿದೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Spread the love

Leave a Reply

Your email address will not be published. Required fields are marked *

error: Content is protected !!