ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ | 7150 ರೂ. ವಶಕ್ಕೆ

ಗುರುಮಠಕಲ್: ಪಟ್ಟಣದ ಹೊರವಲಯದ ಮತವಾಲೆ ಹುಸೇನ್ ದರ್ಗಾದ ಹತ್ತಿರದ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಏ.12 ರ ಸಂಜೆ ಜೂಜಾಟದಲ್ಲಿ ಹಣ ಪಣಕ್ಕಿಟ್ಟು ಆಡುತ್ತಿರುವ ಖಚಿತ ಮಾಹಿತಿ ಆಧರಿಸಿ ಪಿಐ ದೇವೀಂದ್ರಪ್ಪ ಧೂಳಖೇಡ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳಾದ ಶರಣಪ್ಪ, ಇಮ್ರಾನ್ , ತಿಪ್ಪಣ , ನರಸಿಂಹ, ನಾಗಲಿಂಗಪ್ಪ, ಬಸವರಾಜ, ಆನಂದರೆಡ್ಡಿ, ರವಿ ಪಾಪಡ್, ವಿನೋದ ಕುಮಾರ ಕಲಾಲ್, ಹುಸೇನಪ್ಪ ಮದ್ದೂರ ಇವರನ್ನು ವಶಕ್ಕೆ ಪಡೆದು ₹7150 ಹಾಗೂ ಇಸ್ಪೀಟ್ ಎಲೆ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!