ಹೊಸ ನಾಯಕತ್ವದಿಂದ ಕೈ ಕಾರ್ಯಕರ್ತರಲ್ಲಿ ಸಂಭ್ರಮ

ಗುರುಮಠಕಲ್: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರಾಗಿ ಪ್ರಿಯಾಂಕ ಖರ್ಗೆ ಅವರು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ವಿವಿಧ ವೃತ್ತಗಳಲ್ಲಿ ಸಂಭ್ರಮಾಚರಣೆ ಆಚರಿಸಲಾಯಿತು.

ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ವೃತ್ತಿ, ಗಂಗ ಪರಮೇಶ್ವರಿ ವೃತ್ತ ಸೇರಿದಂತೆ ಹಲವೆಡೆ ಕಾರ್ಯಕರ್ತರು ಉತ್ಸಾಹದಿಂದ ಜಿಮ್ ಘೋಷಣೆ ಕೂಗಿ ಸಿಹಿ ಹಂಚಿ ಸಂಭ್ರಮಪಟ್ಟರು.

ಈ ವೇಳೆ ಹಿರಿಯರಾದ ಬಸವರಾಜ ದಳಪತಿ, ಬಸವಂತರಾಜ ನೀರೆಟಿ, ವಹೀದ ಚಿಂತಕುಂಟಿ, ಅಶೋಕ ಶನಿವಾರಂ, ಲಿಂಗಪ್ಪ ತಾಂಡೂರಕರ್, ವಸಂತರಾವ ಹಬೀಬ್, ಕಾಶಪ್ಪ, ಭೀಮಶಪ್ಪ ಕೆಳಮನಿ, ನರೇಶ್ ಮುದಿರಾಜ, ಶರಣಪ್ಪ, ಹುಸೇನಪ್ಪ, ರವಿ, ರಫೀಕ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!