ಬೆಂಗಳೂರು: ಕರ್ನಾಟಕ ವೀರಶೈವ ಲಿಂಗಾಯತ ಮಹಾ ಫೌಂಡೇಶನ್ ಸಹಯೋಗದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ವೀರಶೈವ ಲಿಂಗಾಯತ ಮಹಾ ಪರಿಷತ್ತು ಪದಾಧಿಕಾರಿಗಳ ಆಯ್ಕೆ ಪ್ರಕಟವಾಗಿದೆ. ಯಾದಗಿರಿಯ ಡಾ.ಸಿದ್ಧಲಿಂಗರೆಡ್ಡಿ ಪಾಟೀಲ್ ಕಂದಕೂರ ಅವರು ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಕಾರ್ಯಾಧ್ಯಕ್ಷರಾಗಿ ಸುಜ್ಞಾನಮೂರ್ತಿ (ರಾಮನಗರ), ಉಪಾಧ್ಯಕ್ಷರಾಗಿ ಕೆ.ಆರ್. ರಾಘವೇಂದ್ರ ( ಬೆಂಗಳೂರು), ಎಂ ಎಸ್. ಮಂಜುನಾಥ್ (ಮೈಸೂರು) , ದಯಾನಂದ ಭಾಕ್ರೆ (ಯಾದಗಿರಿ), ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ರವಿಂದ್ರಸ್ವಾಮಿ (ಕೊಪ್ಪಳ), ಜಯದೇವ್ ( ಮಂಗಳೂರು) ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮುನಿ ಬಸವರಾಜ್( ತುಮಕೂರು), ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ಸುರೇಶ್ ಕಬ್ಬೂರು(ಹಾವೇರಿ),  ಧರ್ಮರಾಜ್ (ಚಾಮರಾಜನಗರ), ಕುಮಾರ್ ಭದ್ರಾವತಿ, (ಶಿವಮೊಗ್ಗ).

ರಾಜ್ಯ ಕಾರ್ಯದರ್ಶಿಗಳಾಗಿ ಶಿವಪ್ರಸಾದ್ (ಉಡುಪಿ), ಶಿವಾನಂದ್ ಪತ್ರಿಮಠ (ಬಾಗಲಕೋಟೆ ), ಸಿದ್ದಲಿಂಗ ಪಾಟೀಲ್ ( ಶಿವಮೊಗ್ಗ), ನಿರ್ದೇಶಕರಾಗಿ ಅನಿಲ್ ಕುಮಾರ್ ಬಿರಾದಾರ್ (ರಾಯಚೂರು), ಯೋಗೀಶ್ ಅಣ್ಣೆ ( ಚಿಕ್ಕಮಗಳೂರು), ಎ. ಎಸ್, ಆನಂದ್ (ಹಾಸನ), ರವೀಂದ್ರಪ್ಪ ಭದ್ರಾವತಿ ( ಶಿವಮೊಗ್ಗ ), ಕರಿಬಸಪ್ಪ (ಹಾವೇರಿ),  ಮಂಜು ಚೆನ್ನವರ್ ( ಹಾವೇರಿ), ಟಿ ವೀರಭದ್ರಪ್ಪ ( ಚಿತ್ರದುರ್ಗ), ವೀರಯ್ಯಸ್ವಾಮಿ ಮಠದ್ (ಕಲಬುರ್ಗಿ) ಆಯ್ಕೆಯಾಗಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!