ಕೆಂಡದಂತ ಬಿಸಿಲಿನಿಂದ ತತ್ತರಿಸಿದ ಜನ | ಮುಂಗಾರು ಮುನ್ನವೇ ಮಳೆ ಆರಂಭ | ತಣ್ಣಗಾದ ವಾತಾವರಣ
ಗುರುಮಠಕಲ್: ಗಡಿ ತಾಲೂಕು ಗುರುಮಠಕಲ್ ಗೆ ಬೆಳ್ಳಂಬೆಳಿಗ್ಗೆ ಆರ್ಭಟಿಸುತ್ತ ಮಳೆರಾಯನ ಎಂಟ್ರಿಯಾಗಿದೆ. ಕೆಂಡದಂತ ಬಿಸಿಲ ಧಗೆಯಿಂದ ತತ್ತರಿಸಿದ್ದ ಜನತೆ ಸಾಕಷ್ಟು ಹೈರಾಣಾಗಿದ್ದರು. ಮಳೆ ಯಾವಾಗ ಬರುತ್ತಪ್ಪ ಎಂದು ಆಗಸದತ್ತ ಮುಖ ಮಾಡಿದ್ದರು. ಇನ್ನೇನು ಮುಂಗಾರು ಆರಂಭಕ್ಕೆ ಮುನ್ನ ಮಳೆಯಾಗಿರುವುದು ಖುಷಿ ತಂದಿದೆ.
ಈ ಹಿಂದೆಯೂ ಸಣ್ಣ ಮಳೆಯಾಗಿತ್ತು, ಬುಧವಾರ ಮಧ್ಯರಾತ್ರಿಯಿಂದಲೇ ಮಿಂಚುತ್ತಿತ್ತು. ಬೆಳಿಗ್ಗೆ 4:20 ರಿಂದ ಆರಂಭವಾದ ಸಾಧಾರಣ ಮಳೆ 5:50 ರ ಹೊತ್ತಿಗೂ ಸುರಿಯುತ್ತಲೇ ಇದೆ. ಇದರಿಂದ ವಾತಾವರಣ ತಂಪಾಗಲಿದ್ದು, ಇಷ್ಟು ದಿನ ಅಯ್ಯೋ ಬಿಸಿಲು ಎನ್ನುತ್ತಿದ್ದರ ಮದ್ಯ ಕೊಂಚ ಬಿಸಿಲು ಶಖೆ ಕಡಿಮೆಯಾಗಬಹುದು.
ತಪ್ಪಿದ ಜಾನುವಾರುಗಳ ಬವಣೆ : ಸಾಕಷ್ಟು ಗ್ರಾಮೀಣ ಭಾಗದಲ್ಲಿ ಜನರು ಕುಡಿಯುವ ನೀರಿನ ಬಾವಿಗಳನ್ನು ಅವಲಂಭಿಸಿದುವುದು, ಬೇಸಿಗೆಯಲ್ಲಿ ಜಲಮೂಲ ಸಂಪೂರ್ಣ ಬತ್ತಿ ಹೋಗಿದೆ. ಇದರಿಂದ ನೀರಿನ ಹಾಹಾಕಾರವು ಅಲ್ಲಲ್ಲಿ ಕಾಣಿಸುತ್ತಿದೆ. ಸುಮಾರು 1 ಗಂಟೆ ಸುರಿದ ಮಳೆಯಿಂದ ಬಾವಿಗಳಲ್ಲಿ ನೀರು ಸಂಗ್ರಹವಾಗಲಿದೆ. ಇನ್ನು ಕೆರೆ-ಕುಂಟೆ, ನಾಲೆಗಳಲ್ಲಿ ನೀರು ತುಂಬಿ ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ತಪ್ಪಲಿದೆ.
ರೈತರ ಮೊಗದಲ್ಲಿ ಮಂದಹಾಸ: ಮುಂಗಾರು ಆರಂಭದಲ್ಲಿ ಕೃಷಿ ಚಟುವಟಿಕೆಗಳಿಗೆ ಚಾಲನೆ ದೊರೆಯಲಿದ್ದು, ಈಗಾಗಲೇ ರೈತರು ಜಮೀನು ಹದಗೊಳಿಸಿ ಗೊಬ್ಬರ ಹಾಕಿ ಸಿದ್ಧತೆಗಳಲ್ಲಿ ತೊರೆದಿದ್ದಾರೆ. ಮುಂಗಾರು ಮುನ್ನ ಮಳೆಯ ಆಗಮನದಿಂದ ರೈತರಲ್ಲಿ ಉತ್ಸಾಹ ಮೂಡಿಸಲಿದ್ದು, ಇನ್ನೊಂದೆರಡು ಮಳೆ ಸುರಿದರೆ ಅವಧಿಗೆ ಕೆಲ ದಿನ ಮುನ್ನವೇ ಬಿತ್ತನೆ ಕಾರ್ಯವು ಆರಂಭಗೊಳ್ಳುವ ಸಾಧ್ಯತೆ ಹೆಚ್ಚಿದೆ.
