ಗುರುಮಠಕಲ್ ನಲ್ಲಿ ವೈಭವದ ನವರಾತ್ರಿ ಆರಂಭ | ನಾರಾಯಣಪುರ ಭವಾನಿ ದೇವಾಲಯ| ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರಿಯ ಸಮಾಜದಿಂದ ಅಂಕಮ್ಮ ದೇವಸ್ಥಾನದಲ್ಲಿ ಘಟಸ್ಥಾಪನೆ | ನಗರೇಶ್ವರ ದೇವಸ್ಥಾನದಿಂದ ಗಣೇಶ ಮಂದಿರದವರೆಗೆ ಭವ್ಯ ಮೆರವಣಿಗೆ

ಗುರುಮಠಕಲ್ : ಸನಾತನ ಪರಂಪರೆಯಲ್ಲಿ ಶಕ್ತಿ ದೇವತೆ ಆರಾಧನೆ ಅತ್ಯಂತ ಮುಖ್ಯ. ಅದರಲ್ಲಿ ವಿಶೇಷವಾಗಿ ನವರಾತ್ರಿ ಹಿನ್ನೆಲೆ ಭವಾನಿ ಮಾತೆಗೆ 9 ದಿನಗಳ ವರೆಗೆ ವಿಶೇಷ ರೂಪದಲ್ಲಿ ಅಲಂಕಾರ ಮಾಡಿ ಪೂಜಿಸುವುದು ವಾಡಿಕೆ.

ಇಲ್ಲಿನ ಸೋಮವಂಶ ಸಹಸ್ತ್ರಾಜುನ ಕ್ಷತ್ರೀಯ ಸಮಾಜ, ನವಯುವಕ ಸಂಘ ಹಾಗೂ ಮಹಿಳಾ ಮಂಡಲದಿಂದ ಪ್ರತಿಷ್ಠಿತ ಅಂಕಮ್ಮ ದೇವಸ್ಥಾನದಲ್ಲಿ ನವರಾತ್ರಿ ಹಿನ್ನೆಲೆ ಬೆಳಿಗ್ಗೆಯಿಂದಲೇ ವಿಶೇಷ ಅಭಿಷೇಕ, ಪೂಜೆ ನೆರವೇರಿತು. ಬಳಿಕ ಯಜ್ಞ ನಡೆಸಲಾಯಿತು. ಸಂಜೆ ಶೈಲಪುತ್ರಿ ರೂಪದಲ್ಲಿ ಅಲಂಕಾರ ಪೂಜೆ ನೆರವೇರಿಸಿ, ಘಟಸ್ಥಾಪನೆ ಮಾಡಲಾಯಿತು. ಇದಕ್ಕೂ ಮೊದಲು ಗಣೇಶ ಮಂದಿರದಲ್ಲಿಯೂ ಭವಾನಿ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಸಂಜೆ ನಗರೇಶ್ವರ ದೇವಸ್ಥಾನದಿಂದ ಮುಖ್ಯ ಬೀದಿಗಳ ಮೂಲಕ ಸಾಂಸ್ಕೃತಿಕ ನೃತ್ಯ ವಾದ್ಯಗಳೊಂದಿಗೆ ಮಂದಿರಕ್ಕೆ ಮೆರವಣಿಗೆ ತಲುಪಿತು.ವೈಭವದ ನವರಾತ್ರಿ ಉತ್ಸವದಲ್ಲಿ 9 ದಿನಗಳ ವರೆಗೆ ದುರ್ಗಾಮಾತೆಯು ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ ದೇವಿ, ಕೂಷ್ಮಾಂಡದೇವಿ, ಸ್ಕಂದಮಾತೆ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿ ರೂಪದಲ್ಲಿ ಭಕ್ತರಿಗೆ ದರ್ಶನ ಪಡೆಯುವ ಭಾಗ್ಯ ಕರುಣಿಸಲಿದ್ದಾಳೆ.

ಮೆರವಣೆಗೆ ಮತ್ತು ಪೂಜಾ ಕಾರ್ಯಕ್ರಮದಲ್ಲಿ ವೇಳೆ ಎಸ್ ಎಸ್ ಕೆ ಸಮಾಜದ ಹಿರಿಯರು, ಯುವಕರು ಹಾಗೂ ಮಹಿಳೆಯರು ಸೇರಿದಂತೆ ಹಿಂದು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!