ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಪಾರ ಹಾನಿ | ಸುಟ್ಟು ಕರಕಲಾದ ಮನೆಯಲ್ಲಿನ ವಸ್ತುಗಳು, ಚಿನ್ನಾಭರಣ, ನಗದು
ಸೇಡಂ: ಏ.7ರಂದು ತಾಲೂಕಿನ ರಾಜೋಳ ಗ್ರಾಮದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಸುಟ್ಟು 15 ಲಕ್ಷಕ್ಕೂ ಹೆಚ್ಚು ಹಣ ಆಸ್ತಿ ನಷ್ಟವಾಗಿದ್ದು ಮುಖ್ಯಮಂತ್ರಿ ನಿಧಿಯಿಂದ ಪರಿಹಾರ ನೀಡುವ ಕುರಿತು ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ದಂಡಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಕರವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ರಂಜೋಳ ಗ್ರಾಮದ ಬಸವರಾಜ್ ತಂದೆ ಕಾಶಪ್ಪ ಅರಿಕೇರಿ ಇವರ ಮನೆ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಸುಟ್ಟು ಬಸ್ಮವಾಗಿದೆ. ಮನೆಯಲ್ಲಿ ಒಂದು ದ್ವಿಚಕ್ರ ವಾಹನ 4 ತೊಲೆ ಬಂಗಾರ, 20 ತೊಲೆ ಬೆಳ್ಳಿ, 4 ಲಕ್ಷ ರೂಪಾಯಿ ನಗದು ಸೇರಿದಂತೆ ಜೋಳ, ಅಕ್ಕಿ, ದಿನಬಳಕೆ ವಸ್ತುಗಳು, ಮನೆಯಲ್ಲಿರುವ ಬಟ್ಟೆಗಳು, ಫ್ರಿಡ್ಜ್ ಇನ್ನು ಅನೇಕ ವಸ್ತುಗಳು ಸುಟ್ಟು ಬೂದಿಯಾಗಿವೆ. ಈ ಬಗ್ಗೆ ಕೇಸು ಸಹ ದಾಖಲಾಗಿದೆ.
ಬಡ ಕುಟುಂಬ ಸುಮಾರು ವರ್ಷಗಳಿಂದ ಬೆಂಗಳೂರು ನಗರಕ್ಕೆ ಹೊಟ್ಟೆಪಾಡಿಗಾಗಿ ಕೂಲಿ ಮಾಡಲು ಹೋಗಿರುತ್ತರೆ. ಇವರಿಗೆ ಮೂರು ಮಕ್ಕಳಿದ್ದು ಇವರಿಗೆ ಇರಲು ಮನೆ ಸಹ ಇರದಂತ ಪರಿಸ್ಥಿತಿಯಾಗಿದೆ. ಬಡ ಕುಟುಂಬಕ್ಕೆ ಪರಿಹಾರ ನೀಡಿಬೇಕು ಎಂದು ಮಹೇಶ್ ಪಾಟೀಲ್, ಶ್ರೀನಿವಾಸ್ ರೆಡ್ಡಿ ಮದನಾ, ಚಂದ್ರಶೇಖರ್ ಪೂಜಾರಿ, ದೇವಕುಮಾರ್ ನಾಟಿಕರ್, ಭೀಮಯ್ಯ ಗುತ್ತೇದಾರ್, ಗುಂಡಪ್ಪ ಪೂಜಾರಿ, ಮಹೇಶ್ ರೆಡ್ಡಿ ಜಾಕನಹಳ್ಳಿ, ಚಂದ್ರಶೇಖರ್ ಮಡಿವಾಳ, ಕಿರಣ್ ಕುಮಾರ್ ಪಾಟೀಲ್, ರಾಘವೇಂದ್ರ ಕಡಗಂಚಿ, ಮಲ್ಲಿಕಾರ್ಜುನ ಕಾಕಲ್ವರ್, ಪವನ್ ಕುಲಕರ್ಣಿ, ಮುಕುಂದ ಕಾವಲಿ, ಬಸವರಾಜ ಅರಿಕೇರಿ, ಹನುಮಂತ , ಜಗದೀಶ್, ತಿಪ್ಪಣ್ಣ, ಭದ್ರಣ್ಣ, ವೀರೇಶ್, ರಾಜು ಯಾದವ್ ,ಬಾಬುಗೌಡ ಸೇರಿ ರಂಜೋಳ ಗ್ರಾಮಸ್ಥರು ಮನವಿ ಮಾಡಿದ್ದಾರೆ.
