4 ಕೋ.ರೂ.ಗಳ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ರಿಂದ ಅಡಿಗಲ್ಲು  | ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ | ಮಾಧ್ವಾರ ಹೋಬಳಿ ಕೇಂದ್ರ ಬೇಡಿಕೆಗೆ ಸ್ಪಂದನೆ

ಯಾದಗಿರಿ : ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನ ಬಿಟ್ಟರೆ ಬೇರೆ ಯಾವ ಅನುದಾನವೂ ನಮಗಿಲ್ಲ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಮಾಧ್ವಾರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2024-25ನೇ ಸಾಲಿನ ಲೆಕ್ಕ ಶಿರ್ಷಿಕ ಅಪೆಂಡಿಕ್ಸ್ ಇ ಅನುದಾನದ ಅಡಿಯಲ್ಲಿ ಗುರುಮಠಕಲ್ ಮತಕ್ಷೇತ್ರದ ಮುಧೋಳ, ಯಲಗೇರಾ (ಎಸ್.ಎಚ್-10) ರಿಂದ ಆಂಧ್ರ ಬಾರ್ಡರ (ಎಸ್.ಎಚ್-127) ಕಿ.ಮೀ. 59 ರಿಂದ 64ರ ವರೆಗೆ ರಸ್ತೆ ನಿರ್ಮಾಣ ಅಂದಾಜು ಮೊತ್ತ 4 ಕೋ.ರೂ.ಗಳ ಕಾಮಗಾರಿಯ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಸರ್ಕಾರ ಅನುದಾನ ನೀಡಿದಂತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು. ಕರಿಬೆಟ್ಟ – ನಸಲವಾಯಿ ರಸ್ತೆ ಗೆ 38 ಕೋಟಿ ನೀಡಲಾಗಿದೆ. ಜನರ ಬೇಡಿಕೆ ಹಿನ್ನೆಲೆ ಒಂದೇ ರಸ್ತೆಗೆ 7 ವರ್ಷದಲ್ಲಿ 50 ಕೋಟಿ ಖರ್ಚು ಮಾಡಲಾಗಿದೆ ಎಂದರು.

ಮುಖ್ಯಮಂತ್ರಿ ಕಾರ್ಯಕ್ರಮಕ್ಕು ಮುನ್ನ ನೀರಿನ ಸಮಗ್ರ ಸಮಸ್ಯೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆಯಾಗಿದೆ. 2 ವರ್ಷದಲ್ಲಿ ಪಟ್ಟಣದ ರಸ್ತೆ ಮೂಲ ಸೌಕರ್ಯ ಆಗಿದೆ. ಇನ್ನು ಗ್ರಾಮೀಣ ಪ್ರದೇಶದ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಅನುದಾನ ಬಳಕೆ ಮಾಡಲಾಗುತ್ತದೆ ಎಂದರು. ಎಲ್ಲಾ ಅಧಿಕಾರಿಗಳು ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ, ಹೀಗೆ ಸಹಕಾರ ನೀಡಲು ಮನವಿ ಮಾಡಿದರು.

ಹೋಬಳಿ ಕೇಂದ್ರ, ಸರ್ಕಾರದ ಮಟ್ಟದಲ್ಲಿ ಚರ್ಚೆ: ಮಾಧ್ವರ ಹೋಬಳಿ ಕೇಂದ್ರ ಮಾಡಬೇಕು ಎನ್ನುವ ಬೇಡಿಕೆ ಇದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ಜನರ ಬೇಡಿಕೆ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಜನರ ಸಮಸ್ಯೆಗಳಿಗೆ ಪರಿಹಾರ: ವೇದಿಕೆ ಕಾರ್ಯಕ್ರಮದ ಬಳಿಕ ಶಾಸಕರು ಗ್ರಾಮೀಣ ಭ್ಗದ ಜನರ ಸಮಸ್ಯೆಗಳನ್ನು ಆಲಿಸಿದರು. ಸ್ಥಳದಲ್ಲಿಯೇ ಇದ್ದ ತಾ.ಪಂ. ಅಧಿಕಾರಿ, ಜೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದರು.

ಯಾದಗಿರಿ ಉಪ ವಿಭಾಗ ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ ಪರಶುರಾಮ ಪ್ರಾಸ್ತಾವಿಕವಾಗಿ ಮಾತನಾಡಿ, ಜನರ ಬೇಡಿಕೆ ಇರುವುದರಿಂದ 2.27ಕಿ.ಮೀ. ರಸ್ತೆ ಕಾಮಗಾರಿ ಕಾಲಾವಧಿಯಲ್ಲಿ ಗುಣಮಟ್ಟದಿಂದ ನಿರ್ವಹಣೆ ಮಾಡಲು ಹೇಳಿದರು.

ಮಾಧ್ವಾರ ಗ್ರಾಮ ಪಂಚಾಯತ ಅಧ್ಯಕ್ಷ ಶಂಕ್ರಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಶುಭಾಷ ಕಟಕಟೆ, ತಾ.ಪಂ. ಅಧಿಕಾರಿ ಅಂಬ್ರೇಷ ಪಾಟೀಲ್,  ಜೆಸ್ಕಾಂ ಅಧಿಕಾರಿ ರಾಠೋಡ, ಸೈದಾಪುರ ಪಿಐ ವಿನಾಯಕ, ಗುತ್ತಿಗೆದಾರ ಚಿದಾನಂದಪ್ಪ ಕಾಳಬೆಳಗುಂದಿ, ರಾಘವೇಂದ್ರ ವಡವಟ್, ಮಲ್ಲಿಕಾರ್ಜುನ ಅರುಣಿ ಸೇರಿದಂತೆ ಹಲವು ಗಣ್ಯರು, ಜನಪ್ರತಿನಿಧಿಗಳು, ಕಾರ್ಯಕರ್ತರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!