ಯಾದಗಿರಿ: ರಕ್ತದಾನದ ಮೂಲಕ ಮೂರು ಜೀವಗಳನ್ನು ಉಳಿಸುವ ಮಾನವೀಯ ಉದ್ದೇಶದಿಂದ ಲಯನ್ಸ್ ಕ್ಲಬ್ ಯಾದಗಿರಿ ಮತ್ತು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ  ಆಗಸ್ಟ್ 21, ಶುಕ್ರವಾರದಂದು ನಗರದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಚಿತ್ತಾಪುರ ರಸ್ತೆಯ ಸರ್ಕಾರಿ ಪದವಿ ಕಾಲೇಜಿನ ಶ್ರೀ ವಿಶ್ವನಾಥರೆಡ್ಡಿ ಮುದ್ನಾಳ ಸಭಾಂಗಣದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಯುವಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಸಿದ್ಧರಾಜರೆಡ್ಡಿ ಮತ್ತು ಬ್ರಹ್ಮಕುಮಾರಿ ರಾಜಯೋಗಿನಿ ನೀರಾ ಅಕ್ಕ ಅವರು ಮನವಿ ಮಾಡಿದ್ದಾರೆ.

ರಕ್ತಕ್ಕೆ ಪರ್ಯಾಯವಿಲ್ಲ. ನಿಮ್ಮ ಅಮೂಲ್ಯ ರಕ್ತದಾನದಿಂದ ಅಗತ್ಯವಿರುವವರ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ 18 ರಿಂದ 60 ವರ್ಷದ ಆರೋಗ್ಯವಂತರು ಈ ಪವಿತ್ರ ಕಾರ್ಯದಲ್ಲಿ ತಪ್ಪದೆ ಭಾಗವಹಿಸಬೇಕೆಂದು ಅವರು ಕೋರಿದ್ದಾರೆ. ಮಾನವೀಯತೆಯ ಈ ಸೇವಾ ಕಾರ್ಯವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ನಾಗರಿಕರು ಸಹಕರಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!