ಯಾದಗಿರಿ ನಿಲ್ದಾಣಕ್ಕೆ ವಿವಿಧ ರೈಲು ನಿಲ್ಲುಗಡೆಗೆ ಕೇಂದ್ರ ಸಚಿವರಿಗೆ ರಾಜಾ ಅಮರೇಶ್ವರ ನಾಯಕ ಮನವಿ

ಯಾದಗಿರಿ: ಮಾಜಿ ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ ಅವರು ಕೇಂದ್ರ ಸಚಿವ ರೈಲ್ವೆ ಸಚಿವ ಅಶ್ವಿನಿವೈಷ್ಣವ್ ಮತ್ತು ವಿ ಸೋಮಣ್ಣ ಅವರಿಗೆ ಪತ್ರ ಬರೆದು ಮನವಿ ಪತ್ರ ಸಲ್ಲಿಸಿದರು.

ಯಾದಗಿರಿ ಜಿಲ್ಲಾ ಕೇಂದ್ರವಾಗಿದ್ದು ಯಾದಗಿರಿ ರೈಲ್ವೆ ನಿಲ್ದಾಣ ದಿಂದ ಅತೀ ಹೆಚ್ಚು ಆದಾಯ ಬರುತ್ತಿದ್ದು ಕೂಡಲೇ ರೈಲುಗಳ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲು ವಿನಂತಿಸಿದರು.

ರಾಜಧಾನಿ ಎಕ್ಸ್‌ಪ್ರೆಸ್, ಪದ್ಮಾವತಿ ಎಕ್ಸ್, ರಾಜ್‌ಕೋಟ್ ಎಕ್ಸ್‌ ಪ್ರೆಸ್, ಡ್ರಾವಾಕಾ ಎಕ್ಸಪ್ರೆಸ್, ವಾಸ್ಕೊ ಎಕ್ಸ್‌ಪ್ರೆಸ್, ಏಕತಾ ಎಕ್ಸ್ಪ್ರೆಸ್, ಸಾಯಿನಗರ ಎಕ್ಸ್ಪ್ರೆಸ್,  ಮಧುರೈ ಎಕ್ಸ್‌ಪ್ರೆಸ್, ತಿರುಪತಿ ಹಮ್-ಸಫರ್ ಎಕ್ಸ್‌ಪ್ರೆಸ್, ಗೋರಕ್‌ಪುರ ಅಹಮ ದಾಬಾದ್ ಹಮ್-ಸಫರ್ ಎಕ್ಸ್. ಈ ರೈಲುಗಳು ಯಾದಗಿರಿ ರೈಲು ನಿಲ್ದಾಣದ ಮೂಲಕ ಸಾಗುತ್ತಿವೆ ಮತ್ತು ಸಾರ್ವಜನಿಕ ಬೇಡಿಕೆ ಯ ಮೇರೆಗೆ ಯಾದಗಿರಿ ರೈಲ್ವೆಗೆ ನಿಲುಗಡೆ ಮಾಡಬೇಕು ಎಂದಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!