ಕಾಯಕಲ್ಪ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆ

ಯಾದಗಿರಿ: ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ District level award nomination committee ಯಲ್ಲಿ ಕಾಯಕಲ್ಪ ಕಾರ್ಯಕ್ರಮದ ಬಾಹ್ಯ ಮೌಲ್ಯಮಾಪನ ಫಲಿತಾಂಶದ ಬಗ್ಗೆ ಜಿಲ್ಲಾಧಿಕಾರಿಳು ಹಾಗೂ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜ್ಯೋತಿ ಕಟ್ಟಿಮನಿ,  ಜಿಲ್ಲಾ ಗುಣಮಟ್ಟ ಖಾತರಿ ಘಟಕಕ್ಕೆ ಸಂಬಂಧಿಸಿದ ಕಾಯಕಲ್ಪ ಕಾರ್ಯಕ್ರಮದ ಪ್ರಗತಿಯ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು.

ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ 97 ಆರೋಗ್ಯ ಸಂಸ್ಥೆಗಳು ಕಾಯಕಲ್ಪ ಪ್ರಶಸ್ತಿಯನ್ನು ಪಡೆದಿವೆ ಎಂದು ತಿಳಿಸಿ, ಕಳೆದ ವರ್ಷ ಕೇವಲ 47 ಆರೋಗ್ಯ ಸಂಸ್ಥೆಗಳು ಕಾಯಕಲ್ಪ ಪ್ರಶಸ್ತಿ ಹೊಂದಿದ್ದವು. ಆದರೆ ಈ ವರ್ಷ ಜಿಲ್ಲಾ ಆಸ್ಪತ್ರೆ, ತಾಲೂಕಾ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹೊರತುಪಡಿಸಿ 97 ಆರೋಗ್ಯ ಸಂಸ್ಥೆಗಳು ಕಾಯಕಲ್ಪ ಪ್ರಶಸ್ತಿ ಪಡೆದಿದ್ದು ಇನ್ನುಳಿದ ಜಿಲ್ಲಾ ಆಸ್ಪತ್ರೆ, ತಾಲೂಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಕಾಯಕಲ್ಪ ಫಲಿತಾಂಶವನ್ನು ರಾಜ್ಯದಿಂದ ಬರಬೇಕಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೆಂಭಾವಿ ಕಾಯಕಲ್ಪ ಕಾರ್ಯಕ್ರಮದಲ್ಲಿ ಜಿಲ್ಲೆಯ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದೆ ಎಂದು ತಿಳಿಸಿದರು. ಅನಂತರ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಶಿವಪುರ ಜಿಲ್ಲೆಯ ಅತ್ಯುತ್ತಮ ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿದೆ ಜೊತೆಗೆ ಕನೇಕಲ್ ಹಾಗೂ ಯರಗೋಳ ಬಿ ಮೊದಲ ದ್ವಿತೀಯ ಹಾಗೂ ಎರಡನೇ ದ್ವಿತೀಯ ಉತ್ತಮ ಆರೋಗ್ಯ ಕ್ಷೇಮ ಕೇಂದ್ರ ಎಂದು ತಿಳಿಸಿದರು.

ಮುಂದುವರೆದು ಎನ್ ಕ್ಯೂ ಎಸ್ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬೋರಬಂಡ, ಕೊಂಗಂಡಿ. ಬಿ ಮತ್ತು ಯರಗೋಳ.ಬಿ ಈ ಸಂಸ್ಥೆಗಳು ರಾಷ್ಟ್ರೀಯ ಪ್ರಮಾಣಿಕರಿಸಿದ ಪ್ರಯುಕ್ತ ಸಂಬಂಧ ಪಟ್ಟ ಸಂಸ್ಥೆಗಳ ಆಡಳಿತ ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ, ಪ್ರಾಥಮಿಕ ಸುರಕ್ಷತಾ ಅಧಿಕಾರಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಅಭಿನಂದನೆಯನ್ನು ಸಲ್ಲಿಸಲಾಯಿತು.

ಲಕ್ಷ್ಯ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಮಾಣಿಕರಿಸಿದ ತಾಲೂಕಾ ಆಸ್ಪತ್ರೆ ಶಹಾಪುರ ಸಂಸ್ಥೆಯ ಮುಖ್ಯಸ್ಥರಿಗೂ ಹಾಗೂ ಶುಶ್ರೂಷಕಿ ಮೇಲ್ವಿಚಾರಕರಿಗೂ ಲಕ್ಷ್ಯ ಕಾರ್ಯಕ್ರಮದ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ್ ಬಿರಾದರ್, ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಸಾಜಿದ್, ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ. ಸಂಜೀವ್ ಕುಮಾರ್ ರಾಯಚೂರಕರ್, ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ ಪದ್ಮಾನಂದ್ ಗಾಯಕ್ವಾಡ್, ತಾಲೂಕ ಆರೋಗ್ಯ ಅಧಿಕಾರಿ ಡಾ. ಹನುಮಂತ್ ರೆಡ್ಡಿ, ಡಾ ರಮೇಶ್ ಗುತ್ತೇದಾರ,ಡಾ ಸಂಜಯ್ ಚಂದನವರ್ , ಜಿಲ್ಲಾ ಗುಣಮಟ್ಟ ಸಲಹೆಗಾರ ಡಾ. ಪ್ರಸಾದ್ ಕುಲಕರ್ಣಿ ಹಾಗೂ ಗುಣಮಟ್ಟ ಕಾರ್ಯಕ್ರಮ ಸಹಾಯಕ ಶ್ರೀಕಾಂತ್ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!