ಎಸ್ ಎಲ್ ಟಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಪ್ರಾಣಿ ದಿನ

ಗುರುಮಠಕಲ್: ಇಲ್ಲಿನ ಎಸ್ ಎಲ್ ಟಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಪ್ರಾಣಿಗಳ ದಿನ ಆಚರಣೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಉಪಾಧ್ಯಕ್ಷ ನದೀಮ್ ಅಹ್ಮದ್ ಮಾತನಾಡಿ, ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಮನುಷ್ಯನಿಗೆ ವಾಸಕ್ಕೆ ಯೋಗ್ಯವಾದ ಮನೆ ಹೇಗೊ, ಹಾಗೆಯೇ ಪ್ರಾಣಿ, ಪಕ್ಷಿಗಳ ರಕ್ಷಣೆಗೆ ಪರಿಸರ ಅಗತ್ಯವಾಗಿದೆ ಎಂದರು.

ಪರಿಸರ ಸಂರಕ್ಷಣೆಗೆ‌ ಗಿಡಮರಗಳು ಮುಖ್ಯವಾಗಿದೆ. ಪ್ರತಿಯೊಬ್ಬ ರು ಗಿಡಮರಗಳನ್ನು ನೆಟ್ಟು ಕಾಳಜಿ ವಹಿಸಲು ತಿಳಿಸಿದರು. ಇದೇ ವೇಳೆ ವಿವಿಧ ಪ್ರಾಣಿಗಳ ವೇಶ ಧರಿಸಿ ವನ್ಯ ಜೀವಿಗಳ ರಕ್ಷಣೆ, ಪರಿಸರ ಉಳಿಸಲು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ನಾಗರಾಜ ಜಾಡರ, ಡಾ. ಜಯಶ್ರೀ ಜಾಡರ ಭಾಗವಹಿಸಿದ್ದರು. ಈ ವೇಳೆ ಡಾ. ಅಲಮಾಸ್, ಯಲ್ಲಪ್ಪ ಯಾದವ್, ಕಲ್ಪನಾ, ರಾಧಿಕ, ಲಿಲ್ಲಿ, ಪೆಪ್ಪೇ, ಹಫೀಜ್ ಅಹ್ಮದ್ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!