ಶಾಸಕ ಶರಣಗೌಡ ಕಂದಕೂರ ಅವರಿಂದ ಹಲವು ಕಾಮಗಾರಿಗೆ ಅಡಿಗಲ್ಲು | ಪಟ್ಟಣದ ಸ್ವಚ್ಛತೆ, ನೀರಿನ ವ್ಯವಸ್ಥೆ ಕುರಿತು ಸಭೆ |ಗುರುಮಠಕಲ್ ಆಸ್ಪತ್ರೆ 50 ಬೆಡ್ ಗೆ ಮೇಲ್ದರ್ಜೆ

ಗುರುಮಠಕಲ್: ತಾಲೂಕು ಕೇಂದ್ರಕ್ಕೆ ಮಿನಿ ವಿಧಾನಸೌಧ ಮತ್ತು ಅಗ್ನಿಶಾಮಕ ಠಾಣೆ ಮಂಜೂರಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಪಟ್ಟಣದಲ್ಲಿ ಗುರುವಾರ 2024-25 ನೇ ಸಾಲಿನ ಕೆ.ಕೆ.ಆರ್.ಡಿ. ಬಿ ಯೋಜನೆ ಅಡಿಯಲ್ಲಿ ಮಂಜೂರಾದ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅಂದಾಜು 190 ಲಕ್ಷ ರೂ.ಗಳ ವೆಚ್ಚದಲ್ಲಿ ಮೊದಲನೇ ಮಹಡಿಯ 6 ಕೋಣೆಗಳ ನಿರ್ಮಾಣ, ಅಂದಾಜು ವೆಚ್ಚ 15 ಲಕ್ಷ ರೂ.ಗಳಲ್ಲಿ ಕಾಲೇಜು ಆವರಣದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಅಂದಾಜು ವೆಚ್ಚ 2 ಕೋಟಿ ರೂ.ಗಳಲ್ಲಿ ಪಟ್ಟಣದ ಬಸ್ ನಿಲ್ದಾಣದಿಂದ ಶರಣು ಹೋಟೆಲ್ ವರೆಗೆ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭಕ್ಕೆ ನೆರವೇರಿಸಿ ಅವರು ಮಾತನಾಡಿದರು.

ಸಂಚಾರಕ್ಕೆ ಅನುಕೂಲವಾಗಲು ತರಕಾರಿ ಮಾರಾಕಟ್ಟೆ ಬೇರೆಡೆ ಸ್ಥಳ ನೋಡಲಾಗುತ್ತಿದೆ. ಗುರುಮಠಕಲ್ ಪಟ್ಟಣದ ಶೌಚಾಲಯ ಮತ್ತು ಕುಡಿಯುವ ನೀರು ಸಮಸ್ಯೆ ಬಗೆಹರಿಸಲು ಸಭೆ ನೂತನ ಅಧ್ಯಕ್ಷರು ಅಧಿಕಾರಿ ವಹಿಸಿದ ಬಳಿಕ ಸಭೆ ಕರೆಯಲು ಸೂಚನೆ ನೀಡಲಾಗುವುದು ಎಂದರು.

ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರವನ್ನು 100 ಬೆಡ್ ಗೆ ಮೇಲ್ದರ್ಜೆಗೆ ಏರಿಸುವ ಕುರಿತು ಮುಖ್ಯಮಂತ್ರಿಗಳಿಗೆ ವಿನಂತಿ ಮಾಡಲಾಗಿತ್ತು, 50 ಬೆಡ್ ಗೆ ಮೇಲ್ದರ್ಜೆಗೆ ಏರಿಸಲು ಮಂಜೂರಾತಿ ದೊರೆತಿದೆ ಎಂದರು.

ಪಟ್ಟಣದ ಸೌಂದರ್ಯಕ್ಕೆ ಆದ್ಯತೆ ನೀಡಲಾಗುವುದು. ಮನೆ – ಮನೆಗೆ ನಳ ಒದಗಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಲಿದೆ ಎಂದು ತಿಳಿಸಿದರು.

ನನ್ನ ಕ್ಷೇತ್ರ ಶೈಕ್ಷಣೀಕವಾಗಿ ಹಿಂದುಳಿಯಬಾರದು, ಗುಣಮಟ್ಟ ಶಿಕ್ಷಣಕ್ಕೆ ಬೇಕಾಗಿರುವ ಎಲ್ಲ ಉಪಕರಣಗಳು ಹಾಗೂ ಸೌಲತ್ತುಗಳನ್ನು ಒದಗಿಸಲು ನಾನು ತಯಾರಿದ್ದೇನೆ. ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಕ್ಷೇತ್ರಕ್ಕೆ ಕೀರ್ತಿ ತರುವಂತೆ ಆಗಬೇಕು.

ನನ್ನ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಶುದ್ದ ಕುಡಿಯುವ ನೀರು ಹಾಗೂ ಉತ್ತಮ ರಸ್ತೆಗಳ ನಿರ್ಮಾಣ ಮಾಡಲು ನನ್ನದೇ ಆಗಿರುವ ಯೋಜನೆ ರೂಪಿಸಿದ್ದೇನೆ. ಕ್ಷೇತ್ರದ ಮೂಲಭೂತ ಸೌಲಭ್ಯ ಕಲ್ಪಿಸಲು ನಿರಂತರವಾಗಿ ಶ್ರಮಿಸುತ್ತೇನೆ. ಅಭಿವೃದ್ದಿಯ ಮೂಲಕ ಕ್ಷೇತ್ರದ ಋಣ ತೀರಿಸುತ್ತೇನೆ ಎಂದರು.

ತಹಸೀಲ್ದಾರ ಶಾಂತಗೌಡ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಸಹಾಯಕ ಕಾರ್ಯಪಾಲಕ ಅಭಿಯಂತ ರಾದ ಶಿವರಾಜ, ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಶರಣು ಅವುಂಟಿ, ಬ್ಲಾಕ್ ಅಧ್ಯಕ್ಷ ಪ್ರಕಾಶ ನಿರೇಟಿ, ಪಕ್ಷದ ಪ್ರಮುಖರಾದ ಜಿ.ತಮ್ಮಣ್ಣ, ಜ್ಞಾನೇಶ್ವರ ರೆಡ್ಡಿ, ಮಲ್ಲಿಕಾರ್ಜುನ ಅರುಣಿ, ಜಗದೀಶ ಅವುಂಟಿ, ಬಸಣ್ಣ ದೇವರಹಳ್ಳಿ, ಪುರಸಭೆ ಸದಸ್ಯರಾದ ಬಾಲಪ್ಪ, ಆಶನ್ನ ಬುದ್ದ, ಸಿರಾಜ್ ಚಿಂತಾಕುಂಟ, ನವಾಜರೆಡ್ಡಿ ಗವಿನೋಳ, ಚಂಧುಲಾಲ್ ಚೌದ್ರಿ, ಮೋಹನರೆಡ್ಡಿ ಸೇರಿದಂತೆ ಕಾರ್ಯಕರ್ತರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!