ಜಿಲ್ಲಾದ್ಯಂತ ಹನುಮ ನಾಮ ಸ್ಮರಣೆ | ಪಟ್ಟಣದ ಲಕ್ಷ್ಮೀನಗರ ಬಡಾವಣೆಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿಗೆ ಭಕ್ತರು ವಿಶೇಷ ಪೂಜೆ | ಬೆಳಿಗ್ಗೆಯಿಂದ 108 ಬಾರಿ ಹನುಮಾನ ಚಾಲೀಸಾ ಪಾರಾಯಣ | ಕಾಕಲವಾರ ಬೇಸ್ ಆಂಜನೇಯ ದೇವಸ್ಥಾನ ವತಿಯಿಂದ ಭವ್ಯ ಶೋಭಾಯಾತ್ರೆ
ಗುರುಮಠಕಲ್/ ಯಾದಗಿರಿ: ಚೈತ್ರ ಶುದ್ಧ ಪೌರ್ಣಮಿಯ ನಿಮಿತ್ಯ ಪಟ್ಟಣದ ಎಲ್ಲ ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಬೆಳಿಗ್ಗೆಯಿಂದ ಆಂಜನೇಯಸ್ವಾಮಿ ಗೆ ಅಭಿಷೇಕ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಪಟ್ಟಣದ ಲಕ್ಷ್ಮೀನಗರ ಬಡಾವಣೆಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಂಜನೇಯಸ್ವಾಮಿ ಮತ್ತು ಮಹಾಲಕ್ಷ್ಮಿ ಮೂರ್ತಿಗಳಿಗೆ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು.
ಬೆಳಿಗ್ಗೆಯಿಂದ 108 ಬಾರಿ ಹನುಮಾನ ಚಾಲೀಸಾ ಪಾರಾಯಣ ನಡೆಯಿತು. ಪಟ್ಟಣದ ಕಾಕಲವಾರಬೇಸ್ ಆಂಜನೇಯ ದೇವಸ್ಥಾನ, ನಗರೇಶ್ವರ ದೇವಸ್ಥಾನ, ಗಡಿಮೊಹಲ್ಲಾ, ಪಂಚಾಯತ್ ಮೊಹಲ್ಲಾ , ಮಜ್ಜಿಗೇರಿ ಆಂಜನೇಯ ದೇವಸ್ಥಾನ ಸೇರಿದಂತೆ ವಿವಿಧೆಡೆ ಸಂಭ್ರಮದಿಂದ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿದರು.

ಕಾಕಲವಾರ ಗ್ರಾಮದ ಮಾರ್ಲಕುಂಟಾ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 11 ನೇ ವರ್ಷದ ತೊಟ್ಟಿಲೋತ್ಸವ ಂಗವಾಗಿ ವಿವಿಧ ಹೋಮಗಳು ಪೂಜಾ ವಿಧಾನ ಕಾರ್ಯಕ್ರಮ ನಡೆಯಿತು. ತೊನಸನಹಳ್ಳಿ ಗ್ರಾಮದ ಶ್ರೀ ರೇವಣಸಿದ್ಧ ಚರಂತೇಶ್ವರ ಸ್ವಾಮಿಗಳು ಆಗಮಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.

ಭವ್ಯ ಶೋಭಾಯಾತ್ರೆ: ಸಂಜೆ ಕಾಕಲವಾರ ಬೇಸ್ ಆಂಜನೇಯ ದೇವಸ್ಥಾನ ವತಿಯಿಂದ ಪ್ರಮುಖ ಬೀದಿಗಳಲ್ಲಿ ಆಂಜನೇಯ ಸ್ವಾಮಿ ಭವ್ಯ ಶೋಭಾಯಾತ್ರೆ ನಡೆಯಿತು. ಭಕ್ತಿ ಗೀತೆಗಳಿಗೆ ಯುವಕರು ಕುಣಿದು ಕುಪ್ಪಳಿಸಿದ್ದು ಕಂಡು ಬಂತು.
