ಗಡಿ ಗ್ರಾಮ ಅಭಿವೃದ್ದಿಗೆ ಕಾಳಜಿ | ಇತ್ತೀಚೆಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ | ಜನರಲ್ಲಿ ಸಂತಸ ಮೂಡಿಸಿದ ತ್ವರಿತ ಕ್ರಮ
(ಯಾದಗಿರಿಧ್ವನಿ.ಕಾಮ್ ವಿಶೇಷ)
ಗುರುಮಠಕಲ್: ಇದು ರಾಜ್ಯದ ಗಡಿ ಗ್ರಾಮ. ವರ್ಷಗಳೇ ಕಳೆದರು ಇಲ್ಲಿನ ಜನರ ಸಮಸ್ಯೆ ಕೇಳುವವರಿಲ್ಲ. ಮೂಲಸೌಕರ್ಯ ಗಗನ ಕುಸುಮ..! ಇನ್ನೂ ಮಳೆಗಾಲ ಬಂದ್ರೇ ಗ್ರಾಮದಿಂದ ಹೋದವರು ಮರಳಲು ಹರಸಾಹಸ ಪಡುವ ಪರಿಸ್ಥಿತಿ ಹೀಗೆ ಇದ್ದಿದ್ದರಲ್ಲಿಯೇ ಬದುಕು ಸಾಗಿಸುವ ಅನಿವಾರ್ಯತೆ ಇಲ್ಲಿನ ಜನರದ್ದು, ಅಂದಹಾಗೆ ಇದು ಗಡಿ ತಾಲೂಕು ಗುರುಮಠಕಲ್ ನ ಅನಪೂರ ಗ್ರಾಮ ಪಂಚಾಯತಿಯ ನಸಲವಾಯಿ ಗ್ರಾಮದ ಕಥೆ.
ಇಲ್ಲಿನ ಅವ್ಯವಸ್ಥೆಯ ಕುರಿತು ಗ್ರಾಮಸ್ಥರು ಸಾಕಷ್ಟು ಅಳಲು ತೋಡಿಕೊಂಡು, ದೂರುಗಳು ಸಲ್ಲಿಸಿ ಬೇಸತ್ತಿದ್ದರು. ನಮ್ಮ ಕಥೆ ಇಷ್ಟೇ… ಸುಮ್ನೆ ತೆಲಂಗಾಣಕ್ಕೆ ಏನಾದರೂ ಸೇರಿದ್ದರೆ ಅಭಿವೃದ್ಧಿ ಆದ್ರೂ ಆಗುತ್ತಿತ್ತೋ ಏನೋ ಎನ್ನುವ ಕೊರಗು ಇಲ್ಲಿನ ಜನರಲ್ಲಿ ಬಹಳ ವರ್ಷಗಳಿಂದಿತ್ತು.
ಕೊನೆಗೆ ಸ್ವತಃ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿ ಲವೀಶ್ ಓರಾಡಿಯಾ ಅವರೇ ಗ್ರಾಮಕ್ಕೆ ಭೇಟಿ ನೀಡಿದ್ದರಿಂದ ಈಗೇನಾದರೂ ನಮ್ಮ ಬದುಕು ಬದಲಾಗಬ ಹುದೇ ಎನ್ನುವ ಆಸೆ ಇಲ್ಲಿನ ಜನರಲ್ಲಿ ಚಿಗುರೊಡೆದಿತ್ತು. ಈಗ ಅವರ ಅಭಿವೃದ್ಧಿಯ ಆಸೆಗೆ ರೆಕ್ಕೆ ಬಂದಂತಾಗಿದೆ.
ಜಿ.ಪಂ.ಸಿಇಓ ಜೊತೆ ಜಿ.ಪಂ ಯೋಜನಾ ನಿರ್ದೇಶಕರು ಹಾಗೂ ಇಓ ಸೇರಿದಂತೆ ಅಧಿಕಾರಿಗಳ ತಂಡ ಅನಪುರ ಮತ್ತು ನಸಲ ವಾಯಿ ಗ್ರಾಮಕ್ಕೆ ತೆರಳಿ, ಗ್ರಾಮದಲ್ಲಿ ಸಂಚರಿಸಿ, ಚರಂಡಿಗಳ ಅವ್ಯವಸ್ಥೆ ಸರಿಪಡಿಸಲು ಮತ್ತು ಚರಂಡಿಗಳ ನಿರ್ಮಾಣಕ್ಕೆ ₹ 18 ಲಕ್ಷ ಮೊತ್ತದ ಅನುದಾನ ಮೀಸಲಿಟ್ಟಿದ್ದರು.
ಕ್ರಿಯಾಯೋಜನೆ ಅನುಮೋದನೆಯಾಗಿದ್ದು, ಮಾರ್ಚ್ ಅಂತ್ಯದ ವೇಳೆಗೆ ಪ್ರಗತಿ ಸಾಧಿಸಲಿದೆ ಎಂದು ಗ್ರಾ.ಪಂ ಪಿಡಿಓ ಮತ್ತು ಇಓ ಮಾಹಿತಿ ನೀಡಿದ್ದಾರೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸ್ಪಂದನೆಯಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸಹಕಾರಿಯಾಗಿದ್ದು, ಅನಪೂರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಅಧಿಕಾರಿಗಳಿಗೆ ಧನ್ಯವಾದಗಳು ಸಲ್ಲಿಸಿದ್ದಾರೆ.
ಜಿ.ಪಂ. ಸಿಇಓ ಮಾದರಿ ಕಾರ್ಯ : ಜಿಲ್ಲಾ ಮಟ್ಟದ ಅಧಿಕಾರಿ ಗಳು ಅದರಲ್ಲಿ ಯಾದಗಿರಿಯಲ್ಲಿ ಮಾತ್ರ ಅಬ್ಬಾ ತುಂಬಾ ಬಿಸಿಲು ಸರ್ ಎಲ್ಲಿ ಹೋಗೊಣ ಎನ್ನುವ ಅಧಿಕಾರಿಗಳ ಮಧ್ಯೆ ಸ್ವತಃ ಜಿಲ್ಲಾ ಪಂಚಾಯಿತಿಯ ಬಾಸ್.. ಫೀಲ್ಡ್ ಗಿಳಿದು ಗ್ರಾಮೀಣ ಜನರ ಸಮಸ್ಯೆಯನ್ನು ಆಲಿಸಿರುವ ಕಾರ್ಯ ಮಾದರಿ.
ಕನಿಷ್ಟ ವಾರಕ್ಕೊಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿವುದ ರಿಂದ ಆಧೀನ ಅಧಿಕಾರಿಗಳಾದರೂ ಕೊಂಚ ಜವಾಬ್ದಾರಿಯಿಂ ದ ಕಾರ್ಯ ಮಾಡಲು ಶುರು ಮಾಡುವರೇನೊ.
