ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಯಾದಗಿರಿ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಕೆ | ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ರಿಂದ ಮನವಿ ಸ್ವೀಕಾರ
ಯಾದಗಿರಿ: ಬೆಳಗಾವಿಯ ಬಾಳೆಕುಂದ್ರಿ ಕ.ರ.ಸಾ.ಸಂಸ್ಥೆಯ ನಿರ್ವಾಹಕನ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಬೇಕೆಂದು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಳಗಾವಿಯ ಬಾಳೆಕುಂದ್ರಿ ಕ.ರ.ಸಾ.ಸಂಸ್ಥೆಯ ನಿರ್ವಾಹಕ ಕನ್ನಡದಲ್ಲಿ ಮಾತನಾಡಿದಕ್ಕೆ ಎಂ.ಇ.ಎಸ್.ಮರಾಠಿ ಪುಂಡರು ಹಲ್ಲೆ ನಡೆಸಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿರುವ ದೇಶದಲ್ಲಿ ಪದೇ ಪದೆ ಕನ್ನಡಿಗರ ಮೇಲೆ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ.
ಕನ್ನಡ ಭಾಷೆ ದೇಶದಲ್ಲಿ ಮಾನ್ಯತೆ ಹೊಂದಿದೆ. ಬೆಳಗಾವಿಯಲ್ಲಿ ಕನ್ನಡ ಮಾತನಾಡಿದ ನಿರ್ವಾಹಕನ ಮೇಲೆ ಹಲ್ಲೆಮಾಡಿದ ಎಂ.ಇ.ಎಸ್.ಮರಾಠಿ ಪುಂಡರ ವಿರುದ್ಧ ಹಾಗೂ ಕ.ರ.ಸಾ. ಸಂಸ್ಥೆಯ ನಿರ್ವಾಹಕನ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಪೊಲೀಸ್ ಅಧಿಕಾರಿ ನಡೆಯನ್ನು ಸಂಘಟನೆ ತೀವ್ರವಾಗಿ ಖಂಡಿಸಿದೆ.
ಕೂಡಲೇ ಎಂ.ಇ.ಎಸ್.ಮರಾಠಿ ಪುಂಡರನ್ನು ಬಂಧಿಸಿ ಹಾಗೂ ಸುಳ್ಳು ಪ್ರಕರಣ ದಾಖಲಿಸಿರುವ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಬೇಕೆಂದು. ಇಲ್ಲವಾದಲ್ಲಿ ಸಂಘಟನೆಯಿಂದ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷ ಸಿದ್ದುರೆಡ್ಡಿ ತಂಗಡಿಗಿ, ಕಲ್ಯಾಣ ಕರ್ನಾಟಕ ಸಂಚಾಲಕ ಶರಣು ಇಟಗಿ , ಕುಮಾರ್ ಎಸ್.ತೆಳಿಗೇರಿ ವಡಗೇರ , ಭೀಮು ನೇತೃತ್ವದಲ್ಲಿ ಮನವಿ ಸಲ್ಲಿಕೆ. ಈ ಸಂಧರ್ಭದಲ್ಲಿ ಶಿವು ಮಾನೇಗಾರ,ಸಾಬಣ್ಣ ಬಜೇಂತ್ರಿ,ಸಂಗು ನಲ್ಲ,ನವೀನ್ ಕುಮಾರ್, ಮರಿಲಿಂಗಪ್ಪ, ಬಸ್ಸು, ಕರ್ನಾಟಕ ರಕ್ಷಣಾ ವೇದಿಕೆಯ ಎಲ್ಲಾ ಕಾರ್ಯಕರ್ತರು ಬಾಗವಹಿಸಿದ್ದರು.
