ಗುರುಮಠಕಲ್ : ಕೃಷಿ ಇಲಾಖೆ ಯಾದಗಿರಿ ವತಿಯಿಂದ ಮಲ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆನಾಶಕ ನಿರೋಧಕ ಬೀ.ಟಿ. ಹತ್ತಿ ಬಿತ್ತನೆ ಮಾಡದಂತೆ ಹಾಗೂ ಯಾವುದೇ ಅನಧಿಕೃತ ಹತ್ತಿ ಬಿತ್ತನೆ ಬೀಜ ಖರೀದಿಸದಂತೆ ರೈತರಿಗೆ ಅರಿವು ಮೂಡಿಸಲಾಯಿತು.

ಜೊತೆಗೆ ಭತ್ತ ಕಟಾವು ನಂತರ ಹುಲ್ಲನ್ನು ಬೆಂಕಿ ಹಚ್ಚಿ ಸುಡದೆ, ಮಣ್ಣಿನೊಂದಿಗೆ ಸೇರಿಸಿ ಭೂಮಿ ಹದ ಮಾಡುವುದರಿಂದ ಮಣ್ಣಿನಲ್ಲಿ ಉಪಯುಕ್ತ ಸೂಕ್ಷ ಜೀವಿಗಳ ಸಂಖ್ಯೆ ಹೆಚ್ಚಾಗಿ ಮಣ್ಣಿನ ಆರೋಗ್ಯ ಸುಧಾರಿಸುತ್ತದೆ ಎಂದು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಸುರೇಶ್, ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ, ಶರಣಬಸವ ಬಿರಾದಾರ ಮತ್ತು ಸಹಾಯಕ ವ್ಯವಸ್ಥಾಪಕ ಸುಭಾಷ್ ನಾಟೀಕರ್ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!