ಯಾದಗಿರಿ ಹಾಗೂ ಗುರುಮಠಕಲ್ ಮತಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ | ಜು.14 ರ ಸಂಜೆ 4 ಗಂಟೆಯವರೆಗಿನ ಪ್ರಗತಿ ವರದಿ ಬಿಡುಗಡೆ ಮಾಡಿರುವ ಅಧಿಕಾರಿಗಳು

ಯಾದಗಿರಿ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಿದ್ದು, ಯಾದಗಿರಿ ಜಿಲ್ಲೆಯ ಸಹಾಯಕ ಆಯುಕ್ತರ ಕಾರ್ಯಾಲಯದಿಂದ ಮತದಾರರ ಮನೆ-ಮನೆ ಸಮೀಕ್ಷೆ ಹಾಗೂ ಡಿಜಿಟಲೀಕರಣ ಕಾರ್ಯದ ಪ್ರಗತಿ ವಿವರಗಳನ್ನು ಬಿಡುಗಡೆ ಮಾಡಲಾಗಿದೆ.

ಬಿ.ಎಲ್.ಒ ಗಳು ಜೂನ್. 30 ರಿಂದ ಮನೆ-ಮನೆಗೆ ಭೇಟಿ ನೀಡಿ ಎಣಿಕೆ ನಮೂನೆ (Enumeration Form-EF) ವಿತರಿಸುವ ಕಾರ್ಯವನ್ನು ಆರಂಭಿಸಿದ್ದು, ಈ ಪ್ರಕ್ರಿಯೆಯು ಜುಲೈ .29 ರವರೆಗೆ ನಡೆಯಲಿದೆ.

ಕ್ಷೇತ್ರವಾರು ಪ್ರಗತಿ ವಿವರಗಳು: 38- ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರು ಜೂನ್ 16 ರ ವೇಳೆಗೆ ಒಟ್ಟು 2,54,147 ಮತದಾರರು ದಾಖಲಾಗಿದ್ದಾರೆ. ಒಟ್ಟು 2,54,147 (100%) ಎಣಿಕೆ ನಮೂನೆಗಳನ್ನು ಈಗಾಗಲೇ ವಿತರಿಸಲಾಗಿದೆ. ಈ ಪೈಕಿ 70,837 (27.87%) ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, 586 ನಮೂನೆಗಳನ್ನು ಆನ್‍ಲೈನ್ ಮೂಲಕ ಸ್ವೀಕರಿಸಲಾಗಿದೆ. ಒಟ್ಟು 723 ಮತದಾರರನ್ನು ಗುರುತಿಸಲಾಗಿದ್ದು, ಇದರಲ್ಲಿ ಮೃತಪಟ್ಟವರು (284), ಖಾಯಂ ಸ್ಥಳಾಂತರ ಗೊಂಡವರು (209), ಈಗಾಗಲೇ ಹೆಸರು ನೋಂದಾಯಿ ಸಿರುವವರು (159), ಗೈರುಹಾಜರಾದವರು (66) ಮತ್ತು ಇತರರು (5) ಸೇರಿದ್ದಾರೆ.

39- ಗುರುಮಠಕಲ್ ವಿಧಾನಸಭಾ ಕ್ಷೇತ್ರ : ಜೂನ್ 16 ರ ವೇಳೆಗೆ ಒಟ್ಟು 2,59,470 ಮತದಾರರು ದಾಖಲಾಗಿದ್ದಾರೆ. ಒಟ್ಟು 2,59,470 (100%) ಎಣಿಕೆ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 90,668 (34.94%) ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, 363 ನಮೂನೆಗಳನ್ನು ಆನ್‍ಲೈನ್ ಮೂಲಕ ಸ್ವೀಕರಿಸಲಾಗಿದೆ. ಒಟ್ಟು 1541 ಮತದಾರರನ್ನು ಗುರುತಿಸಲಾಗಿದ್ದು, ಇದರಲ್ಲಿ ಮೃತಪಟ್ಟವರು (692), ಖಾಯಂ ಸ್ಥಳಾಂತರಗೊಂಡವರು (523), ಈಗಾಗಲೇ ಹೆಸರು ನೋಂದಾಯಿಸಿರುವವರು (314), ಗೈರುಹಾಜರಾದವರು (7) ಮತ್ತು ಇತರರು (5) ಸೇರಿದ್ದಾರೆ.

ಈ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯವು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದ್ದು, ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸಲು ಮತ್ತು ಮೃತ ಹಾಗೂ ಸ್ಥಳಾಂತರಗೊಂಡ ಮತದಾರರ ಹೆಸರನ್ನು ಕೈಬಿಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮತದಾರರ ನೊಂದಣಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!