ಪ್ರಧಾನಮಂತ್ರಿ ಮೋದಿ ಅವರೊಂದಿಗೆ ದೇಶದ ಭದ್ರತೆ ಸಲಹೆಗಾರ, ಗೃಹ ಸಚಿವರು, ವಿದೇಶಾಂಗ ಸಚಿವರು, ಸೇನಾ ಮುಖ್ಯಸ್ಥರ ಹಲವು ಸುತ್ತಿನ ಸಭೆ | ಪಾಕ್ ಉಗ್ರ ನೆಲೆಗಳ ಮೇಲೆ ಏರ್ ಸ್ಟ್ರೈಕ್
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ 26 ಅಮಾಯಕ ದೇಶವಾಸಿಗಳು ಪ್ರಾಣ ಕಳೆದುಕೊಂಡಿರು ವುದು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿ ಸಿದ್ದು, ದೇಶದ ಭದ್ರತೆ, ಸುರಕ್ಷೆ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಂಡಿದೆ.
9 ಪಾಕ್ ಉಗ್ರ ನೆಲೆಗಳ ಮೇಲೆ ಆಪರೇಷನ್ ‘ಸಿಂಧೂರ್’ ಮೂಲಕ ತಕ್ಕ ಪ್ರತ್ಯುತ್ತರ ಭಾರತೀಯ ಸೇನೆ ನೀಡಿದೆ ಎನ್ನುವುದು ಬುಧವಾರ ಬೆಳಗಿನ ಜಾವ ವರದಿಯಾಗಿದೆ. ಈ ಕ್ರಮ ಉಗ್ರರ ಸಂಹಾರಕ್ಕೆ ಪಣತೊಟ್ಟಂತೆ ಗೋಚರಿಸುತ್ತಿದೆ.
ಭಾರತ್ ಮಾತಾ ಕೀ ಜೈ, ವಂದೇ ಮಾತರಂ
ಮೊದಲು ಸಿಂಧು ನದಿಯ ನೀರು ಸ್ಥಗಿತ, ಪಾಕಿಸ್ತಾನ ಪ್ರಜೆಗಳ ಗಡಿ ಪಾರು ಸೇರಿದಂತೆ ಹಲವು ಅತ್ಯಂತ ಕಠೋರ ಕ್ರಮಗಳಿಗೆ ಮೋದಿ ಸರ್ಕಾರ ಮುಂದಾಗಿತ್ತು. ದೇಶದ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಎಂತಹ ಕ್ರಮಕ್ಕೂ ಸರ್ಕಾರ ಹಿಂಜರಿಯದಿರುವುದು ದೇಶದ ಬಲಿಷ್ಠ ನಾಯಕತ್ವ ಶಕ್ತಿಯನ್ನು ತೋರಿಸುತ್ತದೆ ಎಂದೇ ಹೇಳಬಹುದು.
ದೇಶದ ಭದ್ರತಾ ಸಲಹೆಗಾರ, ಗೃಹ ಸಚಿವರು, ವಿದೇಶಾಂಗ, ರಕ್ಷಣಾ ಸಚಿವರು ಪ್ರಧಾನ ಮಂತ್ರಿ ಅವರೊಂದಿಗೆ ಸಾಲು ಸಾಲು ಸಭೆ ನಡೆಸುತ್ತಿರುವುದು ಗಮನಿಸಿದರೇ ಪಾಪಿ ಪಾಕಿಸ್ತಾನ ಉಡೀಸ್ ಗೆ ಮುಹೂರ್ತ ಫಿಕ್ಸ್ ಎನ್ನುವ ಅಂಶ ಧೃಡವಾಗಿತ್ತು ಎನ್ನುವುದು ಇದೀಗ ಸ್ಪಷ್ಟವಾಗಿದೆ.
ಈಚೆಗೆ ಪಾಕಿ ವಿಮಾನಗಳು ಭಾರತದ ವಾಯು ಪ್ರದೇಶದಲ್ಲಿ ಹಾರಾಟ ಮಾಡುವುದು ನಿಷೇಧಿಸಿ, ಸರ್ಕಾರ ಕ್ರಮಕೈಗೊಂಡಿದ್ದು ಸ್ಮರಿಸಬಹುದು. ಉಗ್ರವಾದವನ್ನು ಬುಡದಿಂದ ಕೀಳುವ ಸಂಕಲ್ಪವನ್ನು ಸರ್ಕಾರ ಹೊಂದಿದೆ ಎನ್ನುವ ಮಾತುಗಳು ಕೇಂದ್ರ ಗೃಹ ಸಚಿವರು, ವಿದೇಶಾಂಗ ಸಚಿವರು ಒತ್ತಿ ಒತ್ತಿ ಹೇಳಿದ್ದು , ಗಮನಿಸಿದರೆ ಪಾಕಿಗಳಿ ತಕ್ಕ ಪಾಠ ಕಲಿಸಲು ದೊಡ್ಡ ಹೆಜ್ಜೆ ಇರಿಸುವ ಎಲ್ಲಾ ಲಕ್ಷಣಗಳು ಗೋಚರಿಸಿದ್ದವು.
ಪಾಕಿಗಳ ಉಗ್ರ ನೆಲೆಗಳನ್ನು ಗುರಿಯಾಗಿಸಿ, ಭಾರತೀಯ ಸೇನೆ ಪಾಪಿಗಳ ಉಗ್ರ ದಾಳಿಗೆ ಪ್ರತ್ಯುತ್ತರ ನೀಡಿದೆ ಎಂದು ವರದಿಯಾಗಿದೆ.
