50 ಬೆಡ್ ಆಸ್ಪತ್ರೆ ಮೇಲ್ದರ್ಜೆಗೆ | ಹೆಚ್ಚುವರಿ ಅನುದಾನಕ್ಕೆ ಮನವಿ | ರಿಂಗ್ ರೋಡ್ ನಿರ್ಮಾಣಕ್ಕೆ ಸರ್ವೇ | ಪ್ರಜಾಸೌಧಕ್ಕೆ ಮೊದಲ ಹಂತದ ಅನುದಾನ ಬಿಡುಗಡೆ
ಗುರುಮಠಕಲ್: ಹಳೆಯ ಪೊಲೀಸ್ ವಸತಿ ಗೃಹ ಸ್ಥಳದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ 8.60 ಕೋಟಿ ಅನುದಾನ ಮೊದಲ ಹಂತದಲ್ಲಿ ಮಂಜೂರಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಗುರುಮಠಕಲ್ ಪಟ್ಟಣದಲ್ಲಿ ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ಗುರುಮಠಕಲ್ ಪಟ್ಟಣಕ್ಕೆ ಭೀಮಾನದಿ ಮೂಲದಿಂದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯ ಅಂದಾಜು ಮೊತ್ತ 2475 ಲಕ್ಷ ರೂ.ಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಾಯಚೂರಿನಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದು, ಶೀಘ್ರವೇ ಕಾಮಗಾರಿಗೆ ಚಾಲನೆ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು.
ನೀರಿನ ತೊಂದರೆ ಆಗದಂತೆ ಹೊಸ ಮೋಟರ್ ಅಳವಡಿಕೆಗೆ ಆದ್ಯತೆ ನೀಡಲಾಗಿದೆ. 25 ಕೋಟಿ ಅನುದಾನ ಯೋಜನೆಯಾಗಿದ್ದು, 5-6 ಬಾರಿ ಮಂತ್ರಿಗಳ ಜೊತೆ ಚರ್ಚೆ ಮಾಡಲಾಗಿದೆ. 15 – 20ಕೋಟಿ ಹೆಚ್ಚುವರಿ ಅನುದಾನ ಭರವಸೆ ನೀಡಿದ್ದು, ಅಧಿಕಾರಿಗಳಿಂದ ವರದಿ ತರಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಇನ್ನು 3 ಸಾವಿರ ನಳಗಳಿಗೆ ಅನುದಾನಬೇಕಿದೆ. ಕಾಮಗಾರಿ ಗುಣಮಟ್ಟದಿಂದ ಆಗಬೇಕು, ಸಕಾಲದಲ್ಲಿ ನಡೆಯಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಅಭಿವೃದ್ಧಿ ವಿಷಯದಲ್ಲಿ ಪುರಸಭೆ ಸದಸ್ಯರು ಸಹಕಾರ ನೀಡಲು ಹೇಳಿದರು.

ಗುರುಮಠಕಲ್ ಗೆ ಹೊಸ ಪೊಲೀಸ್ ಠಾಣೆ, ಸಬ್ ರಿಜಿಸ್ಟ್ರಾರ್ ಕಚೇರಿ, ಬಿಇಓ ಕಚೇರಿ ಸ್ಥಾಪನೆಗೆ ಸಂಬಂಧಿಸಿದಂತೆ ಸಚಿವರ ಜೊತೆ ಮಾತನಾಡಲಾಗಿದೆ ಎಂದರು. ಅಪರಾಧ ಪ್ರಮಾಣ ತಡೆಗೆ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷೆ ಜಯಶ್ರೀ ಪೋ.ಪಾಟೀಲ್, ಉಪಾಧ್ಯಕ್ಷೆ ರೇಣುಕಾ ಪಡಿಗೆ, ಕಲಬುರಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ನರಸಿಂಹರಡ್ಡಿ ಎನ್, ಯಾದಗಿರಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ ಕುಮಾರ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಪುರಸಭೆ ಕಿ.ಅಭಿಯಂತರರು ಅಬ್ದುಲ್ ಅಲೀಮ್ , ತಹಸೀಲ್ದಾರ ಶಾಂತಗೌಡ ಬಿರದಾರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಪಾಟೀಲ, ಸಿಡಿಪಿಓ ಶರಣಬಸಪ್ಪ, ಪಿಐ ವೀರಣ್ಣ ದೊಡ್ಡಮನಿ, ಜೆಡಿಎಸ್ ಜಿಲಾಧ್ಯಕ್ಷ ಸುಭಾಷ ಕಟಕಟೆ, ಶರಣು ಆವಂಟಿ, ಪ್ರಕಾಶ ನೀರೆಟಿ, ಬಸಣ್ಣ ದೇವರಹಳ್ಳಿ, ಸೇರಿದಂತೆ ಪುರಸಭೆ ಸದಸ್ಯರು, ಗಣ್ಯರು, ಕಾರ್ಯಕರ್ತರು ಇದ್ದರು.
