ಕೆಕೆಆರ್‌ಡಿಬಿ ಯೋಜನೆಯ ಅಂದಾಜು 1.50ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ | ಗಣಪುರ ದಲ್ಲಿ ಬ್ರಿಡ್ಜ್ ಕಂ. ಬ್ಯಾರೇಜ್ ನಿರ್ಮಾಣಕ್ಕೆ 4.30 ಕೋಟಿ ಪ್ರಸ್ತಾವನೆ ಸಲ್ಲಿಕೆ | ಬಸ್ ತಂಗುದಾಣ ನಿರ್ಮಾಣಕ್ಕೆ ಕ್ರಮ | ಶಾಸಕ ಶರಣಗೌಡ ಕಂದಕೂರ ಹೇಳಿಕೆ

ಗುರುಮಠಕಲ್‌: ಹಿಂದೆ ಏನೇನೋ ಮಾತನಾಡುವವರಿಗೆ ಅಭಿವೃದ್ಧಿ ಕೆಲಸ ಮಾಡಿ ಉತ್ತರ ನೀಡುವೆ ಶಾಸಕ ಶರಣಗೌಡ ಕಂದಕೂರ ವಿರೋಧಿಗಳಿಗೆ ಟಾಂಗ್ ನೀಡಿದರು. ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ತಾಲೂಕಿನ ಗಣಪುರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ 2023-24ನೇ ಸಾಲಿನಡಿ ಮಂಜೂರಾದ ತಾಲೂಕಿನ ಕಂದಕೂರು ಗ್ರಾಮದ ಸ. ಹಿ. ಪ್ರಾ. ಶಾಲೆ ಕಂದಕೂರು ಶಾಲೆಯಲ್ಲಿ ಅಕರ ಅವಿಷ್ಕಾರ ಅನುಷ್ಠಾನ ಅಂದಾಜು ಮೊತ್ತ 46.52 ಲಕಗಳು ಯಲ್ಲೇರಿ ಗ್ರಾಮದ ಸ. ಪ್ರೌ ಶಾಲೆ ಯಲ್ಲೇರಿ ಶಾಲೆಯಲ್ಲಿ ಅಕ್ಷರ ಅವಿಷ್ಕಾರ ಅನುಷ್ಠಾನ 54.12 ಲಕ್ಷ, ಮತ್ತು 2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಪದೇಶಾಭಿವೃದ್ಧಿ ಮಂಡಳಿ ರವರ ಯೋಜನೆಯಡಿ ಗಿದ್ದಬಂಡಾ ತಾಂಡಾದ ಸರಕಾರಿ ಕಿರಿಯ ಪಾಥಮಿಕ ಶಾಲೆಗೆ 02 ಕೋಣೆಗಳ ನಿರ್ಮಾಣ 30.00 ಲಕ್ಷ, ಯಲ್ಲೇರಿ ಹಳ್ಳಿತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 1 ಕೋಣೆ ನಿರ್ಮಾಣ 15.00 ಲಕ್ಷಗಳ ಕಾಮಗಾರಿಗೆ ಅಡಿಗಲ್ಲಿ ನೆರವೇರಿಸಿ ಮಾತನಾಡಿದರು.

ಕ್ಷೇತ್ರದ ವಿದ್ಯುತ್ ಸರಬರಾಜು ಇಲ್ಲದ ವೇಳೆ ಬೆಳಕು ನೀಡಲು ಪ್ರತಿ ತಾಂಡ, ಗ್ರಾಮ ಹಾಗೂ ಪಟ್ಟಣ ಪದೇಶದಲ್ಲಿ ಒಟ್ಟು 270 ಸೋಲಾರ್ ಹೈಮಾಸ್ಟ್‌ ದೀಪಗಳನ್ನು ಅಳವಡಿಸಲಾಗುತ್ತಿದೆ. ರೈತರಿಗೆ 10 ತಾಸು ವಿಧಾನ ಸಭೆ ಅಧಿವೇಶನ ನಡೆಯಲಿದ್ದು, ಪಮುಖವಾಗಿ ಈ ಭಾಗದ ರೈತ ವಿದ್ಯುತ್ ಹಾಗೂ ಸೈದಾಮರ ಫ್ಯಾಕ್ಟರಿಗಳ ವಾಯುಮಾಲಿನ್ಯ ನಿಯಂತಣಕ್ಕೆ ಧ್ವನಿ ಎತ್ತುವೆ ಎಂದರು.

ಗ್ರಾಮೀಣ ಭಾಗದಲ್ಲಿ ಟಿಸಿ ಸುಟ್ಟರೇ ರೈತರೇ ಇಂತಿಷ್ಟು ಹಣ ಸಂಗಹಿಸಿ ಖರ್ಚು ಮಾಡಿ ಹಾಕಿಸಿಕೊಳ್ಳುವುದು ನಿಲಿಸಿ, ತೊಂದರೆಯಾದರೆ ತಮ್ಮ ಗಮನಕ್ಕೆ ತರಲು ತಿಳಿಸಿದರು.

ನಮ್ಮ ಭಾಗದಲ್ಲಿ ಅಮಾಯಕ ಜನ ತಿಳಿದೋ ತಿಳಿಯದೋ ದಂಡ ಕಟ್ಟುವುದು ನಿಲ್ಲುವವರೆಗೆ ಉದ್ಧಾರ ಆಗಲ್ಲ ಕೇತದ ಜನರ ಮನ ಮಗನಾಗಿ ಕೆಲಸ ಮಾಡುವೆ. ರೈತರಿಗೆ ತೊಂದರೆ ಯಾಗುವುದನ್ನು ತಪ್ಪಿಸಲು ಗುರುಮಠಕಲ್‌ನಲ್ಲಿಯೇ ಟಿಸಿ ರಿಪೇರಿ ಮಾಡಿಸುವ ವ್ಯವಸ್ಥೆ ಮಾಡಲಾಗಿದೆ. 2-3 ದಿನಗಳಲ್ಲಿ ಟಿಸಿ ಸಿಗಲಿದೆ ಎಂದರು.

ತಮಗೆ ಕಂದಕೂರ ಚಿಂತನಹಳ್ಳಿ ಹೇಗೋ ಗಣಪುರ ಕೂಡ ಅಷ್ಟೇ ಮುಖ್ಯ ಎಂದರು. ಕಂದಕೂರ ಜಿ.ಪಂ.ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗೆ ಕಾಮಗಾರಿಗಳಿಗೆ ಗಣಪುರದಲ್ಲಿ ಅಡಿಗಲ್ಲು ಸಮಾರಂಭ ನೆರವೇರಿಸಲಾಗುತ್ತಿದೆ ಎಂದರು.

86 ರಲ್ಲಿ ತಮ್ಮ ತಂದೆಯವರು ಜಿ.ಪಂ. ಚುನಾವಣೆ ಸ್ಪರ್ಧೆ ಮಾಡಿದ್ದರು. ಆಗಿನಿಂದ 2013 ಮತ್ತು 18ರ ಚುನಾವಣೆಯಲ್ಲಿ ಕಡಿಮೆ ಬೆಂಬಲ ನೀಡಿದ್ದರು, 2023 ರಲ್ಲಿ ಗಣಪುರ ಜನರು ಹೆಚ್ಚು ಲೀಡ್ ಕೊಟ್ಟಿದ್ದೀರಿ. ಅಣ್ಣ ತಮ್ಮ ಎಂದು ಆಶೀರ್ವಾದ ಮಾಡಿದ್ದೀರಿ, ಗಣಪುರ ಜನರ ಪ್ರೀತಿಗೆ ಖುಣಿಯಾಗಿರುವ ಎಂದರು.

ಪ್ರಾಸ್ತಾವಿಕ ಶಿವರಾಜ್ ಎಇಇ ಕೆಆರ್ ಐಡಿಎಲ್ ಮಾತನಾಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರಿಸಿದರು. ಈ ವೇಳೆ ತಹಸೀಲ್ದಾ‌ರ್ ಶಾಂತಗೌಡ ಬಿರಾದಾರ್, ಸುಭಾಷ ಕಟಕಟ್ಟಿ, ಜಿ.ತಮ್ಮಣ್ಣ, ಬಸಣ್ಣ ದೇವರಹಳ್ಳಿ, ರವೀಂದ್ರ ಮಾಜಿ ಸೈನಿಕ, ಸೂಗಪ್ಪ ಪಾಟೀಲ್‌, ಶರಣಗೌಡ ಎಲ್ಲೇರಿ, ಭೀಮರಾಯ, ಡಾ.ವಿರೇಶ ಜಾಕಾ, ಶಾಂತು ಜಾಧವ್, ರವಿಂದ ಗವಿನೋಳ, ಈಶ್ವರ ನಾಯಕ, ಮಲ್ಲಿಕಾರ್ಜುನ ಅರುಣಿ, ನಾಗೇಶ್ ಗದ್ದಿಗಿ, ಭೀಮರಾಯ ಗ್ರಾ.ಪಂ.ಸದಸ್ಯ. ಪಸಪುಲ ಪಿಡಿಓ, ಕಂದಕೂರ ಮುಖ್ಯ ಗುರು ಸಾವಿತ್ತಿ, ಅಬ್ದುಲ್‌ನಬಿ. ಸಿದ್ದರಾಜ ಪಾಟೀಲ್, ನರಸಿಂಗಪ್ಪ ಕಂಬಾರ. ಅಕ್ಬರ್ ಗೋಪಾಲಪುರ ಇತರರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!