ಗುಣಮಟ್ಟದ ಕಾಮಗಾರಿ ನಿರ್ವಹಿಸಿ |ಕಳಪೆ ಕಾಮಗಾರಿ ಕಂಡರೆ ಅಮಾನತಿಗೆ ಶಿಫಾರಸ್ಸು | ಮಾಜಿ ಸಚಿವ, ನಿಗಮ ಅಧ್ಯಕ್ಷ ಬಾಬುರಾವ ಚಿಂಚನಸೂರ ಎಚ್ಚರಿಕೆ

ದೇಶದ ಪ್ರಭಾವಿ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿಯಾಗುವ ಯೋಗ ಇದೆ. ತ್ಯಾಗದ ಜೀವನ ಸಾಗಿಸುತ್ತಿದ್ದೇನೆ. ನನ್ನ ಹುಟ್ಟು – ಸಾವು ಜನರ ಸೇವೆಗಾಗಿಯೇ ಇದೆ. ಸ್ವಲ್ಪದರಲ್ಲೇ ಸೋಲಾಗಿದೆ. ನಮ್ಮದೇ ಸರ್ಕಾರ ಅಧಿಕಾರದಲ್ಲಿದೆ ಜನರ ಕೆಲಸ ಮಾಡುವೆ – ಬಾಬುರಾವ ಚಿಂಚನಸೂರ, ಮಾಜಿ ಸಚಿವರು, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರು.

ಗುರುಮಠಕಲ್: ಸರ್ಕಾರದ ಯೋಜನೆಯ ಲಾಭ ಜನರಿಗೆ ಕಲ್ಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಯೋಜನೆ ಅನುಷ್ಠಾನ ಮಾಡಬೇಕು ಎಂದು ಮಾಜಿ ಸಚಿವರೂ ಆದ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ ಚಿಂಚನಸೂರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದಲ್ಲಿ ಕೈಗೆತ್ತಿಕೊಂಡ ಅಮೃತ 2.0 ಯೋಜನೆ ಯಡಿ ಮಂಜೂರಾದ 2475 ಲಕ್ಷಗಳ ಕಾಮಗಾರಿ ಪ್ಲಾನ್ ವೀಕ್ಷಿಸಿ ಪಟ್ಟಣದ ಅತಿಥಿ ಗೃಹದಲ್ಲಿ ಮಾತನಾಡಿದರು.

ಕರ್ನಾಟಕ  ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಂದ ಯೋಜನೆಯ ಸಮಗ್ರ ಮಾಹಿತಿ ಪಡೆದರು. ದೇಶದ ಮಹಾನ್ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಆಳಿದ ಕ್ಷೇತ್ರದಲ್ಲಿ ಉತ್ತಮ ಕಾಮಗಾರಿ ಆಗಬೇಕು. ತಮ್ಮ 50 ವರ್ಷದ ರಾಜಕೀಯ ಜೀವನದಲ್ಲಿ ಹಲವು ಸಚಿವ ಸ್ಥಾನ ಪಡೆದು ಜನ ಸೇವೆ ಮಾಡಿರುವುದಾಗಿ ಹೇಳಿದರು.

ಇದೇ ವೇಳೆ ಅಧಿಕಾರಿಗಳಿಂದ ಯೋಜನೆ ಸಂಪೂರ್ಣ ಮಾಹಿತಿ ಪಡೆದರು. ಮುಂದಿನ 15 ದಿನದಲ್ಲಿ ಕಾಮಗಾರಿ ವೀಕ್ಷಣೆ ಮಾಡಲು ಆಗಮಿಸುವುದು ಆಗಿ ಹೇಳಿದ ಅವರು ಕೆಲಸ ಕಳಪೆಯಾದರೆ ಸಹಿಸಲ್ಲ, ಅಧಿಕಾರಿಗಳ ಅಮಾನತಿಗೆ ಶಿಫಾರಸ್ಸು ಮಾಡಲಾಗುವುದು ಎಂದರು.

ಅಧಿಕಾರಿಗಳಾದ ಅಶೋಕ ರಾಠೋಡ, ರಾಜಕುಮಾರ, ಪುರಸಭೆ ಉಪಾಧ್ಯಕ್ಷೆ ರೇಣುಕಾ ಪಡಿಗೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಚಪೆಟ್ಲಾ, ಪ್ರಮುಖರಾದ ಬಸವರಾಜ ದಳಪತಿ, ಬಾಲಪ್ಪ ನೀರೆಟಿ, ಭೀಮಶಪ್ಪ ರಾಂಪೂರ, ಬಸವಂತರಾಜ ನೀರೆಟಿ, ಭಗವಂತ ರೆಡ್ಡಿ ಕೊಂಕಲ್, ಪುರಸಭೆ ಸದಸ್ಯರಾದ ಖಾಜಾ ಮೈನೋದ್ದೀನ್, ಪಾಪ ರೆಡ್ಡಿ, ಅನ್ವರ್ ಅಹ್ಮದ್, ಚಾಂದ ಪಾಷಾ, ಲಿಂಗಪ್ಪ ತಾಂಡೂರಕರ್, ಮಾಣಿಕ ಮುಕಡಿ, ನರೇಶ್ ಮುದಿರಾಜ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!