ವಿಮಾ ಯೋಜನೆಯ ಸದ್ಭಳಕೆಗೆ ಸಲಹೆ | ಐಪಿಪಿಬಿ ವ್ಯವಸ್ಥಾಪಕ ಕೆ.ನಾಗರಾಜ

ಗುರುಮಠಕಲ್: ಭಾರತೀಯ ಅಂಚೆ ಇಲಾಖೆ ಸಹಯೋಗದಲ್ಲಿ ಎಸ್‌ಬಿಐ ಸೇರಿದಂತೆ ಇತರೆ ಸಂಸ್ಥೆಗಳಲ್ಲಿ ಸಾಮಾನ್ಯ ಜನತೆಗೆ ಕೈಗೆಟುಕುವ ಮತ್ತು ಉತ್ತಮ ಭವಿಷ್ಯದ ದೃಷ್ಠಿಯಿಂದ ಹಲವು ಬಗೆಯ ವಿಮಾ ಸೌಲಭ್ಯಗಳಿಗೆ ಅದರ ಪ್ರಯೋಜನ ಭವಿಷ್ಯಕ್ಕೆ ಸಿಗಲಿದೆ. ಅದರ ಪ್ರಯೋಜನ ಪಡೆಯುವಂತೆ ಪೋಸ್ಟ್ ಪೇಮೆಂಟ್ ವ್ಯವಸ್ಥಾಪಕ ಕೆ.ನಾಗರಾಜ ಹೇಳಿದರು.

ಗುರುಮಠಕಲ್ ತಾಲೂಕಿನ ಯಲಸತ್ತಿ ಗ್ರಾಮ ಪಂಚಾಯತಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟಿ ಬ್ಯಾಂಕ್ (ಐಪಿಪಿಬಿ) ವತಿಯಿಂದ ಆರ್ಥಿಕ ಸೇರ್ಪಡೆ ಶಿಬಿರ ಮತ್ತು ಅಂಚೆ ಇಲಾಖೆಯಲ್ಲಿ ವಿಮೆ ಪಡೆದಿದ್ದ ಫಲಾನುಭವಿಯ ಕುಟುಂಬಕ್ಕೆ ವಿಮಾ ಸೌಲಭ್ಯದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಪಘಾತ, ಅಕಾಲಿಕ ಮೃತ, ಅನಾರೋಗ್ಯ ಸಂದರ್ಭದಲ್ಲಾಗುವ ಅನಾಹುತದಿಂದ ಕುಟುಂಬದ ಇತರೆ ಸದಸ್ಯರ ಆರ್ಥಿಕ ಶಕ್ತಿಯೇ ಕುಸಿಯುತ್ತದೆ. ಅಂತಹ ಸಂದರ್ಭದಲ್ಲಿ ಕುಟುಂಬದ ಆರ್ಥಿಕ ಸ್ಥಿರತೆ ಗಮನದಲ್ಲಿಟ್ಟುಕೊಂಡು ವಿಮೆ ಮಾಡಿಸಿದರೆ ನಮ್ಮ ನಂತರದ ಕುಟುಂಬಕ್ಕೆ ಸಹಾಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ವಿಜಯಕುಮಾರ ತೋರಣತಿಪ್ಪ, ಪಂಚಾಯತ ಅಭಿವೃದ್ಧಿ ಅಧಿಕಾರಿ ಗಿರಿಮಲ್ಲಣ್ಣ, ಎಸ್‌ಬಿಐ ವಲಯಾಧಿಕಾರಿ ರಾಜೇಂದ್ರ, ಸಿಬ್ಬಂದಿಗಳಾದ ಕರಣಕುಮಾರ ಜೋಗಿ, ರಾಹುಲ ಹಜಾರೆ, ಜೈಭೀಮ ಸೇರಿದಂತೆ ಗ್ರಾಮದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!