ದೇಶದಲ್ಲಿ ಅಸ್ಪೃಶ್ಯತೆ ಜೀವಂತ | ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣ ಆಕ್ರೋಶ
ಯಾದಗಿರಿ: ಇದೇ ತಿಂಗಳು ಉತ್ತರಾಖಂಡದ ಹಲ್ದಾವಾನಿಯಾ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಿಯ ಜನರನ್ನು ಉದ್ದೇಶಿಸಿ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದರು. ಅದಾದ ಎರಡು ದಿನಗಳ ನಂತರ ಅಲ್ಲಿಯ ಹಿಂದೂಪರ ಸಂಘಟನೆಯವರು ಆ ಸ್ಥಳವನ್ನು ಶುಚಿಗೊಳಿಸಿ, ಹೋಮ-ಹವನವನ್ನು ಮಾಡಿದ್ದಾರೆ. ಜಾತಿ ಹಿನ್ನಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಮಾಡುವುದರ ಮೂಲಕ ರಾಷ್ಟ್ರೀಯ ನಾಯಕರನ್ನು ಅವಮಾನಿಸಲಾಗಿದೆ ದಲಿತ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ ಶ್ರೇಣಿಯಲ್ಲಿ ವಂಚಿತಗೊಂಡ ಸಮುದಾಯದಿಂದ ಬಂದ ಮಲ್ಲಿಕಾರ್ಜುನ ಖರ್ಗೆಯವರು ಇವತ್ತು ರಾಷ್ಟ್ರ ನಾಯಕರಾಗಿದ್ದಾರೆ. ಇದರ ಹಿಂದೆ ಅವರ ಅನೇಕ ತ್ಯಾಗ ಮತ್ತು ಪ್ರಾಮಾಣಿಕತೆ ಇದೆ. ಇಂಥ ವ್ಯಕ್ತಿತ್ವವುಳ್ಳ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮನೋಸ್ಥೆರ್ಯ ಕುಗ್ಗಿಸುವ ಹುನ್ನಾರವನ್ನು ಯಾದಗಿರಿ ಜಿಲ್ಲಾ ಸಮಿತಿ ಸಹಿಸಿಕೊಳ್ಳುವುದಿಲ್ಲ ಎಂದು ಪ್ರತಿಭಟನೆ ಉದ್ದೇಶಿಸಿ ಶಿವಪುತ್ರ ಜವಳಿ ಮಾತನಾಡಿದರು.
ಇದು ಕೇವಲ ಖರ್ಗೆಯವರಿಗೆ ಆದ ಅವಮಾನವಲ್ಲ ಶೋಷಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಈ ರೀತಿಯ ದೇಶ ಹಾಗೂ ಸಂವಿಧಾನ ವಿರೋಧಿ ಆಚರಣೆಗಳನ್ನು ಯಾವುದೇ ಕಾರಣಕ್ಕೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತ ಅನಿಷ್ಠ ಆಚರಣೆಯನ್ನು ಖಂಡಿಸಿದರು. ಈ ಕೃತ್ಯದ ಹಿಂದೆ ಯಾರಿದ್ದಾರೆ ಅವರ ವಿರುದ್ಧ ದೇಶದ್ರೋಹಿ ಮತ್ತು ಅಟ್ರಾಸಿಟಿ 1989/ಅಸ್ಪೃಶ್ಯತೆ ಆಚರಣೆ ವಿರೋಧಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ದೇಶ ಮತ್ತು ರಾಜ್ಯಾದ್ಯಾಂತ ಉಗ್ರ ಹೋರಾಟಕ್ಕೆ ಅಣೀಯಾಗಬೇಕಾಗುತ್ತದೆ ಎಂದು ಶಿವಪುತ್ರ ಜವಳಿ ಈ ಮೂಲಕ ಸರ್ಕಾರವನ್ನು ಎಚ್ಚರಿಸಿದರು.
ಪ್ರತಿಭಟನೆ-ಮೆರವಣಿಗೆ-ಧರಣಿ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆಷಮನವಿ ಸಲ್ಲಿಸಲಾಯಿತು. ಪ್ರಧಾನ ಮಂತ್ರಿಗಳು ತಪ್ಪಿಸ್ಥ ಆರೋಪಿಗಳನ್ನು ಶಿಕ್ಷಿಸುವಂತೆ ಕ್ರಮ ಜರುಗಿಸಬೇಕೆಂದು ಡಿ.ಎಸ್.ಎಸ್ ಯಾದಗಿರಿ ಜಿಲ್ಲಾ ಸಮಿತಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಚಂದಪ್ಪ ಮುನಿಯಪ್ಪನವರು, ಶಿವಲಿಂಗ ಹಸನಾಪುರ, ಮರೆಪ್ಪ ಕ್ರಾಂತಿ, ಮಲ್ಲಪ್ಪ ಪೂಜಾರಿ, ದೊಡ್ಡಪ್ಪ , ದೇವು ಹುಲ್ಕಲ್, ಶರಣಪ್ಪ, ತಿಪ್ಪಣ್ಣ ಶೆಳ್ಳಗಿ, ಶರಬಣ್ಣ ದೋರನಹಳ್ಳಿ, ತಾಯಪ್ಪ ಭಂಡಾರಿ, ಭೀಮಶಂಕರ ಗುಂಡಹಳ್ಳಿ, ಚಂದ್ರು ಬಲಶೇಟ್ಟಿಹಾಳ, ರಂಗಸ್ವಾಮಿ ಕೊಂಕಲ್, ಶರಣಪ್ಪ ಕುರಕುಂದ, ರಮೇಶ ಬಾಚಿಮಟ್ಟಿ, ಎಂ. ಪಟೇಲ್,ಬಲಭೀಮ ಬೇವಿನಹಳ್ಳಿ,ಚನ್ನಪ್ಪ ದೇವಾಪೂರ ,ಸಂತೋಷ ಗುಂಡಳ್ಳಿ, ನಾಗರಾಜ ಕೋಡಮನಹಳ್ಳಿ, ಸಿದ್ದಪ್ಪ ಕೋಡಮನಹಳ್ಳಿ, ನಾಗರಾಜ ಹಳಿಸಗರ, ವೆಂಕಟೇಶ ದೇವಪೂರ, ರಾಜು ಬಡಿಗೇರ,ದಶರಥ ಗುಂಡಳ್ಳಿ, ಮಲ್ಲಪ್ಪ ತಳಿಬಿಡಿ, ನಾಗರಾಜ ಕಂದಕೂರ, ಸುರೇಶ ಚಿಂತನಳ್ಳಿ, ಆನಂದ ಕೊಂಕಲ್, ಆನಂದ ಯಲಸತ್ತಿ, ರಾಜು ದುಪ್ಪಲ್ಲಿ, ಹಣಮಂತು ಪಲ್ಲಗೇರಿ,ಚೌಡಪ್ಪ ಯಡ್ಡಳಿ, ಯಲ್ಲಪ್ಪ ಗುಂಡಲಗೇರಾ, ಪರಮಣ್ಣ ಬಲಶೇಟ್ಟಿಹಾಳ, ಸಾಯಿಬಣ್ಣ ಸದಬ್, ಸಂಘಟನೆಯ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
