ಹ್ಯಾವೀಷ್ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಸ್ವಾಗತ, ಬೀಳ್ಕೊಡುಗೆ ಸಮಾರಂಭ
ಗುರುಮಠಕಲ್: ನಮ್ಮ ಭಾಗದ ಬಡ ಮಕ್ಕಳು ಉತ್ತಮ ವ್ಯಾಸಾಂಗ ಮಾಡಲು ದೂರದ ನಗರಗಳಿಗೆ ಹೋಗಬೇಕಿತ್ತು. ಸಂಸ್ಥೆ ಆರಂಭಗೊಂಡು ಅನುಕೂಲವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಶರಣಗೌಡ ಕಂದಕೂರ ಕರೆ ನೀಡಿದರು.
ಇಲ್ಲಿನ ವಿಎನ್ಆರ್ ಫಂಕ್ಷನ್ ಹಾಲ್ ನಲ್ಲಿ ಹ್ಯಾವಿಷ್ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಸ್ವಾಗತ, ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆಯರ್ವೇದ ಔಷಧ ನೀಡುವ ಮೂಲಕ ವೈದ್ಯ ನರಸಿಂಗರಾವ ಅವರ ಇಡೀ ಕುಟುಂಬ ಸೇವೆ ನೀಡುತ್ತಿದೆ. ನಿತ್ಯ 400 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೆ ವ್ಯಕ್ತಪಡಿಸಿದರು.
ಜೀವ, ಜೀವನ ಬರೋದು ಒಂದೇ ಬಾರಿ, ಕ್ಷುಲ್ಲಕ ಕಾರಣಕ್ಕೆ ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಜೀವನದಲ್ಲಿ ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಟೀಕೆ ಮಾಡುವವರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಜೀವನದಲ್ಲಿ ಗುರಿ ಸಾಧಿಸಲು ಸತತ ಪಯತ್ನ ಪಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷ ಡಾ. ಭಾಗರೆಡ್ಡಿ ಸ್ವಾಗತಿಸಿ, ಪಾಸ್ತಾವಿಕ ಮಾತನಾಡಿ, ನಮ್ಮ ಭಾಗದಲ್ಲಿ 3 ವರ್ಷದ ಹಿಂದೆ ಆರಂಭಗೊಂಡ ಕಾಲೇಜು, ಉತ್ತಮ ಫಲಿತಾಂಶ ಪಡೆಯುತ್ತಿದೆ. ಕಲಿಕೆಗೆ ಪೂರಕ ಉತ್ತಮ ಬೋಧಕ ವರ್ಗ ಹೊಂದಿದೆ. ಸಂಸ್ಥೆಯಿಂದ ಈವರೆಗೆ ಉಚಿತ 400 ಕ್ಕಿಂತ ಹೆಚ್ಚು ಮಕ್ಕಳಿಗೆ ಸರ್ಣಬಿಂದು ಲಸಿಕೆ ನೀಡಲಾಗಿದೆ ಎಂದರು.
ಪೂಜ್ಯ ಶಾಂತವೀರ ಗುರುಮುರುಪರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಟ್ರಸ್ಟ್ ಅಧ್ಯಕ್ಷ ಡಾ.ನರಸಿಂಗರಾವ ಕಾಶಿಗಾವ, ಕಾರ್ಯದರ್ಶಿ ಶಿವಲಿಂಗಪ್ಪ ಪಾಟೀಲ್, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ್ ಚಂದ್ರ ಕಟಕಟಿ, ರವಿ ಗವಿನೋಳ, ಡಾ. ಗುರುರಾಜ, ಡಾ. ಮಹೇಶ್ ಸಜ್ಜನ್, ಹಣಮಂತರಾವ ಗೊಂಗಲೆ, ಸುದರ್ಶನ ರೆಡ್ಡಿ, ಕೃಷ್ಣ ರೆಡ್ಡಿ ಇತರರು ಇದ್ದರು. ಪ್ರಮುಖರಾದ ಡಾ.ಜಯವಂತರಾವ ಕಾಶಿಗಾವ, ಯಶವಂತರಾವ, ಧನವಂತರಾವ ಸೇರಿದಂತೆ ಸಂಸ್ಥೆಯ ಸದಸ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
