ಗುರುಮಠಕಲ್:  ತಾಲೂಕಿನ ಚಿನ್ನಕಾರ ಮತ್ತು ಚಂಡ್ರಿಕಿ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರ ತಂಡದ ಅಧಿಕಾರಿಗಳು ಭೇಟಿ ನೀಡಿದರು. ಚಿನ್ನಾಕಾರ ಗ್ರಾಮ ಪಂಚಾಯಿತಿಯಲ್ಲಿ ವಿಕಲಚೇತನರ ಮಾಸಾಶನ ಮತ್ತು ವೃದ್ಧಾಪ್ಯ ವೇತನ ಕುರಿತು ಮಾಹಿತಿ ಪಡೆದರು. ವಸತಿ ಯೋಜನೆ ಫಲಾನುಭವಿಗಳ ಬಗ್ಗೆ ಮಾಹಿತಿ ಪಡೆದರು. ಮನರೇಗಾ ಕಾಮಗಾರಿಗಳ ಕಡತ ವೀಕ್ಷಿಸಿದರು. ಮುಕ್ತಾಯ ಗೊಂಡಿರುವ ಮತ್ತು ಚಾಲ್ತಿಯಲ್ಲಿರುವ ಕಾಮಗಾರಿಗಳ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬೆಟ್ಟದಲ್ಲಿ ಜರುಗುತ್ತಿರುವ ಕಂದಕ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕೂಲಿಕಾರರಿಂದ ಕೆಲಸದ ಕುರಿತು ಮಾಹಿತಿ ಪಡೆದರು.

ನಂತರ ಚಂಡ್ರಿಕಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಮನರೇಗಾ ಕಡತಗಳು ವೀಕ್ಷಿಸಿದರು. ವೈಯಕ್ತಿಕ ಕಾಮಗಾರಿಯಾದ ದನದ ಶೆಡ್ ಮತ್ತು ಸಾಮೂಹಿಕ ಕಾಮಗಾರಿಯಾದ ಸಿಸಿ ರಸ್ತೆ, ಕಂದಕ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮನರೇಗಾದಲ್ಲಿ ಐಇಸಿ ಪಾತ್ರ & ಕಾರ್ಯಗಳು ಕುರಿತು ಮಾಹಿತಿ ಪಡೆದರು. ಮನರೇಗಾ ಕಾಮಗಾರಿಗಳಲ್ಲಿ ಭಾಗವಹಿಸುವಂತೆ ಜನಜಾಗೃತಿ ಅಭಿಯಾನ ಕೈಗೊಂಡಿರುವ ಕರಪತ್ರಗಳು ವೀಕ್ಷಿಸಿದರು. ರೋಜ್ಗಾರ್ ದಿವಸ, ದುಡಿಯೋಣ ಬಾ ಅಭಿಯಾನ ಕುರಿತು ಮಾಹಿತಿ ಪಡೆದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾ ಅಧಿಕಾರಿ ಸಂತೋಷ್ ಕುಮಾರ್, ತಾಲೂಕು ಸಹಾಯಕ ನಿರ್ದೇಶಕ ರಾಮಚಂದ್ರ ಬಸೂದೆ, ಚಿನ್ನಾಕಾರ ಪಿಡಿಓ ಅನುರಾಧ, ಚಂಡ್ರಿಕಿ ಪಿಡಿಓ ಗೀತಾ, ಟಿಸಿ ಮುಜಾಮಿಲ್, ಟಿಐಇಸಿ ರಾಘವೇಂದ್ರ, ಟಿಎಇ ವಿಜಯ ಆಲೆಮನೆ, ಬಿಎಷ್ಟಿ ಮಾಳಪ್ಪ, ಕಾಮಣ್ಣ, ಗ್ರಾ.ಪಂ ಅಧ್ಯಕ್ಷರು ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!