ಗುರುಮಠಕಲ್ ಕೈ ಕಾರ್ಯಕರ್ತರಿಂದ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ
ಗುರುಮಠಕಲ್ : ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ ಕಾರ್ಯಕ್ರಮದ ಬಳಿಕ ವೈದಿಕವಾಗಿ ಗಂಗಾಜಲದಿಂದ ಶುದ್ಧೀಕರಣ ಮಾಡಿ ಅವಮಾನ ಮಾಡಲಾಗಿದೆ ಎಂದು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುಮಠಕಲ್ ನಲ್ಲಿ ಪ್ರತಿಭಟನೆ ನಡೆಸಿದರು.
ಗುರುಮಠಕಲ್ ಮತ್ತು ಸೈದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ ಪ್ರತಿಭಟನೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತ ತಲುಪಿತು.
ಈ ವೇಳೆ ಮಾತನಾಡಿದ ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಮಟ್ಟದ ನಾಯಕರು, ಅವರಿಗೆ ಅವಮಾನ ಮಾಡುವುದು ಸರಿಯಲ್ಲ. ದೇಶದ ಎರಡನೆ ಅಂಬೇಡ್ಕರ್ ಎಂದು ಕರೆಯಿಸಿಕೊಂಡಿದ್ದಾರೆ. ಈ ಘಟನೆ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ಸಾಯಿಬಣ್ಣ ಬೋರಬಂಡ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 80 ವರ್ಷಗಳು ಕಳೆದರೂ, ರಾಷ್ಟ್ರೀಯ ನಾಯಕರಿಗೆ ಅವಮಾನದರೆ ಜನ ಸಾಮಾನ್ಯರ ಗತಿ ಏನು?. ಸಂಕುಚಿತ ಮನೋಭಾವ, ಮನುವಾದಿಗಳ ಕೈಯಲ್ಲಿ ಅಧಿಕಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದುಷ್ಕರ್ಮಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗುರುಮಠಕಲ್ ಉಸ್ತುವಾರಿ ರಾಜಗೋಪಾಲ್ ರಡ್ಡಿ, ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ, ಶರಣಪ್ಪ ಮಾನೆಗಾರ, ಬಸರೆಡ್ಡಿ ಅನಪೂರ ಮಾತನಾಡಿದರು. ಕೆಲಕಾಲ ವಿಜಯಪುರ – ಹೈದರಾಬಾದ್ ಹೆದ್ದಾರಿ ತಡೆದಿದ್ದರಿಂದ ಸಂಚಾರಕ್ಕೆ ತೊಂದರೆಯಾಯಿತು. ಬಳಿಕ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿದರು.
ಸೈದಾಪುರ ಬ್ಲಾಕ್ ಅಧ್ಯಕ್ಷ ನಿರಂಜನ ರೆಡ್ಡಿ, ಶ್ರಣಿಕ ಕುಮಾರ್ ಧೋಖಾ, ವಿಶ್ವನಾಥ್ ನೀಲಹಳ್ಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಮ್ಮ, ಚಿದಾನಂದಪ್ಪ ಕಾಳಬೆಳಗುಂದಿ, ಲಕ್ಷ್ಮೀಕಾಂತ ರೆಡ್ಡಿ ಪಲ್ಲಾ, ವಿಜಯ ನೀರಟಿ, ಶರಣು ಕಲಾಲ್, ವಸಂತ ಹಬೀಬ್, ನರಸಿಂಹ ರೆಡಿ, ಸಂಜೀವ ಕುಮಾರ್ ಚಂದಾಪೂರ, ಕಾಶಪ್ಪ ಚಿನ್ನಾಕಾರ, ಸೈಯದ್ ಮೈನೋದ್ದೀನ, ಅಶೋಕ ಶನಿವಾರಂ, ಚಾಂದ ಪಾಶಾ, ಯಶವಂತರಾವ ಚೌಧರಿ, ಜಗದೀಶ್ ಶ್ರೀ ಗಿರಿ, ಮಾಣಿಕ ಮುಕಡಿ, ಸೈಯದ್ ಬಾಬಾ, ಚಂದ್ರಯ್ಯ ಗುತ್ತೇದಾರ್, ಯುನೂಸ್ ಶೇಕ್ ಸೇರಿದಂತೆ ಪ್ರಮುಖರು, ಕಾರ್ಯಕರ್ತರು ಇದ್ದರು.
