ಪ್ರವಾದಿ ಮಹ್ಮದ್ ಅವರ ಹುಟ್ಟು ಹಬ್ಬ | ಅದ್ದೂರಿಯಾಗಿ ನಡೆದ ಈದ್ ಮೆರವಣಿಗೆ | ಪ್ರಮುಖರು ಭಾಗಿ

ಗುರುಮಠಕಲ್ : ಪ್ರತಿ ವರ್ಷದಂತೆ ಈ ವರ್ಷವು ಜುಲುಸ್ ಎ ಮಹ್ಮದಿಯ ಬುಧುವಾರ ಬೆಳ್ಳಗೆ ಮರಾಠವಾಡಿ ಮೊಹಲ್ಲಾ ದಿಂದ  ಪ್ರಾರಂಭವಾಯಿತು ಮಿಲಾದ್ ಕಮಿಟಿ ಹಾಗೂ ಸದರ್ ಪಂಚ್ ನೇತ್ರತ್ವದಲ್ಲಿ ನಡೆದ ಮಿಲಾದುನ್ ನಬಿ ಹಬ್ಬದ ಮೆರವಣಿಗೆ ಗುರುಮಠಕಲ್ ಪಟ್ಟಣದಲ್ಲಿ ಶಾಂತಿಯುತ ಸಂಭ್ರಮದಿಂದ ಜರುಗಿತು.

ಮದರಸಾ ಬಾಬುಲ್ ಇಲ್ಮ್ ತಹಫಿಜುಲ್ ಖುರಾನ್ ವಿಧ್ಯಾರ್ಥಿಗಳು, ಪಟ್ಟಣದ ಹಿರಿಯರು, ಯುವಕರು ನಾಥ್ ಓದುವುದ ಮುಖಾಂತರ ಎಲ್ಲರ ಗಮನ ಸೆಳೆದರು. ಶಾಂತಿ ಸೌಹಾರ್ದತೆ ಸಂದೇಶವನ್ನು ಸಾರುವ ಮುಖಾಂತರ ಪ್ರಮುಖ ರಸ್ತೆಗಳಲ್ಲಿ ಯುವಕರು ಸೇರಿ ಎಲ್ಲರನ್ನು ಜೂಸ್ , ಶರಬತ್ ಆಯಿಸ್ಕ್ರಿಮ್, ಬಿಸ್ಕಟ್ ಹಾಗೂ ನೀರನ್ನು ವಿತರಣೆ ಮಾಡಿದರು.

ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಶಾಂತಿ ನೆಲೆಸಲು ಸಿ ಪಿ ಐ ದೌಲತ್ ಕುರಿ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಟ್ಟಣದ ಪ್ರಮುಖ ರಸ್ತೆ ಶಹಾಬುದ್ದಿನ್ ಮೊಹಲ್ಲಾ ಸಿಹಿ ನೀರಿನ ಬಾವಿ ಮಾರ್ಗವಾಗಿ ಮಲ್ಲಯ್ಯಕಟ್ಟ, ಗಡಿ ಮೊಹಲ್ಲಾ ದರ್ಗಾ ದಾದಾಪೀರ್ ಬಳಿ ಶಾಂತಿಯುತವಾಗಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಸದರ್ ಖಾಜಾ ಮೈನೊದ್ದಿನ್, ಅಬ್ದುಲ್ಲಾ ಮರಫಾಶಿ, ಪಾಶಾ ಪ್ಯಾರೆ, ಫೈಯಾಜ್ ಅಹ್ಮದ್, ಚಾಂದ್ ಪಾಶಾ, ಅಕ್ತರ ಪ್ಯಾರೆ, ಅಬ್ದುಲ್ ನಬಿ, ಸಾಲೆ ನಹದಿ, ಮುಬಾರಕ್ ಬಿನ್ ಜಮಿಲ್,ಸೈಯದ್ ಮೋಯಿನುದ್ದಿನ್ , ಹಬಿಬ್ ಅಹ್ಮದ , ಅಬ್ದುಲ್ಲಾ ಸಾರಿ , ಸೈಯದ್ ಬಾಬಾ, ಹಾಫಿಜ್ ನವಾಜ್ ಖಾನ್, ಹಬಿಬ್ ಅಬುಬಕ್ಕರ್, ಅಬ್ದುಲ್‌ ರಹಮಾನ್‌, ಸಾದಿಕ್ ವಹಿದುದ್ದಿನ್ ಸೇರಿದಂತೆ ಸಮಾಜ ಎಲ್ಲಾ ಹಿರಿಯರು ಯುವಕರು ಭಾಗಿಯಾಗಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!