ದತ್ತು ಪಡೆದು ಸಮಗ್ರ ಅಭಿವೃದ್ಧಿಗೆ ಕಾರ್ಯ ಯೋಜನೆ | ಜಿಲ್ಲಾ ಪಂಚಾಯತಿ ಸಿಇಓ ರಿಂದ ಕಾರ್ಯಕ್ರಮಕ್ಕೆ ಚಾಲನೆ
ಯಾದಗಿರಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಅವರು ಯಾದಗಿರಿ ತಾಲೂಕಿನ ಅರಕೇರಾ ಬಿ *ಕಾಯಕ ಗ್ರಾಮ* ದತ್ತು ತೆಗೆದುಕೊಂಡು ದತ್ತು ಗ್ರಾಮ ಯೋಜನೆ ಉದ್ಘಾಟಿಸಿದರು.
ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸುವ ಉದ್ದೇಶದಿಂದ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಹಾಗೂ ಪರಿಸರ ರಕ್ಷಣೆ ಸೇರಿ ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು” ಎಂದರು.
ಯೋಜನೆಯಡಿ ಮುಂದಿನ 3 ವರ್ಷಗಳಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶಾಲೆಗಳ ನವೀಕರಣ, ಮನರೇಗಾ, ಕೂಸಿನ ಮನೆ, ಅರಿವು ಕೇಂದ್ರ, ವಿದ್ಯಾರ್ಥಿಗಳಿಗೆ ತಾಂತ್ರಿಕ
ಶಿಕ್ಷಣದ ಅವಕಾಶ, ಪ್ರಾಥಮಿಕ ಆರೋಗ್ಯ ಕೇಂದ್ರದ ಸುಧಾರಣೆ, ಗ್ರಾಮ ರಸ್ತೆ, ಡ್ರೈನೇಜ್ ಮತ್ತು ಬೀದಿ ದೀಪ ವ್ಯವಸ್ಥೆ, ಮಹಿಳಾ ಸ್ವಸಹಾಯ ಗುಂಪ, ಇನ್ನಿತರ ಕೆಲಸಗಳ ಮುಖಾಂತರ ಅಭಿವೃದ್ಧಿ ಮಾಡುಬೇಕು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ತಾ.ಪಂ. ಅಧಿಕಾರಿ, ಸಹಾಯಕ ನಿರ್ದೇಶಕ, ತಾಂತ್ರಿಕ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರಮುಖರು, ಸಾರ್ವಜನಿಕರರು ಇದ್ದರು.
