ಮತದಾರರ ಪಟ್ಟಿ ಪರಿಷ್ಕರಣೆ ಮಾಹಿತಿ ವೀಕ್ಷಣೆ | ಮಾಜಿ ಸಚಿವ ಬಾಬುರಾವ್ ಚಿಂಚನಸೂರರಿಂದ ಜಾಗೃತಿ

ಗುರುಮಠಕಲ್: ಸಮರ್ಪಕ ಮಳೆಯಾಗದೇ ರೈತರು ಚಿಂತೆಗೀಡಾಗಿದ್ದಾರೆ. ಬರದ ಛಾಯೆ ಆವರಿಸಿದೆ‌. ರೈತರು ಕಂಗಾಲಾಗಿದ್ದಾರೆ ಹೀಗಾಗಿ ಶೀಘ್ರವೇ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಡಿ.ಕೆ. ಶಿವುಕುಮಾರ ಅವರನ್ನು  ಭೇಟಿಯಾಗಿ ರೈತರಿಗೆ ನೆರವಾಗಲು ಮನವಿ ಮಾಡಲಾಗುವುದು ಎಂದು ಮಾಜಿ ಸಚಿವರೂ, ನಿಜಶರಣ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ ಚಿಂಚನಸೂರ ಹೇಳಿದರು.

ಪಟ್ಟಣದ ಮತದಾರರ ಪರಿಷ್ಕರಣೆಯ ವಿವಿಧ ವಾರ್ಡ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಜನರ ಕಲ್ಯಾಣವೇ ತಮ್ಮ ಗುರಿ. ಜನರ ಸೇವೆಗಾಗಿ ಹುಟ್ಟಿದ್ದೇನೆ.ತಮ್ಮ ಅವಧಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿ ಜನರಿಗೆ ಉದ್ಯೋಗ ನೀಡಲು 3500 ಎಕರೆ ಜಮೀನು ಪಡೆಯಲಾಗಿದೆ. ಗೆದ್ದಿದ್ದರೆ ಲಕ್ಷಗಟ್ಟಲೇ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಅನುಕೂಲವಾಗುತ್ತಿತ್ತು ಎನ್ನುವ ಇಂಗಿತ ವ್ಯಕ್ತಪಡಿಸಿದರು. ತಾನು ತ್ಯಾಗಿ ಮನುಷ್ಯ, ಅಭಿವೃದ್ಧಿಯೇ ನನಗೆ ಮುಖ್ಯ. ಜನ ಸೇವೆ ಮಾಡಿದ್ದೇನೆ. ವ್ಯಾಪಾರದಲ್ಲಿದ್ದರೇ ಕೋಟ್ಯಂತರ ಗಳಿಸಬಹುದಿತ್ತು. ಗರಿಬರ ಸೇವೆಯೇ ತಮ್ಮ ಆದ್ಯತೆ ಎಂದರು.

ಗುರುಮಠಕಲ್ ಜನರಿಗೆ ಖುಣಿಯಾಗಿದ್ದೇನೆ. ಆಸ್ಪತ್ರೆ ಸೇರಿದರೂ ಸಹ ಅಭಿಮಾನದಿಂದ ಜನರು ಆಶೀರ್ವಾದ ಮಾಡಿದ್ದಾರೆ. ಸ್ವಲ್ಪ ಮತಗಳಿಂದ ಸೋಲಾಗಿದೆ. ಎಐಸಿಸಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರ, ಈ ಭಾಗ ಮಾದರಿಯಾಗಲು ಕೈಗಾರಿಕೆ ಸ್ಥಾಪನೆ ಮಾಡುವ ಉದ್ದೇಶವಿತ್ತು ಅಷ್ಟರಲ್ಲಿ ಅಧಿಕಾರ ಅವಧಿ ಮುಗಿತು ಎಂದರು.

ಪಟಭದ್ರ ಹಿತಾಸಕ್ತಿಗಳು ಏನೋ ಅಪಪ್ರಚಾರ ಮಾಡುತ್ತಾರೆ. ಆರೋಗ್ಯವಂತನಾಗಿದ್ದೇನೆ. 2028ರಲ್ಲಿ ಟಿಕೇಟ್ ನನಗೆ. ಗೆಲ್ಲುವುದು ನಾನೇ ಎನ್ನುವ ವಿಶ್ವಾಸದ ಮಾತುಗಳನ್ನಾಡಿದರು. ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಬಗ್ಗೆ ಅಪಾರ ಗೌರವಯಿದೆ. ಹಿಂದಿನ ಬಾಗಿಲಿನಿಂದ ಮಂತ್ರಿ ಆಗಲ್ಲ, ಜನರಿಂದ ಆರಿಸಿ ಬಂದು ಮಂತ್ರಿ ಆಗುವೆ ಎಂದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಪೆಟ್ಲಾ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!