ಪಥ ಸಂಚಲನ ಮಾರ್ಗದಲ್ಲಿ ಬಿಗಿ ಪೊಲೀಸ ಭದ್ರತೆ | ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ನೇತೃತ್ವದಲ್ಲಿ  ಬಂದೋಬಸ್ತ್ | ಸಂಘದ ಶಾಖೆಯೊಂದಿಗೆ ಜೋಡಿಸಿಕೊಳ್ಳಲು ಕರೆ

ಗುರುಮಠಕಲ್ : ರಾಷ್ಟ್ರೀಯ ಸೇವಕ ಸಂಘದ ಶತಮಾನೋತ್ಸವ ನಿಮಿತ್ಯ ಆರ್ ಎಸ್ ಎಸ್ ಭವ್ಯ ಪಥ ಸಂಚಲನ ನಡೆಯಿತು. ಈ ಹಿಂದೆ ಅ.25ರಂದು ಪಥ ಸಂಚಲನ ನಡೆಸಲು, ತಾಲೂಕು ಆಡಳಿತಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ಜಿಲ್ಲಾಡಳಿತ ಅಂಗಳಕ್ಕೆ ತಲುಪಿ 3 ದಿನ ಮುಂಚಿತವಾಗಿ ಅರ್ಜಿ ಸಲ್ಲಿಸಿಲ್ಲ ಎನ್ನುವ ಕಾರಣಕ್ಕೆ ಅನುಮತಿ ತಿರಸ್ಕರಿಸಲಾಗಿತ್ತು. ಬಳಿಕ ಆಯೋಜಕರು ಎರಡನೇ ಬಾರಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು, ಅ.31ರಂದು 10 ಷರತ್ತು ವಿಧಿಸಿ ಪಥ ಸಂಚಲನ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿತ್ತು.

ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರದಲ್ಲಿ ಆರ್ ಎಸ್ ಎಸ್ ಪಥ ಸಂಚಲನಕ್ಕೆ ಕಾನೂನು ಸಮರ ನಡೆದರೆ, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಹಳ್ಳಿಯಿಂದ ದಿಲ್ಲಿಗೆ ಕಳಿಸಿದ, ಕಲಬುರಗಿ ಲೋಕಸಭೆ ವ್ಯಾಪ್ತಿಯ ಗುರುಮಠಕಲ್ ಪಟ್ಟಣದಲ್ಲಿ 300 ಸ್ವಯಂಸೇವಕರಿಂದ ವೈಭವಯುತ 4 ಕಿ.ಮೀ. ಮಾರ್ಗದ ಪಥ ಸಂಚಲನ  ನಡೆಯಿತು.ಈ ವೇಳೆ ವಿಭಾಗ ಸಂಚಾಲಕ ಗಿರೀಶ್ ಜಿ ಮಾತನಾಡಿ, ಸಂಘಕ್ಕೆ ವಿಜಯ ದಶಮಿಗೆ 100 ವರ್ಷವಾಯಿತು. ಶೇ.85 ರಷ್ಟು ಜನ ಮೊದಲ ಬಾರಿಗೆ ಗಣವೇಷ ಧರಿಸಿ ಭಾಗವಹಿಸಿದ್ದು, ಇಷ್ಟಕ್ಕೆ ಸಂಘದ ಕಾರ್ಯ ಮುಗಿಯಲ್ಲ. ಸಮಾಜ, ಧರ್ಮದ ಬಗ್ಗೆ ಕಾಳಜಿಯಿಂದ ದೇಶದ ಸೇವೆ ಮಾಡಬೇಕು ಎಂದು ಕರೆ ನೀಡಿದರು.

ಸೇವಾಹೀ ಪರಮೋ ಧರ್ಮ ಸಂಘದ ಧ್ಯೇಯವಾಗಿದೆ. 1 ಲಕ್ಷಕ್ಕೂ ಹೆಚ್ಚು ಚಟುವಟಿಕೆ ಸಂಘದ ಸ್ವಯಂಸೇವಕರು ನಡೆಸುತ್ತಿದ್ದಾರೆ. ನ.8ರಿಂದ 3 ವಾರ ಮನೆ ಮನೆಗೆ ಸಂಪರ್ಕ ಕಾರ್ಯ ನಡೆಯಲಿದೆ. ಇದಕ್ಕೆ ಗಣವೇಷಧಾರಿಗಳು ಪೂರಕವಾಗಿ ಭಾಗವಹಿಸಲು ಮಾಡಲು ಮನವಿ ಮಾಡಿದರು.

ಡಿಸೆಂಬರ್ ಮತ್ತು ಜನವರಿಯಲ್ಲಿ ಹಿಂದು ಸಮಾವೇಶ ಸಾಧು, ಸಂತರ ಸಮ್ಮುಖದಲ್ಲಿ ನಡೆಸುವ ಚಿಂತನೆಯಿದೆ. ಈಗ ಒಂದು ಹೆಜ್ಜೆ ಮುಂದೆ ಬಂದಿದ್ದೇವೆ. ಪ್ರತಿನಿತ್ಯ ಶಾಖೆವೊಂದಿಗೆ ಜೋಡಿಸಿ ಕೊಳ್ಳಲು ಹೇಳಿದರು. ವಿಭಾಗ ಪ್ರಚಾರ ಪ್ರಮುಖ್ ಪ್ರವೀಣ ಕುಲಕರ್ಣಿ, ಸುರಪ್ಪ, ಪ್ರಭು ಮುತ್ತಗಿ, ಬಸ್ಸಪ್ಪ ಸಂಜನೋಳ, ಕೃಷ್ಣಾಜೀ, ಬಿಜೆಪಿ ರಾಜ್ಯ ಕಾರ್ಯದರ್ಶಿ ಲಲಿತಾ ಅನಪೂರ, ಸುರೇಶ ಅಂಬಿಗರ, ಮಂಡಲ ಅಧ್ಯಕ್ಷ ನರಸಿಂಹಲು ನೀರಟಿ, ಕೆ.ದೇವದಾಸ, ಚಂದುಲಾಲ ಚೌಧರಿ, ವಿನಾಯಕ ಜನಾರ್ಧನ, ರವಿ ರೆಡ್ಡಿ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಇದ್ದರು. ಗುರುಮಠಕಲ್ ಅಲ್ಲದೇ ಸುತ್ತಮುತ್ತಲಿನ 300ರಷ್ಟು ಸ್ವಯಂ ಸೇವಕರು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!