ಪಕ್ಷದ ಕಚೇರಿ, ಗುರುಮಠಕಲ್ ಇಂದಿರಾ ಕ್ಯಾಂಟೀನ್ ಭೇಟಿ
ಯಾದಗಿರಿ : ಪೌರಾಡಳಿತ ಮತ್ತು ಹಜ್ ಸಚಿವರಾದ ಶ್ರೀ ರಹೀಂ ಖಾನ್ ಅವರು ಮೇ 15ರ ಗುರುವಾರ ರಂದು ಯಾದಗಿರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಈ ಕೆಳಕಂಡ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ತಿಳಿಸಿದ್ದಾರೆ.
ಮೇ 15ರ ಗುರುವಾರ ರಂದು ಮಧ್ಯಾಹ್ನ 2 ಗಂಟೆಗೆ ಯಾದಗಿರಿ ಜಿಲ್ಲೆಗೆ ಆಗಮಿಸಿ, ಯಾದಗಿರಿ ಜಿಲ್ಲಾ ಪಕ್ಷದ ಕಛೇರಿ ಭೇಟಿ ಹಾಗೂ ಮುಖಂಡರೊಂದಿಗೆ ಸಭೆ ನಡೆಯಲಿದೆ. ನಂತರ ಅಂದು ಮಧ್ಯಾಹ್ನ 3 ಗಂಟೆಗೆ ಯಾದಗಿರಿ ಜಿಲ್ಲಾಡಳಿತ ಸಭಾಂಗಣದಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಹಕ್ಕುಪತ್ರ ಫಲಾನುಭವಿಗಳ ಕುರಿತು ಸಭೆ ನಡೆಯಲಿದೆ.
ತದನಂತರ ಮಧ್ಯಾಹ್ನ 3.30 ಗಂಟೆಗೆ ಯಾದಗಿರಿ ನಗರಸಭೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3.45 ಗಂಟೆಗೆ ಯಾದಗಿರಿದಿಂದ ನಿರ್ಗಮಿಸಿ, ಸಂಜೆ 4.25 ಗಂಟೆಗೆ ಗುರುಮಠಕಲ್ ಆಗಮಿಸಿ, ಪಕ್ಷದ ಕಛೇರಿ ಭೇಟಿ ಹಾಗೂ ಮುಖಂಡರೊಂದಿಗೆ ಸಭೆ ನಡೆಯಲಿದೆ. ಸಂಜೆ 4.45 ಗಂಟೆಗೆ ಗುರುಮಠಕಲ್ ಇಂದಿರಾ ಕ್ಯಾಂಟೀನ್ ಹಾಗೂ ಪುರಸಭೆ ಭೇಟಿ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
