ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ | ಮಹೇಶರಡ್ಡಿ ಮುದ್ನಾಳ ಹೇಳಿಕೆ
ಯಾದಗಿರಿ: ಶ್ರೀಕ್ಷೇತ್ರ ಧರ್ಮಸ್ಥಳ ಅಪಪ್ರಚಾರ ಕುರಿತ ಸಂಪೂರ್ಣ ತನಿಖೆಯನ್ನು ಕೂಡಲೇ ಎನ್‍ಐಎಗೆ ವಹಿಸಲು ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಆಗ್ರಹಿಸಿದರು.
ನಗರದ ಸುಭಾಷ್ ವೃತ್ತದಲ್ಲಿ ಬಿಜೆಪಿ ಯಾದಗಿರಿ ಮತಕ್ಷೇತ್ರದಿಂದ ನಡೆದೆ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂಬ ವಿಚಾರ ಚರ್ಚೆಗೆ ಒಳಪಟ್ಟಿದೆ ಹಾಗೂ ಬುರುಡೆ ವ್ಯಕ್ತಿಯ ಪ್ರಾಥಮಿಕ ತನಿಖೆ ನಡೆಸುತ್ತಿದ್ದರೆ ಇಂಥ ಅಪಪ್ರಚಾರ ನಡೆದು ಕೋಟ್ಯಂತರ ಭಕ್ತರ ಮನಸ್ಸಿಗೆ ಘಾಸಿ ಆಗುತ್ತಿರಲಿಲ್ಲ ಎಂದರು.
ಬುರುಡೆ ವ್ಯಕ್ತಿ ಮತ್ತು ಸುಜಾತ ಭಟ್ ವಿಷಯದಲ್ಲಿ ಮಾಧ್ಯಮಗಳು ಎಲ್ಲ ವಿಚಾರಗಳನ್ನು ಬೆಳಕಿಗೆ ತಂದಿವೆ ಬಿಜೆಪಿ ಸೇರಿ ಎಲ್ಲ ಪಕ್ಷದವರು ಕೇಸರಿ ಧ್ವಜ ಕಟ್ಟಿ ಮಂಜುನಾಥ ಸ್ವಾಮಿ ಜೊತೆ ಇದ್ದೇವೆ ಎಂದು ರ್ಯಾಲಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಮಾತನಾಡಿದ ಅವರು ಧರ್ಮಸ್ಥಳದ ಘಟನೆಯಿಂದ ಸರಕಾರಕ್ಕೆ ಕಳಂಕ ಬಂದಿದೆ ಆ ಕಳಂಕದಿಂದ ಹೊರಗೆ ಬರಬೇಕಿದೆ ಈ ದುಷ್ಕøತ್ಯದ ಹಿಂದೆ ಇರುವ ಸಂಘಟನೆಗಳು, ದುಷ್ಟ ಶಕ್ತಿಗಳ ಬಗ್ಗೆ ಸಮರ್ಪಕ ತನಿಖೆ ಆಗಬೇಕಿದೆ.
ಅಪಪ್ರಚಾರ ಮಾಡುವ ದುಷ್ಟ ಶಕ್ತಿಗಳು ಇದೇ ರೀತಿ ಇನ್ನೊಂದು ಹಿಂದೂ ದೇವಾಲಯದ ವಿರುದ್ಧ ಷಡ್ಯಂತ್ರ ಮಾಡಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳದ ಪವಿತ್ರ ಕ್ಷೇತ್ರದ ಕುರಿತು ದಾರಿಯಲ್ಲಿ ಹೋಗುವ ಬುರುಡೆ ಹಿಡಿದ ವ್ಯಕ್ತಿಯೊಬ್ಬ ಬಂದು ಬುರುಡೆ ಹೊಡೆದರೆ ಆ ವ್ಯಕ್ತಿಯ ಹಿನ್ನೆಲೆ ಏನು ಅವನ ಹಿಂದಿರುವ ಶಕ್ತಿಗಳು, ಯಾವ ಸಂಘಟನೆಗಳು ಕೆಲಸ ಮಾಡುತ್ತಿವೆ ಎಂದು ಮಾಹಿತಿ ಸಂಗ್ರಹಿಸಬೇಕಿತ್ತು ಆದರೆ ಆತುರ ಆಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರಕುಂದಿ, ಜಿ.ಪಂ ಮಾಜಿ ಸದಸ್ಯ ಸಿದ್ದಣ್ಣಗೌಡ ಕಾಡಂನೋರ ಮತ್ತು ಉಮರಡ್ಡಿಗೌಡ ನಾಯ್ಕಲ್, ಜಿಲ್ಲಾ ವಕ್ತಾರ ಮತ್ತು ನಗರಸಭೆ ಸದಸ್ಯ ಹಣಮಂತ ಇಟಗಿ, ಯುಡ ಮಾಜಿ ಅಧ್ಯಕ್ಷ ಬಸವರಾಜ ಚಂಡ್ರಕಿ, ಓಬಿಸಿ ರಾಜ್ಯ ಕಾರ್ಯಕಾರಣಿ ಸದಸ್ಯ ಶರಣುಗೌಡ ಐಕೂರ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೋನ್ನದ, ಜಿಲ್ಲಾ ಕಾರ್ಯದರ್ಶಿ ಪರ್ವತರಡ್ಡಿ ಬೆಂಡಗೊಂಬಳ್ಳಿ, ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ವೀಣಾ ಮೋದಿ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೊರ, ನಗರಸಭೆ ಮಾಜಿ ಅಧ್ಯಕ್ಷ ಸುರೇಶ್ ಅಂಬಿಗೇರ, ನಗರಸಭೆ ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೆರಿ ಮತ್ತು ವಿಜಯಲಕ್ಷ್ಮಿ ನಾಯಕ, ದೊಡ್ಡಪ್ಪ ದೇಸಾಯಿ, ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದಪ್ಪ ರಾಮಸಮುದ್ರ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌವ್ಹಾಣ್, ಸುರೇಶ್ ರಾಠೋಡ, ಶಕುಂತಲಾ ಜಿ, ಸ್ನೇಹ ರಸಳಕರ್, ರಮಾದೇವಿ ಕಾವಲಿ, ಭೀಮಬಾಯಿ ಶೆಂಡಿಗಿ, ಗೋವಿಂದಪ್ಪ ಖಾನಾಪುರ, ಮರಲಿಂಗ ಕೋಂಚಾಟಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಟ್ಟಿಮನಿ, ರಾಮಲಿಂಗಪ್ಪ ಯರಗೋಳ, ರಾಜು ಸ್ವಾಮಿ ಅನಂಪಲ್ಲಿ, ರವಿ ರಾಠೋಡ, ಶಿವಣ್ಣ ಬಡಿಗೇರ, ಸಂಗು ಸಾವು ಅನವಾರ, ಸಾಬು ಚಂಡ್ರಕಿ, ರಾಜಶೇಖರಯ್ಯ ಸ್ವಾಮಿ ಮುಷ್ಠುರ, ಯಂಕಣ್ಣ ದೋರಿ ವಡಿಗೇರ, ಮಲ್ಲು ಸ್ವಾಮಿ ಗುರುಸುಣಗಿ, ಶೇಖಪ್ಪ ದೋರಿ ಹೆಡಗಿಮದ್ರಾ, ತಿಮ್ಮಾರೆಡ್ಡಿ ಟಿ ವಡಿಗೇರಿ, ಶರಣಭೂಪಾಲರಡ್ಡಿ ಗುರಸುಣಗಿ, ಮಲ್ಲುಗೌಡ ಗುರುಸುಣಗಿ, ಅಬ್ಬಣ್ಣ ಉಳ್ಳೆಸೂಗುರ, ಸಂಗರಡ್ಡಿ ಗೋಡೆಹಾಳ, ಮಲ್ಲಣ್ಣಗೌಡ ಗಡ್ಡೆಸೂಗುರ, ಸುಗಣ್ಣಗೌಡ ಬಬಲಾದಿ, ಬಸವರಾಜಪ್ಪಗೌಡ ಬಿರನಾರ, ನಾಗಶೇಟ್ಟಿ ಖಾನಾಪುರ, ಶಂಕರಗೌಡ ಬಸವಂತಪುರ, ಕರೇಮ್ಮ ವರ್ಕನಳ್ಳಿ, ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಶಿವು ಕೋಂಕಲ, ಶರಣಗೌಡ ಹಾಲಿಗೇರಿ, ಮಾರೆಪ್ಪ ವರ್ಕನಳ್ಳಿ, ಭೀಮರಾಯ ಕೊಂಡಿ, ಹೀರಾಸಿಂಗ ರಾಠೋಡ, ಭೀಮರೆಡ್ಡಿಗೌಡ ಹೋಸಹಳ್ಳಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ ಸೇರಿದಂತೆ ನಗರ ಮಂಡಲ ಪದಾಧಿಕಾರಿಗಳು ಗ್ರಾಮೀಣ ಮಂಡಲ ಪದಾಧಿಕಾರಿಗಳು ಅನೇಕರು ಉಪಸ್ಥಿತರಿದ್ದರು.
